ಬೆಂಗಳೂರು:ಬಿಗ್‌ಬಾಸ್‌  ಸ್ಪರ್ಧಿ ಡ್ರೋನ್ ಪ್ರತಾಪ್ ಅವರು ಕೋವಿಡ್ ಕ್ವಾರಂಟೈನ್‌ ಅವಧಿಯ ಬಗ್ಗೆ ಸುಳ್ಳು ಹೇಳಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಬಿಗ್​ಬಾಸ್​​ ಮನೆಯಲ್ಲಿ ಹೀಗೆ ಮಾತನಾಡುತ್ತಾ ಡ್ರೋನ್​ ಪ್ರತಾಪ್​, ‘ಕೊವಿಡ್ ಸಮಯದಲ್ಲಿ ನಾನು ಸಾಕಷ್ಟು ಚಿತ್ರ ಹಿಂಸೆ ಅನುಭವಿಸಿದ್ದೆ. ಕ್ವಾರಂಟೈನ್ ಟೈಮ್​ನಲ್ಲಿ ಅಧಿಕಾರಿಗಳು ನನಗೆ ಮಾನಸಿಕವಾಗಿ ಹಿಂಸೆ ನೀಡಿದ್ದರು. ಮಾನಸಿಕ ಆರೋಗ್ಯ ಸರಿ ಇಲ್ಲ ಎಂದು ಒತ್ತಾಯಪೂರ್ವಕವಾಗಿ ಸಹಿ ಮಾಡುವಂತೆ ಹೇಳಿದ್ದರು’ ಎಂಬಿತ್ಯಾದಿ ಆರೋಪಗಳನ್ನು ಮಾಡಿ ಕಣ್ಣೀರು ಹಾಕಿದ್ದರು. ಇದಕ್ಕೆ ಬಿಬಿಎಂಪಿ ಅಧಿಕಾರಿಗಳು ಕೂಡ ತಿರುಗಿ ಬಿದ್ದಿದ್ದಾರೆ.

ಪ್ರತಾಪ್ ಅವರಿಗೆ ಕೋವಿಡ್ ಬಂದಾಗ ಕ್ವಾರಂಟೈನ್‌ನ ರೋಗಿಗಳನ್ನು ನೋಡಿಕೊಳ್ಳಲಿ ನಿಯೋಜನೆಗೊಂಡಿದ್ದ ಬಿಬಿಎಂಪಿ ನೋಡಲ್ ಅಧಿಕಾರಿ ಪ್ರಯಾಗ್ ಅವರು ಪ್ರತಾಪ್‌ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎಂದು ಮೂಲಗಳು ತಿಳಿದುಬಂದಿದೆ. ಪಾಲಿಕೆ ಅಧಿಕಾರಿ ಪ್ರಯಾಗ್ ರಾಜ್ 50 ಲಕ್ಷ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ವಿಚಾರಕ್ಕೆ ವಾದ – ಪ್ರತಿವಾದ ನಡೆದಿದ್ದು, ಇಂದು ಸಂಜೆಯೊಳಗೆ ಕೋರ್ಟ್‌ನಿಂದ ಆದೇಶ ಹೊರಬೀಳುವ ಸಾಧ್ಯತೆಗಳಿವೆ ಎಂದು ವಕೀಲರು ತಿಳಿಸಿದ್ದಾರೆ.

ಪ್ರತಾಪ್ ಕ್ವಾರಂಟೈನ್ ರೂಲ್ಸ್ ಉಲ್ಲಂಘನೆ ವಿರುದ್ಧ ನಾನೇ ಕೇಸ್ ದಾಖಲಿಸಿದ್ದೆ. ಕಾನೂನು ಪ್ರಕಾರವೇ ನಾನು ಕಾರ್ಯನಿರ್ವಹಿಸಿದ್ದೆ. ಇಡೀ ಆತನ ಕ್ವಾರಂಟೈನ್ ಪ್ರಕ್ರಿಯೆಯಲ್ಲಿ ನಾನೇ ನೋಡಲ್ ಅಧಿಕಾರಿಯಾಗಿ ನಿಗಾ ವಹಿಸಿದ್ದೆ. ಆದರೆ ಈತ ಹೇಳುತ್ತಿರುವ ಮಾತುಗಳಲ್ಲಿ ಯಾವುದೇ ಹುರುಳಿಲ್ಲ. ಆತನಿಗೆ ನಾನು ಯಾವುದೇ ಮಾನಸಿಕ ಹಿಂಸೆ ಕೊಟ್ಟಿಲ್ಲ. ಆತನ ತಲೆಯ ಮೇಲೆ ಹೊಡೆದಿಲ್ಲ. ಪ್ರತಾಪ್ ಮಹಾನ್ ಸುಳ್ಳುಗಾರ, ಈತ ಹೇಳುವ ಮಾತಿಗೆ ಒಂದೇ ಒಂದು ಸಾಕ್ಷ್ಯ ಒದಗಿಸಲಿ. ಆತನ ಆರೋಪ ನಿಜವಾಗಿದ್ದರೆ ನಾನು ರಾಜೀನಾಮೆ ಕೊಟ್ಟು ಹೊರಟು ಹೋಗುತ್ತೇನೆ ಎಂದು ಬಿಬಿಎಂಪಿ (BBMP) ನೋಡಲ್ ಅಧಿಕಾರಿ ಮರುದಿನವೇ ಎಚ್ಚರಿಸಿದ್ದರು.
ಪುಷ್ಪ 2 ಸಿನಿಮಾದ ಐಟಂ ಹಾಡಿಗೆ ಸಮಂತಾ ಬದಲಿಗೆ ಎಂಟ್ರಿ ಕೋಡ್ತಾರೆ ಕನ್ನಡದ ಸ್ಟಾರ್ ಹೀರೋಯಿನ್..

ತರಗತಿಯಲ್ಲಿ ಪಾಠ ಕೇಳುತ್ತಿದ್ದಂತೆ ಹೃದಯಾಘಾತದಿಂದ ಕುಸಿದು ಬಿದ್ದು ಪ್ರಾಣ ಬಿಟ್ಟ ವಿದ್ಯಾರ್ಥಿ



ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 7 =
Remember me
