|ರುದ್ರಣ್ಣ ಹರ್ತಿಕೋಟೆಬೆಂಗಳೂರು
ಕೇಂದ್ರ ಸರ್ಕಾರ ರೂಪಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ರಾಜ್ಯದಲ್ಲಿ ಭರದ ಸಿದ್ಧತೆ ನಡೆಯುತ್ತಿದ್ದರೆ, ಇನ್ನೊಂದೆಡೆ ಉನ್ನತ ಶಿಕ್ಷಣದ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ. ಉನ್ನತ ಹಾಗೂ ತಾಂತ್ರಿಕ ಶಿಕ್ಷಣಕ್ಕೆ ಕಳೆದ ಎಂಟು ವರ್ಷಗಳಲ್ಲಿ ಬಜೆಟ್​ನ ಅನುದಾನ ಪ್ರಮಾಣ ಹೆಚ್ಚಾಗಿಲ್ಲ. ಮೂಲಸೌಕಯರ್åದ ಕೊರತೆ ಅಗಾಧವಾಗಿರುವ ಜತೆಯಲ್ಲೇ ಉನ್ನತ ಶಿಕ್ಷಣಕ್ಕೆ ನೋಂದಣಿಯಾಗುವವರ ಪ್ರಮಾಣದಲ್ಲಿ ದಕ್ಷಿಣ ಭಾರತದಲ್ಲಿ ಕೊನೆಯ ಸ್ಥಾನದಲ್ಲಿದೆ.
ಮೂಲಸೌಕರ್ಯ ಕೊರತೆ ನೀಗಿಸಲು ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಲಿರುವ ಬಜೆಟ್​ನತ್ತ ಶೈಕ್ಷಣಿಕ ವಲಯದ ನೋಟ ಬೀರಿದೆ. ಪ್ರಗತಿಪರ, ಉತ್ತಮ ಆಡಳಿತಕ್ಕೆ ಹೆಸರಾಗಿರುವ ರಾಜ್ಯದಲ್ಲಿಯೇ ಉನ್ನತ ಶಿಕ್ಷಣದ ಮೌಲ್ಯ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಅದನ್ನು ಮೇಲಕ್ಕೆತ್ತುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಅದಕ್ಕಾಗಿಯೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಲ್ಲಿ ಮುಂಚೂಣಿಯಲ್ಲಿದೆ.
ಎಷ್ಟಿದೆ ನೋಂದಣಿ?:ಉನ್ನತ ಶಿಕ್ಷಣಕ್ಕೆ ನೋಂದಣಿಯಾಗುವವರ ಪ್ರಮಾಣದಲ್ಲಿ ರಾಜ್ಯ 13 ನೇ ಸ್ಥಾನದಲ್ಲಿರುವುದು ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ. ಅದರಲ್ಲೂ ದಕ್ಷಿಣದ ರಾಜ್ಯಗಳ ಪೈಕಿ ಕರ್ನಾಟಕ ನೆರೆಯ ರಾಜ್ಯಗಳಿಗಿಂತ ಸಾಕಷ್ಟು ಹಿಂದುಳಿದಿದೆ. ಉನ್ನತ ಶಿಕ್ಷಣಕ್ಕೆ ನೋಂದಣಿಯಾಗುವ ಮಕ್ಕಳ ಪ್ರಮಾಣದಲ್ಲಿ ಪುಟ್ಟ ರಾಜ್ಯ ಸಿಕ್ಕಿಂ ಮೊದಲ ಸ್ಥಾನದಲ್ಲಿರುವುದು ವಿಶೇಷ. ರಾಜ್ಯದಲ್ಲಿ ಶೇ.31.58 ವಿದ್ಯಾರ್ಥಿಗಳು, ಶೇ.32.80 ವಿದ್ಯಾರ್ಥಿನಿಯರು ನೋಂದಣಿಯಾಗುತ್ತಿದ್ದಾರೆ. ಅದೇ ಸಿಕ್ಕಿಂನಲ್ಲಿ ಶೇ.83.60 ವಿದ್ಯಾರ್ಥಿಗಳು ಹಾಗೂ ಶೆ.67.60 ವಿದ್ಯಾರ್ಥಿನಿಯರು ನೋಂದಣಿಯಾಗಿದ್ದಾರೆ.
ಸರ್ಕಾರಿ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಮೂಲ ಸೌಕರ್ಯದ ಕೊರತೆ ತುಂಬಿಕೊಳ್ಳ ಬೇಕಾಗಿದೆ. ಖಾಸಗಿ ಕಾಲೇಜುಗಳಿಗೆ ಸ್ಪರ್ಧೆ ನೀಡುವ ಮಟ್ಟಿಗೆ ಸಜ್ಜು ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ. ಕೊರತೆ ನೀಗಿಸಲು ಹಣದ ಅಗತ್ಯವಿದೆ.
|ಡಾ. ಸಿ.ಎನ್. ಅಶ್ವತ್ಥನಾರಾಯಣಉನ್ನತ ಶಿಕ್ಷಣ ಸಚಿವ
ಕೊರತೆ ಅಜಗಜಾಂತರ:ಉನ್ನತ ಶಿಕ್ಷಣದಲ್ಲಿ ಕಾಲೇಜು ಹಾಗೂ ತಾಂತ್ರಿಕ ಶಿಕ್ಷಣ ಬರುತ್ತದೆ. ಎರಡು ಇಲಾಖೆಗಳ ಸರ್ಕಾರಿ ಕಾಲೇಜುಗಳ ಅಗತ್ಯ ಮೂಲಸೌಕರ್ಯದಲ್ಲಿ ಅಜಗಜಾಂತರ ವ್ಯತ್ಯಾಸಗಳಿವೆ. ಅಗತ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಕಟ್ಟಡ, ಪ್ರಯೋಗಾಲಯ, ಪೀಠೋಪಕರಣ, ಗ್ರಂಥಾಲಯ, ಪುಸ್ತಕ, ಶೌಚಗೃಹ ಇವೆ. ರಾಜ್ಯ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಅನುದಾನ ಒದಗಿಸಿದರೆ ಮಾತ್ರ ಕೊರತೆ ತುಂಬಿಕೊಂಡು ಉತ್ತಮವಾದ ಉನ್ನತ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ. ಇತ್ತೀಚೆಗೆ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಮೂಲಸೌಕರ್ಯದ ಕೊರತೆ ಬಗ್ಗೆ ಸಭೆ ನಡೆಸಿದ್ದರು. ಇದೀಗ ರಾಜ್ಯದ ಒಟ್ಟಾರೆ ಕೊರತೆಯ ಬಗ್ಗೆ ಬಜೆಟ್​ನಲ್ಲಿ ಹೆಚ್ಚಿನ ಅನುದಾನದ ನಿರೀಕ್ಷೆಯಲ್ಲಿದ್ದಾರೆ.
ಸರ್ಕಾರದ ಕಾಲೇಜುಗಳಲ್ಲಿ ಓದುವ ಮಕ್ಕಳು ಬಹುತೇಕವಾಗಿ ಬಡ ಕುಟುಂಬದಿಂದ ಬಂದವರಾಗಿರುತ್ತಾರೆ. ಅಂತಹ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಮೂಲಸೌಕರ್ಯದ ಕೊರತೆ ಮೊದಲು ತುಂಬಿಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಬಡವರ ಮಕ್ಕಳು ಒಳ್ಳೆಯ ಶಿಕ್ಷಣದಿಂದ ವಂಚಿತರಾಗುತ್ತಾರೆ ಹಾಗೂ ಖಾಸಗಿ ಶಾಲೆಗಳ ಮಕ್ಕಳ ಜತೆಗೆ ಸ್ಪರ್ಧೆ ಮಾಡಲಾಗುವುದಿಲ್ಲ. ಆ ನಿಟ್ಟಿನಲ್ಲಿ ಪ್ರಯತ್ನ ಆರಂಭವಾಗಿದೆ.
ಎಲ್ಲಿ, ಎಷ್ಟು ನೋಂದಣಿ?:ತಮಿಳುನಾಡಿನಲ್ಲಿ ಶೇ.51.50 ವಿದ್ಯಾರ್ಥಿಗಳು, ಶೇ.51 ವಿದ್ಯಾರ್ಥಿನಿಯರು, ಕೇರಳದಲ್ಲಿ ಶೇ.32.90 ವಿದ್ಯಾರ್ಥಿಗಳು ಹಾಗೂ ಶೇ.44.70 ವಿದ್ಯಾರ್ಥಿನಿಯರು, ತೆಲಂಗಾಣದಲ್ಲಿ ಶೇ.34.80 ವಿದ್ಯಾರ್ಥಿಗಳು ಹಾಗೂ ಶೇ. 36.40 ವಿದ್ಯಾರ್ಥಿನಿಯರು ಮತ್ತು ಆಂಧ್ರಪ್ರದೇಶದಲ್ಲಿ ಶೇ.38.30 ವಿದ್ಯಾರ್ಥಿಗಳು ಹಾಗೂ ಶೇ.32.70 ವಿದ್ಯಾರ್ಥಿನಿಯರು ಉನ್ನತ ಶಿಕ್ಷಣಕ್ಕೆ ನೋಂದಣಿಯಾಗುತ್ತಿದ್ದಾರೆ. ರಾಜ್ಯದಲ್ಲಿ ಉಡುಪಿ ಮೊದಲ ಸ್ಥಾನದಲ್ಲಿದ್ದರೆ, ಚಾಮರಾಜನಗರ ಕೊನೆಯ ಸ್ಥಾನದಲ್ಲಿದೆ.
ಯುದ್ಧಕ್ಕೆ ಹೆದರಿ ಯೂಕ್ರೇನ್​ನಿಂದ ಹೈದರಾಬಾದ್​ಗೆ ಬಂದ್ಲು ನವವಿವಾಹಿತೆ; ಅಲ್ಲಿ ಮದ್ವೆ, ಇಲ್ಲಿ ರಿಸೆಪ್ಷನ್​…

ಕೆಂಪುಕೋಟೆ ಮೇಲೆ ಭಗವಾಧ್ವಜ ಹಾರಿಸಿಯೇ ಸಿದ್ಧ; ಇದು ಬಿಜೆಪಿಯ ಸಂಕಲ್ಪ ಎಂದ ಶಾಸಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 10 =
Remember me
