ಬೆಂಗಳೂರು:ನಿನ್ನೆ ಫ್ರೀಡಂ ಪಾರ್ಕ್​ನಲ್ಲಿ ನಡೆದ ಸಿಎಎ ಮತ್ತು ಎನ್​ಆರ್​ಸಿ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಅಮೂಲ್ಯಾ ಲಿಯೋನಾ ಪ್ರಕರಣದಲ್ಲಿ ಹೊಸ ಟ್ವಿಸ್ಟ್​ ಸಿಕ್ಕಿದೆ. ಆರೊಪಿಯ ಬಗ್ಗೆ ಬೆಂಗಳೂರು ಮಹಾನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​ ಮೂರು ಡೌಟ್​ಗಳನ್ನು ಎತ್ತಿ ಹಿಡಿದಿದ್ದಾರೆ.
ಅಮೂಲ್ಯಾ ಲಿಯೋನಾ ಮೂಲತಃ ಹಿಂದೂ ಧರ್ಮದವಳಾಗಿದ್ದು ಆಕೆ ಕ್ರಿಶ್ಚಿಯನ್​ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ ಎನ್ನಲಾಗಿದೆ. ಮತಾಂತರವಾಗಿರುವ ಆಕೆಗೆ ಕ್ರಿಶ್ಚಿಯನ್​ ಸೇರಿ ಅಲ್ಪಸಂಖ್ಯಾತ ಧಾರ್ಮಿಕ ಸಂಸ್ಥೆಗಳ ಬೆಂಬಲವಿದೆ ಎಂದು ಮಾಹಿತಿ ಲಭಿಸಿದೆ.
ಅಮೂಲ್ಯ ಮೂಲತಃ ಚಿಕ್ಕಮಗಳೂರಿನ ಕೊಪ್ಪದವಳು. ಆ ಭಾಗದಲ್ಲಿ ನಕ್ಸಲ್​ ಚಟುವಟಿಕೆಗಳು ಹೆಚ್ಚಿರುವುದರಿಂದ ಆಕೆಯೂ ಸಹ ನಕ್ಸಲರೊಂದಿಗೆ ನಂಟು ಹೊಂದಿರಬಹುದು ಎನ್ನುವ ಅನುಮಾನವೂ ಇದೆ.
ಸಿಎಎ ಮತ್ತು ಎನ್​ಆರ್​ಸಿ ವಿರುದ್ಧ ಹೋರಾಟ ನಡೆಸಿಕೊಂಡು ಬಂದಿರುವ ಈಕೆಗೆ ಮೋದಿ ಮತ್ತು ಅಮಿತ್​ ಷಾರನ್ನು ವಿರೋಧಿಸುವ ಟೀಂಗಳ ಬೆಂಬಲವೂ ಇತ್ತು. ಇದರ ಜತೆಗೆ ರಾಜಕೀಯ ಪಕ್ಷಗಳ ಕೈವಾಡವೂ ಇರಬಹುದು ಎನ್ನುವ ಅನುಮಾನವಿದ್ದು, ಈ ಮೂರು ಅನುಮಾನಗಳ ಜಾಡು ಹತ್ತಿರುವುದಾಗಿ ಭಾಸ್ಕರ್​ ರಾವ್​ ತಿಳಿಸಿದ್ದಾರೆ. ಈ ಮಾಹಿತಿಗಳು ಭಾಸ್ಕರ್​ ರಾವ್​ ಅವರು ರಾಜ್ಯ ಗೃಹ ಮಂತ್ರಿಗಳಿಗೆ ನೀಡಿರುವ ವರದಿಯಿಂದಾಗಿ ತಿಳಿದುಬಂದಿದೆ.(ದಿಗ್ವಿಜಯ ನ್ಯೂಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 7 =
Remember me
