ಬೆಂಗಳೂರು:ಕನ್ನಡದಲ್ಲಿ ಹೇಳಪ್ಪಾ ಎಂದಿದಕ್ಕೆ ಈತನಿಗೆ ಬಿಹಾರ ಮೂಲದ ವ್ಯಕ್ತಿ ಬಾಟಲಿ ಏಟು ನೀಡಿರುವ ಘಟನೆ ಚೆನ್ನಮ್ಮನ ಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಭುವನೇಶ್ವರಿ ನಗರದಲ್ಲಿ ನಡೆದಿದೆ.
ದೂರದ ಊರಿಂದ ಬಂದ ಹಿಂದಿ ಭಾಷಿಕನೊಬ್ಬ ಕನ್ನಡಿಗನ ಮೇಲೆ ಹಲ್ಲೆ ಮಾಡಿದ್ದಾನೆ. ಈ ಘಟನೆ ತಾಜ ಜ್ಯೂಸ್ ಶಾಪ್ ನಲ್ಲಿ ನಡೆದಿದ್ದು ದೀಪಕ್ ಎನ್ನುವಾತ ಹಲ್ಲೆಗೊಳಗಾದ ವ್ಯಕ್ತಿ.
ಕಳೆದ ತಿಂಗಳ 31ರ ರಾತ್ರಿ 7:30 ಕ್ಕೆ ಐಸ್ ಕ್ರೀಂ ತಿನ್ನಲು ತಾಜ್​ ಅಂಗಡಿಗೆ ದೀಪಕ್ ಹೋಗಿದ್ದ. ಐಸ್ ಕ್ರೀಂ ತಿಂದಾದ ಮೇಲೆ ಹಣ ಎಷ್ಟು ಅಂತ ದೀಪಕ್ ಕೇಳಿದ್ದ. ಈ ಸಂದರ್ಭ ಯುವಕ ಶಬ್ಬೀರ್ ಹಿಂದಿಯಲ್ಲಿ ಐಸ್ ಕ್ರೀಂ ಬೆಲೆ ತಿಳಿಸಿದ್ದ. ಆದರೆ ದೀಪಕ್​ಗೆ ಹಿಂದಿ ಬರದ ಕಾರಣ, ಕನ್ನಡಲ್ಲಿ ಹೇಳಪ್ಪ ಅಂತ ಕೇಳಿಕೊಂಡಿದ್ದಾನೆ.
ಇಷ್ಟಕ್ಕೇ ಸಿಟ್ಟಾದ ಶಬೀರ್​, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ಮೂಲಕ ಗಲಾಟೆ ಶುರುವಾಗಿದ್ದು, ನಂತರ ದೀಪಕ್ ಮುಖಕ್ಕೆ ಶಬೀರ್​, ಪೆಪ್ಸಿ ಬಾಟಲಿನಿಂದ ಹಲ್ಲೆ ನಡೆಸಿದ್ದ.
ಹಲ್ಲೆಯ ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿದ್ದು ಹಲ್ಲೆಯಿಂದ ಪ್ರಜ್ಞೆ ತಪ್ಪಿದ ದೀಪಕ್ ನನ್ನ ಆಸ್ಪತ್ರೆಯ ದಾಖಲಾಗಿದ್ದಾನೆ. ಇದೀಗ 2 ಸರ್ಜರಿ ಮಾಡಬೇಕು ಅಂತ ವೈದ್ಯರು ತಿಳಿಸಿದ್ದಾನೆ. ಸದ್ಯ ಈ ಘಟನೆ ಬಗ್ಗೆ ದೀಪಕ್ ಪೋಷಕರು ಚೆನ್ನಮ್ಮನ ಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಹಲ್ಲೆ ನಡೆಸಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ಚೆನ್ನಮ್ಮನ ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 15 =
Remember me
