ಮಂಗಳೂರು:ನೂತನ ಪ್ರತಿಬಂಧಕ (ಇಂಟರ್​ಸೆಪ್ಟರ್) ನೌಕೆ ‘ಚಾರ್ಲಿ 448’ನ್ನು ಬುಧವಾರ ಬೆಳಗ್ಗೆ ನವಮಂಗಳೂರು ಬಂದರಿನಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್, ತಟರಕ್ಷಣಾ ಪಡೆ ಹಿರಿಯ ಅಧಿಕಾರಿಗಳ ಸಮಕ್ಷಮ ಭಾರತೀಯ ತಟರಕ್ಷಣಾ ಪಡೆಗೆ ಸೇರ್ಪಡೆಗೊಳಿಸಲಾಯಿತು.
ಈ ವೇಳೆ ಮಾತನಾಡಿದ ವಿಜಯ ಭಾಸ್ಕರ್, ತಟರಕ್ಷಣಾ ಪಡೆ ರಾಜ್ಯದ ಕರಾವಳಿಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ಸುರಕ್ಷಿತ ವಾತಾವರಣಕ್ಕೆ ಕಾರಣವಾಗಿದೆ ಎಂದು ಶ್ಲಾಘಿಸಿದರು. ಚಾರ್ಲಿ-448 ಅತಿ ವೇಗದ ಕಾವಲು ನೌಕೆಯಾಗಿದ್ದು ನುಸುಳುಕೋರರು, ಕಳ್ಳಸಾಗಣೆಯನ್ನು ವಿಫಲಗೊಳಿಸಿ, ಮೀನುಗಾರರಿಗೆ ರಕ್ಷಣೆ ನೀಡುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡುವ ನಿರೀಕ್ಷೆಯಿದೆ ಎಂದರು.
ಎಲ್ ಆಂಡ್ ಟಿ ಶಿಪ್​ಯಾರ್ಡ್ ಹಿರಿಯ ಮಹಾಪ್ರಬಂಧಕ ನವನೀತ್ ಕೃಷ್ಣನ್ ಮಾತನಾಡಿ, ಮೊದಲು 36 ಇಂಟರ್​ಸೆಪ್ಟರ್ ನೌಕೆಗಳನ್ನು ನಿರ್ವಿುಸುವ ಹೊಣೆ ನಮಗೆ ಒಪ್ಪಿಸಲಾಗಿತ್ತು. ಬಳಿಕ ಹೆಚ್ಚುವರಿಯಾಗಿ 18 ನೌಕೆ ನಿರ್ವಣಕ್ಕೆ ಕೇಳಿಕೊಳ್ಳಲಾಗಿದ್ದು ಅದರಲ್ಲಿ 12ನೇ ನೌಕೆಯನ್ನು ಇಂದು ದೇಶಕ್ಕೆ ಸಮರ್ಪಣೆ ಮಾಡಲಾಗುತ್ತಿದೆ. ಇನ್ನುಳಿದ 6 ನೌಕೆಗಳು ನಿರ್ವಣಗೊಂಡು ಟ್ರಯಲ್ ಹಂತದಲ್ಲಿವೆ ಇವೆ ಎಂದು ವಿವರಿಸಿದರು.
ಕೋಸ್ಟ್​ಗಾರ್ಡ್ ಡಿಐಜಿ ಎಸ್.ಎಸ್.ಧಸೀಲ, ದ.ಕ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಎನ್​ಎಂಪಿಟಿ ಅಧ್ಯಕ್ಷ ಎ.ವಿ.ರಮಣ ಮುಂತಾದವರು ಹಾಜರಿದ್ದರು.
ಕೆಂಜಾರಿನಲ್ಲಿ ಅಕಾಡೆಮಿ ಕೆಂಜಾರಿನಲ್ಲಿ ತಟರಕ್ಷಣಾ ಪಡೆಯ ಅಕಾಡೆಮಿ ನಿರ್ವಣಕ್ಕೆ ರಾಜ್ಯ ಸರ್ಕಾರ ಈಗಾಗಲೇ 160 ಎಕರೆ ಜಾಗವನ್ನು ಗುರುತಿಸಿ ನೀಡಿದೆ. ಈ ಮೂಲಕ ಯುವಕರು ಅಕಾಡೆಮಿ ಸೇರಿ, ಉತ್ತಮ ತರಬೇತಿ ಪಡೆದು ರಾಷ್ಟ್ರಸೇವೆಗೆ ಪದಾರ್ಪಣೆ ಮಾಡುವಲ್ಲಿ ಸಹಕಾರಿಯಾಗಲಿದೆ ಎಂಬ ಆಶಯವನ್ನು ವಿಜಯ ಭಾಸ್ಕರ್ ವ್ಯಕ್ತಪಡಿಸಿದರು.
ಮೇಕ್ ಇನ್ ಇಂಡಿಯಾ:ಮುಂಬೈ ಮೇಲಿನ 26/11ರ ದಾಳಿ ಬಳಿಕ ತಟರಕ್ಷಣಾ ಪಡೆಯ ಜವಾಬ್ದಾರಿ ಹೆಚ್ಚಾಗಿದೆ. ಪ್ರಸ್ತುತ 145 ಹಡಗುಗಳು, 62 ವಿಮಾನಗಳನ್ನು ಹೊಂದಿರುವ ಸಮರ್ಥ ತಂಡ ನಮ್ಮದಾಗಿದೆ. ಎಲ್ ಆಂಡ್ ಟಿ ಶಿಪ್​ಯಾರ್ಡ್ ಸಹಭಾಗಿತ್ವದಲ್ಲಿ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಡಿ ಉತ್ತಮ ದರ್ಜೆಯ ಕಾವಲು ನೌಕೆಗಳನ್ನು ನಿರ್ವಿುಸಲಾಗುತ್ತಿದೆ.
ಇಂಟರ್​ಸೆಪ್ಟರ್ ನೌಕೆಯಷ್ಟೇ ಅಲ್ಲದೆ ಆಫ್​ಶೋರ್ ಕಾವಲು ನೌಕೆ, ಹೋವರ್​ಕ್ರಾಫ್ಟ್​ಗಳನ್ನೂ ದೇಶೀಯವಾಗಿ ಉತ್ಪಾದಿಸುವ ದಿನಗಳು ದೂರವಿಲ್ಲ ಎಂದು ಕೋಸ್ಟ್​ಗಾರ್ಡ್ ಪಶ್ಚಿಮ ವಲಯ ಕಮಾಂಡರ್ ಆನಂದ ಪ್ರಕಾಶ್ ಬಡೋಲಾ ತಿಳಿಸಿದರು.
27 ಮೀ. ಉದ್ದದ ನೌಕೆ:ಚಾರ್ಲಿ-448 ನೌಕೆ 27.80 ಮೀಟರ್ ಉದ್ದ, 106 ಟನ್ ತೂಕವಿರುವ ವಾಟರ್ ಜೆಟ್ ಪ್ರೊಪೆಲ್ಡ್ ನೌಕೆ 500 ನಾಟಿಕಲ್ ಮೈಲಿ ದೂರ ಚಲಿಸಬಲ್ಲದು. ಅತ್ಯಧಿಕ 45 ನಾಟ್ಸ್ ವೇಗ ಪಡೆಯಬಲ್ಲದು. ಅತ್ಯಾಧುನಿಕ ಜಲಸಂಚಾರ ಸಂವಹನ ವ್ಯವಸ್ಥೆ, ಅತಿವೇಗದ ಪ್ರತಿಬಂಧಕ ಕಾರ್ಯಾಚರಣೆ, ಸಮುದ್ರ ತೀರದಲ್ಲಿ ಹತ್ತಿರದ ಕಾವಲು ಕಾರ್ಯ, ಶೋಧ ಮತ್ತು ಪತ್ತೆ ಕಾರ್ಯ, ಸಾಗರೋತ್ತರ ಸರ್ವೆಕ್ಷಣಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಹುದು. ಆಳಸಮುದ್ರ, ಸಮುದ್ರ ತೀರ ಎರಡೂ ಕಡೆ ಕೆಲಸ ಮಾಡಬಲ್ಲದು. 12 ಸಿಬ್ಬಂದಿಯಿದ್ದು, ಅವರಿಗೆ ಅಸಿಸ್ಟಂಟ್ ಕಮಾಂಡೆಂಟ್ ಆಗಿ ಅಪೂರ್ವ ಶರ್ಮಾ ಕಾರ್ಯನಿರ್ವಹಿಸುವರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + three =
Remember me
