|ಹರೀಶ್ ಬೇಲೂರುಬೆಂಗಳೂರು
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ, ಮೆಕ್ಕೆಜೋಳ ಹಾಗೂ ರಾಗಿ ಖರೀದಿಯಲ್ಲಿ ಭಾರಿ ಗೋಲ್‍ಮಾಲ್ ನಡೆದಿರುವ ವಿಚಾರ ಬಹಿರಂಗವಾಗಿದೆ. ಅಕ್ಕಿ ಗಿರಣಿ ಸಂಸ್ಥೆಗಳು ಹಾಗೂ ಖರೀದಿ ಏಜೆನ್ಸಿಗಳು, ರೈತರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಗುಳುಂ ಮಾಡಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಲು ಆಹಾರ ಇಲಾಖೆ ಆದೇಶಿಸಿದೆ. ಒಂದು ವೇಳೆ ಅಕ್ರಮ ನಡೆದಿರುವುದು ಸಾಬೀತಾದರೆ ತಪ್ಪಿತಸ್ಥರ ಜತೆಗೆ ರೈತರೂ ಸಂಕಷ್ಟಕ್ಕೆ ಸಿಲುಕುವುದು ನಿಶ್ಚಿತ.
ಅನ್ನಭಾಗ್ಯ ಯೋಜನೆಯಡಿ ಕಾರ್ಡ್:ದಾರರಿಗೆ ಪಡಿತರ ವಿತರಿಸುವ ಸಲುವಾಗಿ ರಾಜ್ಯ ಸರ್ಕಾರಕ್ಕೆ ಅಕ್ಕಿ, ಜೋಳ ಹಾಗೂ ರಾಗಿ ಸರಬರಾಜು ಮಾಡುವ ಜವಾಬ್ದಾರಿಯನ್ನು ಅಕ್ಕಿ ಗಿರಣಿದಾರರು ಹಾಗೂ ಖರೀದಿ ಏಜೆನ್ಸಿಗಳಿಗೆ ನೀಡಲಾಗಿದೆ. ರಾಜ್ಯದಲ್ಲಿ ನೂರಾರು ಅಕ್ಕಿ ಗಿರಣಿ ಸಂಸ್ಥೆಗಳಿದ್ದು, ಪ್ರತಿ ವರ್ಷ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಆಹಾರ ಧಾನ್ಯ ಖರೀದಿಸಿ ಸರ್ಕಾರಕ್ಕೆ ಲಕ್ಷಾಂತರ ಕ್ವಿಂಟಾಲ್ ಸರಬರಾಜು ಮಾಡುತ್ತವೆ. ಪ್ರತಿ ಕ್ವಿಂಟಾಲ್​ಗೆ ಕಮಿಷನ್ ನಿಗದಿಪಡಿಸಲಾಗಿದೆ. ಆದರೆ, ರೈತರಿಂದ ಆಹಾರ ಧಾನ್ಯ ಖರೀದಿಸಿರುವುದಾಗಿ ಸರ್ಕಾರಕ್ಕೆ ತಪ್ಪು ಲೆಕ್ಕ ಕೊಟ್ಟು ಕೋಟ್ಯಂತರ ರೂ. ವಂಚನೆ ಮಾಡಲಾಗಿದೆ.
2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕಡಿಮೆ ಪ್ರಮಾಣದಲ್ಲಿ ಆಹಾರ ಧಾನ್ಯ ಖರೀದಿಸಿ, ಹೆಚ್ಚು ಖರೀದಿಸಲಾಗಿದೆ ಎಂದು ಹಲವು ಏಜೆನ್ಸಿಗಳು ಸರ್ಕಾರಕ್ಕೆ ತಪು್ಪ ಮಾಹಿತಿ ನೀಡಿವೆ. ರೈತರಿಗೆ ಹಣದ ಆಮಿಷವೊಡ್ಡಿ ಅವರಿಂದ ಜಮೀನಿನ ಪಹಣಿ ಪಡೆದು ರೈತರ ಖಾತೆಗೆ ಸರ್ಕಾರದಿಂದ ಹಣ ಹಾಕಿಸಿಕೊಂಡಿವೆ. ಬಂದ ಹಣದಲ್ಲಿ ರೈತರಿಗೆ ಸ್ವಲ್ಪ ಕೊಟ್ಟು ಕೈ ತೊಳೆದುಕೊಂಡಿವೆ. ಭತ್ತ, ಬಿಳಿ ಜೋಳ ಹಾಗೂ ರಾಗಿ ಖರೀದಿಯಲ್ಲಿ ಮೋಸ ಮಾಡಲಾಗಿದೆ. ಕಳ್ಳಾಟದ ಜತೆಗೆ ಆಹಾರ ಧಾನ್ಯಗಳ ಗುಣಮಟ್ಟದ ಬಗ್ಗೆಯೂ ದೂರುಗಳು ಸಲ್ಲಿಕೆಯಾಗಿವೆ.
ತನಿಖೆಗೆ ಆದೇಶ:2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದ ರೈತರಿಂದ ಖರೀದಿಸಲಾಗಿದ್ದ ಭತ್ತ, ರಾಗಿ ಮತ್ತು ಬಿಳಿ ಜೋಳ ಧಾನ್ಯಗಳನ್ನು ಸಾರ್ವಜನಿಕ ವಿತರಣ ವ್ಯವಸ್ಥೆಯಡಿ ಕಾರ್ಡ್​ದಾರರಿಗೆ ಹಂಚಿಕೆ ಮಾಡಲಾಗಿತ್ತು. ಆದರೆ, ಈ ಧಾನ್ಯಗಳ ಬಗ್ಗೆ ಸಾಕಷ್ಟು ದೂರುಗಳ ಹಿನ್ನೆಲೆಯಲ್ಲಿ ಖರೀದಿ ಏಜೆನ್ಸಿಗಳು ಹಾಗೂ ಅಕ್ಕಿ ಗಿರಣಿಗಳು ಅಧಿಕೃತ ಉಗ್ರಾಣಗಳಲ್ಲಿ ದಾಸ್ತಾನು ಮಾಡಿರುವ ಆಹಾರ ಧಾನ್ಯಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಎಲ್ಲ ಜಿಲ್ಲೆಗಳ ಜಂಟಿ ಮತ್ತು ಉಪ ನಿರ್ದೇಶಕರಿಗೆ ಆಹಾರ ಇಲಾಖೆ ಆದೇಶಿಸಿದೆ.
ಅಕ್ರಮ ಬಯಲಿಗೆ ಬಂದಿದ್ದು ಹೇಗೆ?:ಇತ್ತೀಚಿನ ಪರಿಶೀಲನೆ ಸಂದರ್ಭದಲ್ಲಿ ಅಕ್ಕಿ ಗಿರಣಿಗಳು ಮತ್ತು ಏಜೆನ್ಸಿ ಖರೀದಿ ದಾರರು, ರೈತರಿಂದ ಖರೀದಿಸಿರುವ ಆಹಾರ ಧಾನ್ಯದ ಪ್ರಮಾಣಕ್ಕೂ ಹಾಗೂ ಸರ್ಕಾರಕ್ಕೆ ಸಲ್ಲಿಸಿರುವ ಅಂಕಿ ಅಂಶಗಳಿಗೂ ಭಾರಿ ವ್ಯತ್ಯಾಸ ಕಂಡುಬಂದಿದೆ. ಅಲ್ಲದೇ ಮೇ 10 ರಂದು ನಡೆದ ಅಧಿಕಾರಿಗಳ ಸಭೆಯಲ್ಲೂ ಅಕ್ರಮದ ಬಗ್ಗೆ ಸಾಕಷ್ಟು ದೂರುಗಳು ಕೇಳಬಂದಿವೆ. ರೈತರ ಹೆಸರಿನಲ್ಲಿ ಮೋಸ ಮಾಡಿರುವ ಬಗ್ಗೆ ಸಾಕ್ಷ್ಯ ಸಮೇತ ದೂರುಗಳು ಸಲ್ಲಿಕೆಯಾಗಿವೆ ಎಂದು ಮಾಹಿತಿ ಸಿಕ್ಕಿದೆ.
ಆಹಾರ ಧಾನ್ಯಗಳು ಎಫ್​ಎಕ್ಯೂ ಗುಣಮಟ್ಟವಿರಬೇಕು:ಕಳೆದ ಸಾಲಿನಲ್ಲಿ ಖರೀದಿಸಿರುವ ಭತ್ತ, ರಾಗಿ ಮತ್ತು ಬಿಳಿ ಜೋಳದ ದಾಸ್ತಾನನ್ನು ಅಧಿಕೃತ ಉಗ್ರಾಣಗಳಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ನಿಗದಿತ ಪ್ರಮಾಣದಲ್ಲಿ ಗೋಣಿಚೀಲಗಳಲ್ಲಿ ದಾಸ್ತಾನು ಇರಿಸಬೇಕು. ಜತೆಗೆ, ಖರೀದಿಸಿರುವ ಆಹಾರ ಧಾನ್ಯಗಳು ಎಫ್​ಎಕ್ಯೂ (ಫೇರ್ ಆವರೇಜ್ ಕ್ವಾಲಿಟಿ) ಗುಣಮಟ್ಟದಲ್ಲಿವೆ ಎಂಬುದನ್ನು ದೃಢೀಕರಿಸಬೇಕು. ಭತ್ತವನ್ನು ಸಂಗ್ರಹಿಸಿರುವ ಮಿಲ್​ಗಳು ವಿದ್ಯುತ್ ಮೀಟರ್ ರೀಡಿಂಗ್ ಮಾಹಿತಿ ಕಲೆ ಹಾಕಬೇಕು. ಆಹಾರ ಧಾನ್ಯಗಳ ದಾಸ್ತಾನಿನಲ್ಲಿ ವ್ಯತ್ಯಾಸ ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತಪಾಸಣಾ ಅಧಿಕಾರಿಗಳಿಗೆ ಇಲಾಖೆ ಆದೇಶಿಸಿದೆ.
ರೈತರೇ ಹುಷಾರ್:ಚಿಲ್ಲರೆ ಕಮಿಷನ್​ಗೆ ಆಸೆಪಟ್ಟು ಅಕ್ಕಿ ಗಿರಣಿ ಮಾಲೀಕರು ಹಾಗೂ ಖರೀದಿ ಏಜೆನ್ಸಿದಾರರೊಂದಿಗೆ ಜಮೀನಿನ ಪಹಣಿ ಮತ್ತು ಬ್ಯಾಂಕ್ ಖಾತೆಯನ್ನು ಹಂಚಿಕೊಳ್ಳಬೇಡಿ. ಆಮಿಷಕ್ಕೆ ಒಳಗಾಗಿ ಅವರ ಜತೆ ಕೈ ಜೋಡಿಸಿದರೆ ರೈತರೇ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.
ನಿಯಮ ಸಡಿಲಿಕೆ ಎಡವಟ್ಟು!:ಬೆಂಬಲ ಬೆಲೆ ಯೋಜನೆಯಡಿ ವಿಧಿಸಲಾಗಿದ್ದ ಕೆಲ ನಿಯಮಗಳನ್ನು ಸರ್ಕಾರ ಸಡಿಲಿಸಿರುವುದು ವಂಚನೆಗೆ ದಾರಿ ಮಾಡಿಕೊಟ್ಟಿದೆ. ಈ ಹಿಂದೆ ಭತ್ತ ಖರೀದಿಗೆ ಮಾಲೀಕರು ಬ್ಯಾಂಕ್​ನಲ್ಲಿ ಹಣ ಠೇವಣಿ ಇಡಬೇಕಿತ್ತು. ಇದರಿಂದ, ಭತ್ತ ಖರೀದಿಸಿದ ಬಗ್ಗೆ ನಿಖರ ಮಾಹಿತಿ ಸಿಗುತ್ತಿತ್ತು. ಆದರೀಗ 100 ರೂ. ಬಾಂಡ್ ಪೇಪರ್ ಕೊಟ್ಟು ಅಕ್ಕಿ ಗಿರಣಿಗಳ ಸ್ಥಳ ನಮೂದಿಸಿದರೆ ಸಾಕು ಖರೀದಿಸಲು ಅವಕಾಶ ನೀಡಲಾಗುತ್ತದೆ.
1.38 ಲಕ್ಷ ಮೆಟ್ರಿಕ್ ಟನ್ ಅಕ್ಕಿ
ರಾಜ್ಯದಲ್ಲಿ ಬೆಂಬಲ ಬೆಲೆ ಅಡಿ 54,995 ರೈತರಿಂದ 2,06,234 ಮೆಟ್ರಿಕ್ ಟನ್ ಭತ್ತ, 2,06,465 ರೈತರಿಂದ 4.74 ಮೆಟ್ರಿಕ್ ಟನ್ ರಾಗಿ ಹಾಗೂ 13,640 ರೈತರಿಂದ 80,738 ಮೆಟ್ರಿಕ್ ಟನ್ ಬಿಳಿ ಜೋಳ ಖರೀದಿಸಲಾಗಿದೆ ಎಂದು ಇಲಾಖೆ ನೀಡಿರುವ ಅಂಕಿ ಅಂಶಗಳಿಂದ ತಿಳಿದುಬಂದಿದೆ. ರೈತರಿಂದ ಖರೀದಿಸಿರುವ ಶೇ.67 ಭತ್ತವನ್ನು ಮಿಲ್​ನಲ್ಲಿ ಅಕ್ಕಿ ಮಾಡಿ ಕಾರ್ಡ್​ದಾರರಿಗೆ ಹಂಚಿಕೆ ಮಾಡಲಾಗುತ್ತದೆ. ಈ ಬಾರಿ 1.38 ಲಕ್ಷ ಮೆಟ್ರಿಕ್ ಟನ್ ಮಿಲ್ ಅಕ್ಕಿ ದೊರೆಯುವ ಸಾಧ್ಯತೆಯಿದೆ ಎಂದು ಇಲಾಖೆ ನಿರೀಕ್ಷಿಸಿದೆ.
ಅಕ್ಕಿ ಗಿರಣಿಗಳು ಮತ್ತು ಏಜೆನ್ಸಿ ಖರೀದಿದಾರರು ರೈತರಿಂದ ಖರೀದಿಸಿರುವ ಪ್ರಮಾಣಕ್ಕೂ, ಸರ್ಕಾರಕ್ಕೆ ಸಲ್ಲಿಸಿರುವ ಅಂಕಿ ಅಂಶಗಳಿಗೂ ವ್ಯತ್ಯಾಸ ಕಂಡುಬಂದಿರುವ ಬಗ್ಗೆ ಮೇ 10 ರಂದು ನಡೆದ ಸಭೆಯಲ್ಲಿ ದೂರುಗಳು ಕೇಳಿಬಂದಿವೆ. ಹಾಗಾಗಿ, ಉಗ್ರಾಣದಲ್ಲಿರುವ ಆಹಾರ ಧಾನ್ಯಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಆಹಾರ ಈಗಾಗಲೆ ಆದೇಶಿಸಿದೆ.
|ಶ್ಯಾಮ್ಲಾ ಇಕ್ಬಾಲ್ಆಹಾರ ಇಲಾಖೆ ಆಯುಕ್ತೆ
ಎಟಿಎಂಗೆ ತುಂಬಬೇಕಿದ್ದ 75 ಲಕ್ಷ ರೂ. ದೋಚಿದ ದುರುಳರು; ಹೆದರಿದ ವ್ಯಾನ್ ಚಾಲಕನನ್ನು ಕೊಂದೇ ಬಿಟ್ಟರು!

ಕರೊನಾ ಲಸಿಕೆ ಹಾಕಿಸಿಕೊಳ್ಳುವ ಕುರಿತು ನಿಮ್ಮಲ್ಲಿ ಈ ಗೊಂದಲಗಳಿವೆಯೇ? ಹಾಗಿದ್ದರೆ ಇಲ್ಲಿವೆ ನೋಡಿ ಸ್ಪಷ್ಟೀಕರಣ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 12 =
Remember me
