ರಾಣೆಬೆನ್ನೂರ:ರಸ್ತೆಯಲ್ಲಿ ವಾಹನ ಅಪಘಾತವಾದರೆ ಮನುಷ್ಯರು ಪ್ರಾಣ ಕಳೆದುಕೊಳ್ಳುವುದು ಸಾಮಾನ್ಯ. ಆದರೆ ಇಲ್ಲೊಂದು ಕಡೆ ವಾಹನ ಅಪಘಾತದಲ್ಲಿ ಕಾಡುಪ್ರಾಣಿಯೊಂದು ಪ್ರಾಣ ಕಳೆದುಕೊಂಡಿದೆ. ಅರ್ಥಾತ್, ಬೈಕ್ ಡಿಕ್ಕಿಯಾಗಿ ಕೃಷ್ಣಮೃಗವೊಂದು ಮೃತಪಟ್ಟಿದ್ದು, ಬೈಕ್ ಸವಾರ ಗಾಯಗೊಂಡಿದ್ದಾನೆ.
ರಾಣೆಬೆನ್ನೂರಿನ ಕೂಸಗೂರ ಗ್ರಾಮದ ಬಳಿ ಸೋಮವಾರ ರಾತ್ರಿ ಈ ಅಪಘಾತ ಸಂಭವಿಸಿದೆ. ಬೈಕ್ ಸವಾರ ಹಿರೇಕೆರೂರ ತಾಲೂಕಿನ ಬತ್ತಿಕೊಪ್ಪ‌ ಗ್ರಾಮದ ಮಂಜುನಾಥ (35) ಗಾಯಗೊಂಡಿದ್ದಾನೆ. ಇವರು ಹಲಗೇರಿ ಕಡೆಯಿಂದ ಬತ್ತಿಕೊಪ್ಪದ ಕಡೆಗೆ ಹೊರಟಿದ್ದರು.
ಇದನ್ನೂ ಓದಿ:ಹೆಂಡತಿಯೊಂದಿಗೆ ಜಗಳ, ಇಬ್ಬರು ಗಂಡಂದಿರ ಸಾವು!
ದಾರಿ ಮಧ್ಯೆ ಕೃಷ್ಣಮೃಗ ಅಡ್ಡ ಬಂದಿದ್ದು, ನಿಯಂತ್ರಿಸಲಾಗದೆ ಬೈಕ್ ಕೃಷ್ಣಮೃಗಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಕೃಷ್ಣಮೃಗ ಸ್ಥಳದಲ್ಲಿಯೇ ಮೃತಪಟ್ಟಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗಾಯಾಳನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾರಕಿಹೊಳಿ ಹಾಸಿಗೆ ಮೇಲಿರುವ ವಿಡಿಯೋ ಬಿಡುಗಡೆ; ‘ಯಾವ ಮಂಚದ ಮೇಲೂ ಇಲ್ಲ..’ ಎಂದಿದ್ದಕ್ಕೆ ಉತ್ತರವೇ ಈ ವಿಡಿಯೋ?

ಎರಡೆರಡು ಸಲ ಲಸಿಕೆ ಪಡೆದರೂ ಕರೊನಾ ಬಂತು!; ವ್ಯಾಕ್ಸಿನ್​ ತಗೊಂಡ ಜಿಲ್ಲಾಧಿಕಾರಿಗೂ ಸೋಂಕು!​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
