ಬೆಂಗಳೂರು:ನಗರದಲ್ಲಿ ಕೋವಿಡ್ ಸೋಂಕಿತರ ಮನೆ ಹಾಗೂ ಮನೆ ಸುತ್ತಲೂ 100 ಮೀಟರ್ ವ್ಯಾಪ್ತಿಯಲ್ಲಿ ಕಂಟೇನ್ಮೆಂಟ್ ಮಾಡುವ ಕಾಮಗಾರಿಯಲ್ಲಿ ಕೋಟ್ಯಂತರ ರೂ. ಹಗರಣ ನಡೆಸಲು ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಮುಂದಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕೋವಿಡ್ ಸೋಂಕು ಪತ್ತೆಯಾದ ವ್ಯಕ್ತಿಯ ವಾಸಸ್ಥಳದ ಅನುಗುಣವಾಗಿ ಬಿಬಿಎಂಪಿ ಕಂಟೇನ್ಮೆಂಟ್ ಮಾಡಲಾಗುತ್ತಿದೆ. ಈವರೆಗೆ ಒಟ್ಟು 34 ಸಾವಿರಕ್ಕೂ ಅಧಿಕ ಕಂಟೇನ್ಮೆಂಟ್ ಜಾರಿಗೊಳಿಸಲಾಗಿದ್ದು, 21 ಸಾವಿರಕ್ಕೂ ಅಧಿಕ 100 ಮೀ. ವ್ಯಾಪ್ತಿಯ ಕಂಟೇನ್ಮೆಂಟ್ ಪ್ರದೇಶಗಳಿವೆ. ಪ್ರತಿಯೊಂದು ಕಂಟೇನ್ಮೆಂಟ್ ವಿಧಿಸಲು ಪಾಲಿಕೆ ಇಂಜಿನಿಯರ್​ಗಳು ಡಿಸಿ ಬಿಲ್ (ಸಾದಿಲ್ವಾರು ಬಿಲ್) ಹೆಸರಿನಲ್ಲಿ ದಿನಕ್ಕೆ 70 ಸಾವಿರ ರೂ. ಬಾಡಿಗೆ ನಿಗದಿ ಪಡಿಸಿ, ಕಂಟೇನ್ಮೆಂಟ್ ಅವಧಿ ಮುಗಿಯುವ ವೇಳೆಗೆ (14 ದಿನಕ್ಕೆ) 8 ಲಕ್ಷ ರೂ.ವರೆಗೆ ಬಿಲ್​ಗೆ ಅನುಮತಿ ನೀಡಿ ಭ್ರಷ್ಟಾಚಾರ ಮಾಡುತ್ತಿರುವುದು ಕಂಡುಬರುತ್ತಿದೆ.
ಪೂರ್ವ ವಲಯದ ಭಾರತೀನಗರ ವಾರ್ಡ್​ನಲ್ಲಿ ವ್ಯಾಪ್ತಿಯಲ್ಲಿ ಒಬ್ಬ ವ್ಯಕ್ತಿಗೆ ಕರೊನಾ ಸೋಂಕು ಬಂದ ಹಿನ್ನೆಲೆಯಲ್ಲಿ ಗುತ್ತಿಗೆದಾರರಿಂದ ಬಿಬಿಎಂಪಿ ಕಂಟೈನ್ಮೆಂಟ್ ನಿರ್ವಿುಸಲು ಕೊಟೇಷನ್ ಪಡೆಯಲಾಗಿತ್ತು. ಮೂವರು ಗುತ್ತಿಗೆದಾರರು ಕೊಟೇಷನ್ ನೀಡಿದ್ದು, ಅದರಲ್ಲಿ ದಿನವೊಂದಕ್ಕೆ 69,140 ರೂ. ದರದಲ್ಲಿ ಕಂಟೇನ್ಮೆಂಟ್ ಮಾಡುವುದಕ್ಕೆ ಅನುಮತಿ ನೀಡಲಾಗಿದೆ. ಈ ಮೂಲಕ 14 ದಿನದ ಕಂಟೇನ್ಮೆಂಟ್​ಗೆ ಬಿಬಿಎಂಪಿ ಬರೋಬ್ಬರಿ 7,26,143 ರೂ. ಡಿಸಿ ಬಿಲ್ ಬಿಡುಗಡೆಗೆ ಶಿವಾಜಿನಗರದ ಉಪ ವಿಭಾಗದ ಇಇ ಅನುಮೋದನೆ ನೀಡಿದ್ದಾರೆ.
ಕಂಟೈನ್ಮೆಂಟ್​ಗೆ ಜಾರಿಗೊಳಿಸಲು ಅಧಿಕ ಮೊತ್ತದ ಬಾಡಿಗೆ ನಿಗದಿಪಡಿಸಿರುವುದು ಗಮನಕ್ಕೆ ಬಂದಿದೆ. ಹಣ ಬಿಡುಗಡೆ ಮಾಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ದರ ನಿಗದಿ ಮಾಡಿದ ನಂತರ ನಿರ್ಧಿಷ್ಟ ಮೊತ್ತ ನಿಗದಿ ಪಡಿಸಲಾಗುವುದು.
| ಎನ್. ಮಂಜುನಾಥ್ ಪ್ರಸಾದ್ ಬಿಬಿಎಂಪಿ ಆಯುಕ್ತ
ವಿಜಯವಾಣಿ ವರದಿಗೆ ಎಚ್ಚೆತ್ತುಕೊಳ್ಳದ ಪಾಲಿಕೆ
ವಿಜಯವಾಣಿ ಪತ್ರಿಕೆಯಲ್ಲಿ ಆ.3 ರಂದು ಮುಗಿಯದ ಕಂಟೇನ್ಮೆಂಟ್ ಯಡವಟ್ಟು ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಅದರಲ್ಲಿ ಸೋಂಕು ನಗರದಲ್ಲಿ ಕಾಣಿಸಿಕೊಂಡು 5 ತಿಂಗಳು ಕಳೆದರೂ ಕಂಟೇನ್ಮೆಂಟ್ ಜಾರಿಗೊಳಿಸಲು ಬಿಬಿಎಂಪಿ ದರ ನಿಗದಿ ಮಾಡಿಲ್ಲ ಎಂದು ಎಚ್ಚರಿಕೆ ನೀಡಲಾಗಿತ್ತು. ಆದರೆ, ಎಚ್ಚೆತ್ತು
ಕೊಳ್ಳದ ಪಾಲಿಕೆಗೆ ಹಣ ಪೋಲಾಗುವ ಸಂಕಷ್ಟ ಎದುರಾಗಿದೆ.
2 ಸಾವಿರ ಕೋಟಿ ರೂ. ಕಂಟೇನ್ಮೆಂಟ್ ಬಾಡಿಗೆ ?
ಪಾಲಿಕೆ ವ್ಯಾಪ್ತಿಯಲ್ಲಿ ಆ.14ರ ವೇಳೆಗೆ 33, 041 ಕಂಟೈನ್ಮೆಂಟ್ ಪ್ರದೇಶ ಜಾರಿಗೊಳಿಸಲಾಗಿದೆ. ಇದರಲ್ಲಿ 19,559 ಕಂಟೆನ್ಮೆಂಟ್​ಗಳನ್ನು ಮುಕ್ತಗೊಳಿಸಲಾಗಿದ್ದು, 13,482 ಸಕ್ರಿಯ ಕಂಟೇನ್ಮೆಂಟ್ ಜಾರಿಯಲ್ಲಿವೆ. ಒಟ್ಟು ಕಂಟೇನ್ಮೆಂಟ್​ಗೆ ಬಿಬಿಎಂಪಿ ಪ್ರತಿದಿನಕ್ಕೆ 69 ಸಾವಿರ ರೂ. ಬಾಡಿಗೆ ಆಧಾರದಲ್ಲಿ ಅಂದಾಜು 2,300 ಕೋಟಿ ರೂ. ಪಾವತಿ ಮಾಡಬೇಕಾಗುತ್ತದೆ. ಕೆಲವು ಪ್ರದೇಶದಲ್ಲಿ 28 ದಿನಗಳ ಕಂಟೇನ್ಮೆಂಟ್ ಮಾಡಲಾಗಿದ್ದು, ಈ ಮೊತ್ತ ಅಧಿಕವಾಗಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + nineteen =
Remember me
