ಬೆಂಗಳೂರು:ಬಿಗ್​ಬಾಸ್​ ಆಟ ದಿನದಿಂದ ದಿಸಿನಕ್ಕೆ ರೋಚಕವಾಗುತ್ತಿದೆ. ಗೆಲ್ಲಲೇ ಬೇಕು ಎನ್ನುವ ಛಲದಿಂದ ಸ್ಪರ್ಧಿಗಳು ಶಕ್ತಿ ಮೀರಿ ಬಿಗ್​ಬಾಸ್​  ನೀಡಿದ ಆಟ ಆಡುತ್ತಿದ್ದಾರೆ. ರಕ್ಕಸರು-ಗಂಧರ್ವರ ನಡುವಿನ ಜಿದ್ದಾಜಿದ್ದಿ ವೈಯಕ್ತಿಕ ಮಟ್ಟಕ್ಕೆ ಇಳಿದು,  ಸಂಗೀತಾ ಮತ್ತು ಪ್ರತಾಪ್ ಇಬ್ಬರೂ ಆಸ್ಪತ್ರೆ ಸೇರಿಕೊಳ್ಳುವಂತಾಗಿತ್ತು. ಇದೀಗ ಇಬ್ಬರು ಕಣ್ಣಿಗೆ ಕನ್ನಡಕ ಹಾಕಿ ತಡವರಿಸುತ್ತಾ ಬಿಗ್​ಬಾಸ್​​ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಇಂದು ಕಿಚ್ಚನ ಪಂಚಾಯ್ತಿಗೆ ಎಲ್ಲರೂ ರೆಡಿಯಾಗಿ ಕೂತಿದ್ದಾಗ ಬಿಗ್‌ಬಾಸ್ ಮನೆಯ ಬಾಗಿಲು ತೆರೆದುಕೊಂಡಿದೆ. ಲಿವಿಂಗ್ ಏರಿಯಾನಲ್ಲಿರುವಾಗ ಮುಖ್ಯ ದ್ವಾರದಿಂದ ಸಂಗೀತಾ ಹಾಗೂ ಪ್ರತಾಪ್ ಒಳಬಂದಿದ್ದಾರೆ. ಇಬ್ಬರೂ ಸಹ ಕಣ್ಣಿಗೆ ಗಾಢ ಕಪ್ಪು ಬಣ್ಣದ ಕನ್ನಡಕ ಧರಿಸಿದ್ದಾರೆ. ಬಿಸಿಲಿಗೆ ಕೈ ಅಡ್ಡ ಹಿಡಿದುಕೊಂಡು ಕಷ್ಟಪಟ್ಟು ತಡವರಿಸುತ್ತಾ ಮನೆಯೊಳಗೆ ಬಂದಿದ್ದಾರೆ.
ಅವರನ್ನು ನೋಡಿ ಮನೆಯವರೆಲ್ಲರೂ ಶಾಕ್ ಆಗಿದ್ದಾರೆ. ಇಬ್ಬರನ್ನು ತಬ್ಬಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ ತನಿಷಾ, ಕಾರ್ತಿಕ್. ಮನೆಯ ಸದಸ್ಯರೆಲ್ಲ ಗಾಬರಿಯಾಗಿ ಸಂಗೀತಾ ಹಾಗೂ ಪ್ರತಾಪ್​ರನ್ನು ಮುತ್ತಿಕೊಂಡಿದ್ದಾರೆ. ಸಿರಿ ಅವರು ವಿಚಾರಿಸಿದಾಗ ‘ನಾನು ಸರಿಯಾಗಿದ್ದೇನೆ, ಏನೂ ಆಗಿಲ್ಲ’ ಎಂದು ಸಂಗೀತಾ ಬೇಸರದಿಂದಲೇ ಹೇಳಿದ್ದಾರೆ.
A post shared by Colors Kannada Official (@colorskannadaofficial)
ಪ್ರೋಮೋ ಅಷ್ಟೆ ಬಿಡುಗಡೆ ಆಗಿದ್ದು, ಸಂಗೀತಾ ಹಾಗೂ ಪ್ರತಾಪ್​ ಕಣ್ಣಿಗೆ ಎಷ್ಟು ಹಾನಿ ಆಗಿದೆ ಎಂಬ ಬಗ್ಗೆ ಪೂರ್ಣ ಮಾಹಿತಿ ಇಂದಿನ ರಾತ್ರಿಯ ಎಪಿಸೋಡ್​ನಲ್ಲಿ ಗೊತ್ತಾಗಲಿದೆ. ಈ ವಾರದ ‘ಕಿಚ್ಚನ ಪಂಚಾಯ್ತಿ’ಯಲ್ಲಿ ಸುಂಟರಗಾಳಿಯೇ ಏಳುವ ಸಂಭವವಿದೆ.  ಈ ಪ್ರೋಮೋ ನೋಡಿದ ಅಭಿಮಾನಿಗಳು  ನಾವು ಇಂದಿನ ‘ಕಿಚ್ಚನ ಪಂಚಾಯ್ತಿಗೆ ಕಾಯುತ್ತಾ ಇದ್ದೇವೆ, ಇವತ್ತು ಬಿಗ್​ಬಾಸ್​ ಸ್ಪರ್ಧಿಗಳಿಗೆ ಎಚ್ಚರಿಕೆ ಕೊಡಿ ಸರ್, ನಮಗೆ ನೋಡೊಕೆ ಆಗ್ತಿಲ್ಲ.. ಬಿಗ್​ಬಾಸ್​​ ಮನೆಯಲ್ಲಿ ಮನರಂಜನೆಗಿಂತ ಹೆಚ್ಚಾಗಿ ಜಗಳ ನೋಡ್ತಾ ಇದ್ದೇವೆ.. ಇದ್ಯಾಕೆ ಹೀಗೆ ಎಂದು ನೆಟ್ಟಿಗರು ಕಾಮೆಂಟ್​ ಮಾಡುತ್ತಿದ್ದಾರೆ.
ಇತ್ತ ಸಂಗೀತಾ ಸಹೋದರ ಸಂತೋಷ್‌ ಬಹಿರಂಗವಾಗಿ ತಮ್ಮ ಬೇಸರ, ಅಸಮಾಧಾನ ಹೊರಹಾಕಿದ್ದಾರೆ. ’ಕಿಚ್ಚ ಸುದೀಪ್ ಸರ್​.. ನೀವು ನಮಗೆ ಭರವಸೆ ನೀಡಿದ್ರಿ.. “ಬಿಗ್ ಬಾಸ್ ಮನೆ ಸುರಕ್ಷತೆಯ ಸ್ವರ್ಗ. ಏನೂ ಆಗುವುದಿಲ್ಲ ಎಂದು. ಆದರೆ, ಪ್ರಸ್ತುತ ಸನ್ನಿವೇಶವು ಈ ನಂಬಿಕೆಯನ್ನು ಸಂಪೂರ್ಣವಾಗಿ ನಾಶಪಡಿಸುತ್ತದೆ. ಒಂದು ಕಾಲದಲ್ಲಿ ಕೌಟುಂಬಿಕ ಕಾರ್ಯಕ್ರಮವಾಗಿದ್ದ ಈ ಶೋ ಈಗ ಅನಿಯಂತ್ರಿತ ಆಕ್ರಮಣ ಮತ್ತು ಹಿಂಸೆಯ ಅಖಾಡವಾಗಿ ಮಾರ್ಪಟ್ಟಿರುವುದನ್ನು ನೋಡಿದರೆ ಹೃದಯ ಛಿದ್ರವಾಗುತ್ತದೆ. ಕುಟುಂಬಗಳು ಗಾಬರಿಗೊಂಡಿವೆ. ಪರದೆಯ ಮೇಲೆ ಇಂತಹ ಆಕ್ರಮಣಕಾರಿ, ಹಿಂಸೆಯ ನಡವಳಿಕೆಯನ್ನು ನಾವು ಒಟ್ಟಿಗೆ ಕುಳಿತು ಹೇಗೆ ವೀಕ್ಷಿಸಬಹುದೇ?’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅಪ್ಪ ಯಾರೆಂಬ ಪ್ರಶ್ನೆಗೆ ಖಡಕ್​ ಉತ್ತರ ಕೊಟ್ಟ ವಿನೋದ್​ ರಾಜ್​; ಲೀಲಾವತಿ ಕುರಿತು ಸಮಾಧಿಯಾಗಿದ್ದ ಸತ್ಯ ಬಹಿರಂಗ

ವೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − seventeen =
Remember me
