ಬೆಂಗಳೂರು:ಬಿಗ್​ಬಾಸ್​​ ಮನೆಯ ಆಟ ರೋಚಕವಾಗುತ್ತಿದೆ. ಸ್ಪರ್ಧಿಗಳ ಸಂಖ್ಯೆ ಕಡಿಮೆ ಆಗುತ್ತಾ ಹೋದಂತೆ ಬಿಗ್​ಬಾಸ್​ ನೀಡುವ ಟಾಸ್ಕ್​​ ಗೆಲ್ಲಲು ಸ್ಪರ್ಧಿಗಳ ಮಧ್ಯೆ ಸ್ಪರ್ಧೆ ಜೋರಾಗಿದೆ.  ಈ ಮಧ್ಯೆ ಬಿಗ್​ಬಾಸ್​ ಇಂದು ಸ್ಪರ್ಧಿಗಳಿಗೆ ಮನದಾಳದ ಮಾತುಗಳನ್ನು ಹಂಚಿಕೊಳ್ಳಲು ಒಂದು ಅವಕಾಶ ನೀಡಿದ್ದರು. ಈ ವೇಳೆ ಕಾರ್ತಿಕ್​ ಮಹೇಶ್​​ ಅವರಿಗೆ ತಂಗಿ ಡೆಲೆವರಿ ಆಗಿರುವ ವಿಚಾರ ಗೊತ್ತಾಗಿದೆ ಎನ್ನಲಾಗಿದೆ.
ಕಾರ್ತಿಕ್ ಅವರಿಗೆ ತಂಗಿ ತೇಜಸ್ವಿನಿ ಕಂಡರೆ ತುಂಬ ಇಷ್ಟ. ಪದೇ ಪದೇ ಅವರು ತಂಗಿ ಬಗ್ಗೆ ಮಾತನಾಡುತ್ತಿದ್ದರು. “ನಾವು ಇತ್ತೀಚೆಗೆ ಮೈಸೂರಿನಿಂದ ಬೆಂಗಳೂರಿಗೆ ಶಿಫ್ಟ್ ಆಗಿದ್ದೆವು. ಅಮ್ಮ ಹೇಗಿದ್ದಾರೋ ಅಂತ ಚಿಂತೆ ಇದೆ, ತಂಗಿಗೆ ಹೆರಿಗೆ ಆಯ್ತೋ ಇಲ್ಲವೋ ಎಂದು ಗೊತ್ತಿಲ್ಲ” ಎಂದು ಪದೇ ಪದೇ ಕಾರ್ತಿಕ್‌ ಅವರು ಹೇಳಿಕೊಂಡಿದ್ದರು.
ನನ್ನ ತಂಗಿಗೆ ಹೆರಿಗೆ ಆಯ್ತೋ ಇಲ್ಲವೋ’ ಅಂತ ಕಾರ್ತಿಕ್ ಅವರು ಬಿಗ್ ಬಾಸ್ ಮನೆಯಲ್ಲಿ ಸದಾ ಕಳವಳ ವ್ಯಕ್ತಪಡಿಸುತ್ತಿದ್ದರು. ಕೆಲವು ಬಾರಿ ಕ್ಯಾಮೆರಾ ಮುಂದೆ ನಿಂತು ಕೂಡಾ ಕೇಳಿದ್ದರು. ಆದರೆ ಬಿಗ್​ಬಾಸ್​ನಿಂದ ಯಾವುದೇ ಉತ್ತರ ಕೂಡಾ ಬಂದಿರಲಿಲ್ಲ. ಆದರೆ ಈ ಬಾರಿ ಬಿಗ್​ಬಾಸ್​​ ಸರ್​ಪ್ರೈಸ್​​ ಆಗಿ ತಿಳಿಸಿದ್ದಾರೆ.
ಆದರೆ ಈ ಬಾರಿ ಬಿಗ್​ಬಾಸ್​​ ಕಾರ್ತಿಕ್ ಅವರ ತಂಗಿ ತೇಜಸ್ವಿನಿಗೆ ಗಂಡು ಮಗು ಆಗಿದ್ದು, ಕಾರ್ತಿಕ್ ಮಾವ ಆಗಿದ್ದಾರೆ ಎನ್ನುವ ವಿಷಯ ಕಾರ್ತಿಕ್‌ಗೆ ಗೊತ್ತಾಗಿದೆ. ಸಂಗೀತಾ, ತನಿಷಾ ಜತೆ ಈ ವಿಷಯವನ್ನು ಹೇಳಿಕೊಂಡು ಸಂಭ್ರಮಿಸಿದ್ದಾರೆ, ಅಷ್ಟೇ ಅಲ್ಲದೆ ದೊಡ್ಮನೆಯಲ್ಲಿ ಸಿಹಿ ಮಾಡಿ ಹಂಚಲಾಗಿದೆಯಂತೆ.
ಮನೆ ಬಳಿ ಬಂದ ಹಸುಗಳ ಮೇಲೆ ಆ್ಯಸಿಡ್‌ ಎರಚಿದ ವೃದ್ಧೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − five =
Remember me
