|ಮಂಜು ಬನವಾಸೆಹಾಸನ
ಹೇಮಾವತಿ ಜಲಾಶಯ ಸಂತ್ರಸ್ತರ ಪುನರ್ವಸತಿ ಯೋಜನೆ ದುರ್ಬಳಕೆ ಮಾಡಿಕೊಂಡು ಸಾವಿರಾರು ಎಕರೆ ಭೂಮಿ ಕಬಳಿಸಲು ನಡೆದಿರುವ ಬೃಹತ್ ಷಡ್ಯಂತ್ರ ಬೆಳಕಿಗೆ ಬಂದಿದೆ. ಗೆಜೆಟ್ ಅಧಿಸೂಚನೆಯನ್ನೇ ನಕಲು ಮಾಡಿ, ಖೊಟ್ಟಿ ದಾಖಲಾತಿ ಸೃಷ್ಟಿಸಿ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ ಬಜೆಟ್​ಗೆ ಸರಿದೂಗಿಸುವಷ್ಟು ಮೊತ್ತದ ನಷ್ಟ ಮಾಡಲಾಗಿದೆ. ರಾಜ್ಯದ ಅತಿದೊಡ್ಡ ಭೂ ಅಕ್ರಮ ಈಗ ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. 1970ರಲ್ಲಿ ಅಂದಿನ ಜಿಲ್ಲಾಧಿಕಾರಿ ಗೆಜೆಟ್ ಅಧಿಸೂಚನೆ ಹೊರಡಿಸಿ ಸಕಲೇಶಪುರ ತಾಲೂಕಿನಲ್ಲಿ 1,050 ಎಕರೆ ಭೂಮಿಯನ್ನು ಹೇಮಾವತಿ ಜಲಾಶಯ ಯೋಜನೆ ಮುಳುಗಡೆ ಸಂತ್ರಸ್ತರ ಪುನರ್ವಸತಿಗಾಗಿ ಹಂಚಿಕೆ ಮಾಡಲು ಕಾಯ್ದಿರಿಸಿದ್ದರು. ಆದರೆ ಈಗ ಕಾದಿರಿಸಿರುವ ಭೂಮಿ 31,149 ಎಕರೆ ಎಂದು ತೋರಿಸಿರುವ ನಕಲಿ ಗೆಜೆಟ್ ಅಧಿಸೂಚನೆ ಪತ್ತೆಯಾಗಿದೆ. ಹೋಬಳಿ ಹಾಗೂ ಗ್ರಾಮವಾರು ಸರ್ವೆ ನಂಬರ್ ಸಹಿತ ದಾಖಲೆ ಸೃಷ್ಟಿಸಲಾಗಿದೆ. ಅದನ್ನು ಆಧರಿಸಿ ಸಕಲೇಶಪುರ ತಾಲೂಕಿನ ವಿವಿಧ ಹೋಬಳಿಗಳಲ್ಲಿನ ಸರ್ಕಾರಿ ಭೂಮಿಯ ಪಹಣಿಗಳಲ್ಲಿ ‘ಹೇಮಾವತಿ ಜಲಾಶಯ ಯೋಜನೆ ಸಂತ್ರಸ್ತರಿಗೆ ಕಾಯ್ದಿರಿಸಿರುವ ಜಮೀನು’ ಎಂದು ನಮೂದು ಮಾಡಿ, ಬೇರೆಯವರಿಗೆ ಭೂಮಿ ಮಂಜೂರಾಗದಂತೆ ತಡೆಯಲಾಗಿದೆ ಎಂಬ ಅಂಶ ತನಿಖಾಧಿಕಾರಿ ಸಿಇಎನ್ ಪೊಲೀಸ್ ಠಾಣೆಯ ಇನ್​ಸ್ಪೆಕ್ಟರ್ ದೇವೇಂದ್ರಪ್ಪ ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿದೆ.
ರಾಜಕಾರಣಿಗಳ ಪಾಲು:ಸಾವಿರಾರು ಎಕರೆ ಸರ್ಕಾರಿ ಭೂಮಿಯನ್ನು ಕಬಳಿಸಲಾಗಿದೆ ಎಂದು ಹುಯಿಲೆದ್ದರೂ ಜಿಲ್ಲೆಯ ಪ್ರಮುಖ ರಾಜಕಾರಣಿಗಳು ಈ ವಿಷಯವಾಗಿ ಧ್ವನಿ ಎತ್ತುತ್ತಲೇ ಇಲ್ಲ. ಎಚ್​ಆರ್​ಪಿ ಸಂತ್ರಸ್ತರ ಭೂ ಹಂಚಿಕೆ ಕಡತಗಳನ್ನು ಪರಿಶೀಲಿಸಿದಾಗ ನೂರಾರು ಎಕರೆಯ ಮಾಲೀಕತ್ವ ಜಿಲ್ಲೆಯ ಹಿರಿಯ, ಪ್ರಭಾವಿ ರಾಜಕಾರಣಿಗಳು, ಅವರ ಕುಟುಂಬ ಸದಸ್ಯರು ಮತ್ತು ಆಪ್ತರ ಪಾಲಾಗಿರುವುದು ಖಚಿತವಾಗಿದೆ. ಮೇಲ್ನೋಟಕ್ಕೆ ಅವರೆಲ್ಲ ಮೂಲ ಮಂಜೂರುದಾರರಿಂದ ಭೂಮಿ ಖರೀದಿಸಿದ್ದಾರೆ ಎಂದು ದಾಖಲೆಗಳು ಹೇಳಿದರೂ ಆಳಕ್ಕಿಳಿದು ನೋಡಿದಾಗ ಮೂಲ ಸಂತ್ರಸ್ತರಿಗೆ ತಮ್ಮ ಹೆಸರಿಗೆ ಭೂಮಿ ಹಂಚಿಕೆಯಾಗಿದೆ ಎನ್ನುವುದೇ ಗೊತ್ತಿಲ್ಲದ ಪ್ರಕರಣಗಳೂ ಕಂಡುಬಂದಿವೆ. ರಾಜಕಾರಣಿಗಳು ಮಾತ್ರವೇ ಅಲ್ಲದೆ ಜಿಲ್ಲೆಯ ಹಲವು ಪ್ರತಿಷ್ಠಿತರು, ಉದ್ಯಮಿಗಳೂ ಎಚ್​ಆರ್​ಪಿ ಭೂಮಿ ಮಾಲೀಕರ ಪಟ್ಟಿಯಲ್ಲಿದ್ದಾರೆ.
ಕಡತಗಳೇ ನಾಪತ್ತೆ:ವಿಶೇಷ ಭೂ ಸ್ವಾಧೀನಾಧಿಕಾರಿ (ಎಸ್​ಎಲ್​ಎಒ) ಕಚೇರಿಯಲ್ಲಿರಬೇಕಿದ್ದ 414 ಕಡತಗಳು ನಾಪತ್ತೆಯಾಗಿವೆ. ಬಹುತೇಕ ಮಂಜೂರಾತಿ ಆದೇಶಗಳನ್ನು ಮಾಡುವಾಗ ಸಂತ್ರಸ್ತರಿಂದ ಸಂಬಂಧಿಸಿದ ಮೂಲ ದಾಖಲಾತಿಗಳನ್ನೇ ಪಡೆದಿಲ್ಲ. ಜೆರಾಕ್ಸ್ ಪ್ರತಿ ಮುಂದಿಟ್ಟುಕೊಂಡೇ ಭೂಮಿ ಹಂಚಿಕೆ ಮಾಡಲಾಗಿದೆ. 2019ರಲ್ಲಿ ಎಚ್​ಆರ್​ಪಿ ಸಂತ್ರಸ್ತರ ಭೂಮಿ ಹಂಚಿಕೆಯಲ್ಲಿ ಅಕ್ರಮದ ವಾಸನೆ ಬಡಿದಾಗ ಎಸ್​ಎಲ್​ಒ ಆಗಿದ್ದ ಕ್ಯಾಪ್ಟನ್ ಶ್ರೀನಿವಾಸಗೌಡ ತಾವೇ ಹಗರಣ ಬೆಳಕಿಗೆ ತಂದಂತೆ ಬಿಂಬಿಸಿಕೊಂಡಿದ್ದರು. ಆದರೆ ಅವರೇ, ಒಮ್ಮೆ ಭೂಮಿ ಮಂಜೂರಾತಿ ಪಡೆದಿದ್ದ 60 ಜನರ ಹೆಸರಲ್ಲಿ ನಕಲಿ ದಾಖಲೆಗಳನ್ನಿಟ್ಟುಕೊಂಡು 240 ಎಕರೆ ಭೂಮಿ ಹಂಚಿಕೆ ಮಾಡಿರುವುದು ಪತ್ತೆಯಾಗಿದೆ.
120 ಕೋಟಿ ರೂಪಾಯಿ ನಷ್ಟ:837 ಕಡತಗಳನ್ನು ವಿಲೇವಾರಿ ಮಾಡುವಾಗ ಸುಮಾರು 10 ಸಾವಿರ ಎಕರೆ ಭೂಮಿಯಲ್ಲಿ ಬೆಳೆದಿರುವ ಮರಗಳ ಮಾಲ್ಕೆ ಪ್ರಕ್ರಿಯೆಯನ್ನೇ ನಡೆಸದೆ ಭೂಮಿ ಹಂಚಿಕೆ ಮಾಡಲಾಗಿದೆ. ಅವುಗಳಲ್ಲಿ 14 ಕಡತಗಳು ದುರಸ್ತ್ ಆಗಿ ಹೊಸ ಸರ್ವೆ ನಂಬರ್ ಪಡೆಯಲಾಗಿದೆ. ಮರಮಾಲ್ಕೆ ನಡೆಸದೆ ನೀಡಿರುವ ಭೂಮಿಯಲ್ಲಿನ ಮರಗಳ ಮೌಲ್ಯ ಸುಮಾರು 120-140 ಕೋಟಿ ರೂ. ಆಗಬಹುದು ಎಂದು ಊಹಿಸಲಾಗಿದ್ದು, ಇಷ್ಟು ಪ್ರಮಾಣದ ಸರ್ಕಾರಿ ಆದಾಯವನ್ನು ಖೋತಾ ಮಾಡಲಾಗಿದೆ.
ನಾಲ್ವರಿಂದ ಕರ್ತವ್ಯಲೋಪ:2016ರಿಂದ 2019ರವರೆಗೆ ಹೇಮಾವತಿ ಜಲಾಶಯ ಯೋಜ ನೆಯ ವಿಶೇಷ ಭೂ ಸ್ವಾಧೀನಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದ ಕೆಎಎಸ್ ಅಧಿಕಾರಿಗಳಾದ ವಿಜಯಾ, ಬಿ.ಎ. ಜಗದೀಶ್, ರವಿಚಂದ್ರ ನಾಯಕ್ ಹಾಗೂ ಕ್ಯಾಪ್ಟನ್ ಶ್ರೀನಿವಾಸ ಗೌಡ ಅವಧಿಯಲ್ಲಿ ಅಕ್ರಮವಾಗಿ ಭೂ ಮಂಜೂರಾತಿ ನೀಡಿರುವುದನ್ನು ತನಿಖಾಧಿಕಾರಿ ಪತ್ತೆಹಚ್ಚಿದ್ದಾರೆ. ಜತೆಗೆ ಎಲ್ಲ 2,360 ಕಡತಗಳ ಸುಮಾರು 9440 ಎಕರೆ ಭೂಮಿ ಮಂಜೂರಾತಿ ಆದೇಶ ರದ್ದುಪಡಿಸಲು ಶಿಫಾರಸು ಮಾಡಿದ್ದಾರೆ.
ಭೂ ಮಾಫಿಯಾ ಕೈವಾಡ:ಸಾವಿರಾರು ಎಕರೆ ಸರ್ಕಾರಿ ಭೂಮಿಯ ಮಾಲೀಕತ್ವವನ್ನು ಅಕ್ರಮವಾಗಿ ಪಡೆದುಕೊಳ್ಳುವುದರ ಹಿಂದೆ ಸರ್ವೆಯರ್​ಗಳು, ರಾಜಸ್ವ ನಿರೀಕ್ಷಕರು, ತಹಸೀಲ್ದಾರರು ಹಾಗೂ ಎಸ್​ಎಲ್​ಎಒಗಳು ದುಷ್ಟಕೂಟವೊಂದರ ಭಾಗವಾಗಿ ಕಾರ್ಯನಿರ್ವಹಿಸಿದ್ದು, ನಾಲ್ಕು ಎಕರೆ ಭೂ ಮಂಜೂರಾತಿಗೆ ತಲಾ 5 ಲಕ್ಷ ರೂ. ಲಂಚ ನೀಡಿರುವುದಾಗಿ ಮಧ್ಯವರ್ತಿಗಳು ಒಪ್ಪಿಕೊಂಡಿದ್ದಾರೆ. ಒಂದು ಬಾರಿ ಲಂಚ ಕೈ ಸೇರಿದರೆ ಮಧ್ಯವರ್ತಿ ಹೇಳಿದ ಹಳೇ ದಿನಾಂಕದಲ್ಲಿ ಭೂಮಿ ಮಂಜೂರು ಮಾಡಿರುವುದಾಗಿ ಎಸ್​ಎಲ್​ಎಒ ಜ್ಞಾಪನಾ ಪತ್ರ ನೀಡುವುದು, ಅದು ಸಿದ್ಧವಾಗುವ ಮೊದಲೇ ತಹಸೀಲ್ದಾರ್ ಕಚೇರಿಯಲ್ಲಿ ಹಾಲಿ ದಿನಾಂಕಕ್ಕೆ ಪಹಣಿ ಸಿದ್ಧಪಡಿಸಿಟ್ಟುಕೊಂಡು ಕಾಯಲಾಗುತ್ತಿತ್ತು ಎನ್ನುವ ಅಂಶವೂ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಆಲೂರು ತಾಲೂಕಿನ ಹರಿಹಳ್ಳಿಯಲ್ಲಿ ನಮ್ಮ ಕುಟುಂಬದ 80 ಎಕರೆ ಜಮೀನು ಹೇಮಾವತಿ ಜಲಾಶಯ ಯೋಜನೆಗೆ ಮುಳುಗಡೆಯಾಗಿತ್ತು. ಆಗ ನೀಡಿದ ಮುಳುಗಡೆ ಸರ್ಟಿಫಿಕೇಟ್ ಹಿಡಿದು ಸುಮಾರು 50 ವರ್ಷಗಳಿಂದ ಕಚೇರಿಗಳಿಗೆ ಅಲೆದರೂ 4 ಎಕರೆ ಪುನರ್ವಸತಿ ಭೂಮಿ ಮಂಜೂರು ಮಾಡಿಸಿಕೊಳ್ಳಲು ಆಗಿಲ್ಲ. ಆದರೆ ಒಂದಿಂಚು ಭೂಮಿಯನ್ನೂ ಕಳೆದುಕೊಳ್ಳದ ಪ್ರಭಾವಿಗಳು ಸಂತ್ರಸ್ತರಿಗೆ ಮೀಸಲಿಟ್ಟ ನೂರಾರು ಎಕರೆ ಭೂಮಿಯ ಮಾಲೀಕತ್ವ ದಕ್ಕಿಸಿಕೊಂಡಿದ್ದಾರೆ. ಈ ಬೃಹತ್ ಹಗರಣದ ಸಮಗ್ರ ತನಿಖೆ ನಡೆಸಿ ನಮ್ಮಂತಹ ನೈಜ ಸಂತ್ರಸ್ತರಿಗೆ ನ್ಯಾಯಯುತ ಪುನರ್ವಸತಿ ದೊರಕಿಸಬೇಕು.
|ಎಚ್.ಎಲ್. ವಿಜಯಕುಮಾರ್ ​ಶರ್ಮಎಚ್​ಆರ್​ಪಿ ಮುಳುಗಡೆ ಸಂತ್ರಸ್ತ
ಎಚ್​ಆರ್​ಪಿ ಭೂಮಿ ಹಂಚಿಕೆ ದಂಧೆಯಲ್ಲಿ ಭಾಗಿಯಾಗಿರುವವರು ಅತ್ಯಂತ ಪ್ರಭಾವಿಗಳಾಗಿದ್ದು, ಅಕ್ರಮ ಪತ್ತೆಹಚ್ಚಿ ಇನ್ನೇನು ಆರೋಪ ಪಟ್ಟಿ ಸಲ್ಲಿಸುವ ಸಿದ್ಧತೆಯಲ್ಲಿದ್ದ ತನಿಖಾಧಿಕಾರಿಯನ್ನೇ ಎತ್ತಂಗಡಿ ಮಾಡಿಸಿದ್ದಾರೆ. ಜಿಲ್ಲಾಧಿಕಾರಿ ಆರ್. ಗಿರೀಶ್, ಎಚ್​ಆರ್​ಪಿ ಭೂ ಹಂಚಿಕೆ ಅಕ್ರಮ ಆರೋಪಗಳ ಬಗ್ಗೆ ತನಿಖೆಗಾಗಿ ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ರಚಿಸಿದ್ದರು. ಅವರು ನೀಡಿದ ವರದಿ ಆಧರಿಸಿ 2019ರಲ್ಲಿ ಸಿಇಎನ್ ಪೊಲೀಸ್ ಠಾಣೆ ಇನ್ಸ್​ಪೆಕ್ಟರ್ ದೇವೇಂದ್ರಪ್ಪ ಅವರಿಗೆ ತನಿಖೆ ಹೊಣೆ ವಹಿಸಿದ್ದರು. ಸಹಾಯಕ ಸಿಬ್ಬಂದಿ ಇಲ್ಲದೆ ಒನ್​ವ್ಯಾನ್ ಆರ್ವಿುಯಂತೆ ಲಕ್ಷಾಂತರ ಪುಟಗಳ ಕಡತಗಳನ್ನು ಪರಿಶೀಲಿಸಿ, ತನಿಖೆ ನಡೆಸಿದ್ದ ಅವರು ಚಾರ್ಜ್​ಶೀಟ್ ಸಲ್ಲಿಸುವುದಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆ ಯಲ್ಲಿ ತಿಳಿಸಿದ ನಂತರ ಅವರ ವಿರುದ್ಧವೇ ಷಡ್ಯಂತ್ರ ಆರಂಭವಾಗಿತ್ತು. ಅವರು ರೈತರಿಂದಲೇ ಲಂಚ ಕೇಳಿದ್ದಾರೆ ಎಂದು ಆರೋಪಿಸಿ ಒತ್ತಡ ತಂದು ಚಾರ್ಜ್​ಶೀಟ್ ಸಲ್ಲಿಕೆಗೂ ಮುನ್ನವೇ ಅವರನ್ನು ವರ್ಗಾವಣೆ ಮಾಡಲಾಯಿತು. ಹೀಗಿದ್ದರೂ ಅವರು ಕರ್ತವ್ಯದಿಂದ ಬಿಡುಗಡೆ ಹೊಂದುವ ಮೊದಲು ಜಿಲ್ಲಾಧಿಕಾರಿಗೆ ಮಧ್ಯಂತರ ವರದಿ ಸಲ್ಲಿಸುವ ಮೂಲಕ ಅಕ್ರಮ ದಂಧೆಕೋರರಿಗೆ ಬಿಸಿ ಮುಟ್ಟಿಸಿದ್ದಾರೆ.
30 ಸಾವಿರ ಸಸಿಗಳನ್ನು ನೆಟ್ಟ ಮಹಾನ್​ ಪ್ರಕೃತಿಪ್ರೇಮಿ, ಅಂತರ್ಯಾಮಿ!

ದಯವಿಟ್ಟು ಬೇಜಾರ್ ಮಾಡ್ಕೋಬೇಡಿ: ಅಭಿಮಾನಿಗಳಲ್ಲಿ ನಟ ಶಿವರಾಜ​ಕುಮಾರ್​ ಮನವಿ

ಪ್ರಾಣಿಗಳ ಥರ ಕಾಡಿದ್ರು, ಒಬ್ರೂ ನೆರವಿಗೆ ಬರಲಿಲ್ಲ; ಇದು ಕೋಟ್ಯಧಿಪತಿ ಉದ್ಯಮಿಯ ಸಂಕಟದ ಕಥೆ..

ವಧುವಿಗೆ ಹತ್ತನೇ ಕ್ಲಾಸು, ವರನಿಗೆ 30 ವರ್ಷ; ಬಾಲ್ಯವಿವಾಹ ಮಾಡಿಸಿದವರೆಲ್ಲರ ಬಂಧನ..

ಕೋವಿಡ್​ನಿಂದ ಬಚಾವಾದರೂ ನೆಮ್ಮದಿ ಇಲ್ಲ; ಕಂಡುಬಂದಿದೆ ಮತ್ತೊಂದು ರೋಗ, ಬೋನ್​ ಡೆತ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
