ಬೆಂಗಳೂರು:ಕನ್ನಡ ಕಿರಿತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 8 ಭಾನುವಾರ ಅದ್ದೂರಿಯಾಗಿ ಆರಂಭವಾಗಿದೆ. ಎಲ್ಲ 17 ಸ್ಪರ್ಧಿಗಳನ್ನೂ ಕಾರ್ಯಕ್ರಮ ನಿರೂಪಕ ಕಿಚ್ಚ ಸುದೀಪ್​ ಆತ್ಮೀಯವಾಗಿ ಬರ ಮಾಡಿಕೊಂಡು ಬಿಗ್​ಬಾಸ್​​ ಮನೆಯೊಳಗೆ ಕಳುಹಿಸಿಕೊಟ್ಟಿದ್ದು, ಇಂದಿನಿಂದ ಅಸಲಿ ಆಟ ಶುರುವಾಗಿದೆ.
ಈ ನಡುವೆ ಬಿಗ್ ಬಾಸ್ ಮನೆಯಲ್ಲಿ ರಾಜಕಾರಣದ ಕಿಡಿ ಹೊತ್ತಿಸಲು ಮಾಜಿ ಸಚಿವರೂ ಆದ ಬಿಜೆಪಿ ಮುಖಂಡ ಎಚ್​.ವಿಶ್ವನಾಥ್ ತುದಿಗಾಲಲ್ಲಿ ನಿಂತಿದ್ದಾರೆ.ಇದನ್ನೂ ಓದಿರಿಪ್ರಾಣಾಪಾಯದಿಂದ ನಟ ರಿಷಬ್​ ಶೆಟ್ಟಿ, ನಟಿ ಗಾನವಿ ಜಸ್ಟ್ ಮಿಸ್​!
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, ಬಿಗ್​ ಬಾಸ್​ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿ ಹೊಂದಿದ್ದೇನೆ. ವಿಶೇಷ ಆಹ್ವಾನಿತನಾಗಿ ನಾಲ್ಕೈದು ದಿನ ಹೋಗಲು ಅವಕಾಶ ಸಿಕ್ಕರೆ ಹೋಗುತ್ತೇನೆ. ಬಿಗ್ ಬಾಸ್ ಮನೆಯಲ್ಲಿ ರಾಜಕಾರಣದ ಕಿಡಿ ಹೊತ್ತಿಸುತ್ತೇನೆ. ನಾವು ರಾಜಕಾರಣದ ಬಗ್ಗೆ ಜನರಿಗೆ ಶಿಕ್ಷಣ ಕೊಡಬೇಕಿದೆ. ಅದಕ್ಕೊಂದು ಅವಕಾಶ ಸಿಗಲಿದೆಯಾ ಅಂತ ಕಾಯ್ತಾ ಇದ್ದೇನೆ. ಸಮಯ ಮತ್ತು ಅವಕಾಶ ಸಿಕ್ಕರೆ ಖಂಡಿತಾ ಭಾಗವಹಿಸುವೆ ಎಂದರು.
ಬಿಗ್​ಬಾಸ್​ ಸೀಸನ್​ 6ರಲ್ಲಿ ಪಾಲ್ಗೊಳ್ಳುವಂತೆ ನನಗೆ ಈ ಹಿಂದೆಯೇ ಕರೆ ಬಂದಿತ್ತು. ಆರೋಗ್ಯದ ಸಮಸ್ಯೆ ಇದ್ದ ಕಾರಣ ನಾನು ಹೋಗಿರಲಿಲ್ಲ. ಈಗ ಅವಕಾಶ ಸಿಕ್ಕರೆ ಹೋಗಲು ರೆಡಿ ಇದ್ದೇನೆ ಎಂದರು.
ಈ ಬಾರಿ ಯಾರೆಲ್ಲ ಬಿಗ್​ಬಾಸ್​ ಮನೆಗೆ ಪ್ರವೇಶಿಸಿದ್ದಾರೆ ಗೊತ್ತಾ?1. ಧನುಶ್ರೀ- ಟಿಕ್​ಟಾಕ್​ ಸ್ಟಾರ್2. ಶುಭಾ ಪೂಂಜಾ- ನಟಿ3. ಶಂಕರ್​ ಅಶ್ವಥ್​- ಹಿರಿಯ ನಟ4. ವಿಶ್ವಾ– ಗಾಯಕ5. ವೈಷ್ಣವಿ- ಕಿರುತೆರೆ ನಟಿ6. ಬ್ರೋ ಗೌಡ – ಗಾಯಕ7. ಅರವಿಂದ್​– ಬೈಕ್​ ರೇಸರ್​8. ಮಂಜು ಪಾವಗಡ- ಮಜ ಭಾರತ ಕಲಾವಿದ9. ಚಂದ್ರಕಲಾ- ಪುಟ್ಟಗೌರಿ ಧಾರಾವಾಹಿಯ ಅಜ್ಜಮ್ಮ10. ದಿವ್ಯಾ- ಕಿರುತೆರೆ ನಟಿ11. ಗೀತಾ– ಬ್ರಹ್ಮಗಂಟು ಧಾರಾವಾಹಿ12. ರಾಜೀವ್​- ಕ್ರಿಕೆಟರ್​13. ನಿರ್ಮಲಾ ಚೆನ್ನಪ್ಪ- ಧಾರಾವಾಹಿ ನಿರ್ಮಾಪಕಿ14. ನಿಧಿ ಸುಬ್ಬಯ್ಯಾ- ನಟಿ15. ಪ್ರಶಾಂತ್​ ಸಂಬರಗಿ- ಮಾಧ್ಯಮ ವರದಿಗಾರ16. ರಘು ಗೌಡ- ಟಿಕ್​ಟಾಕ್​ ಸ್ಟಾರ್​17. ದೀಪಿಕಾ- ಕಿರುತೆರೆ ನಟಿ
ಬಿಗ್​ಬಾಸ್​ ಶೋ ಆರಂಭದಲ್ಲೇ ಕೇಳಿಬಂತು ಅಪಸ್ವರ: ಕಲರ್ಸ್​ ಕನ್ನಡಕ್ಕೆ ಜನರಿಟ್ಟ ಬೇಡಿಕೆ ಏನು?

ಡೆತ್​ನೋಟ್​ ಬರೆದಿಟ್ಟು ಹೈಸ್ಕೂಲ್​ ಶಿಕ್ಷಕ ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಶಿಕ್ಷಕ

ವಿವಾಹಿತೆ ಜತೆ ಯುವಕನ ಸಲ್ಲಾಪ, ತಡರಾತ್ರಿ ಸಿಕ್ಕಿಬಿದ್ದ ಜೋಡಿಯನ್ನ ಟ್ರ್ಯಾಕ್ಟರ್​ಗೆ ಕಟ್ಟಿಹಾಕಿದ ಗ್ರಾಮಸ್ಥರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + nine =
Remember me
