ಬೆಂಗಳೂರು:ನಗರದ ಮೂಡಲಪಾಳ್ಯದಲ್ಲಿ ಮದ್ಯಪಾನ ಮಾಡಿ ಕಾರ್​ ರೇಸ್​ ಮಾಡುತ್ತಿದ್ದ ಯುವಕರಿಂದಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಯುವಕ ಅಕ್ಷಯ್​ ಇಂದು ಸಾವನ್ನಪ್ಪಿದ್ದಾನೆ. ಡಿಸೆಂಬರ್​ 3ರಂದು ನಡೆದ ಭೀಕರ ಅಪಘಾತದಿಂದಾಗಿ ಗಂಭೀರ ಗಾಯಾಳುವಾಗಿದ್ದ ಅಕ್ಷಯ್​ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗ ಹಿನ್ನೆಲೆಯಲ್ಲಿ ಆತ ಇಂದು ಕೊನೆಯುಸಿರೆಳೆದಿದ್ದಾನೆ.
ಇದನ್ನೂ ಓದಿ:ಮಕ್ಕಳ ಮೆರವಣಿಗೆ ಮೇಲೆಯೇ ಚಲಿಸಿದ ಲಾರಿ! ನಾಲ್ವರು ಮಕ್ಕಳು ಬಲಿ, 12 ಜನರಿಗೆ ಗಾಯ
ಹೋಂಡಾ ಸಿವಿಕ್ ಮತ್ತು ಸ್ವಿಫ್ಟ್ ಕಾರಿನಲ್ಲಿ ಕುಡಿದ ಮತ್ತಿನಲ್ಲಿದ್ದ ಯುವಕರು ಕಾರು ರೇಸ್​ ಮಾಡುತ್ತಿದ್ದರು. ಹಠಕ್ಕೆ ಬಿದ್ದವರಂತೆ ನಾ ಮುಂದೆ ತಾ ಮುಂದೆ ಎಂಬಂತೆ ಅತೀ ವೇಗವಾಗಿ ಕಾರು ಚಲಾಯಿಸಿಕೊಂಡು‌ ಬಂದು ಎದುರಿನ ರಾಯಲ್ ಎನ್ಫೀಲ್ಡ್ ಬೈಕ್​ಗೆ ಡಿಕ್ಕಿ ಹೊಡೆದಿದ್ದರು. ಡಿಕ್ಕಿಯ ರಭಸಕ್ಕೆ ಬೈಕ್​ ಎರಡು ಪೀಸ್ ಆಗಿ, ಬೈಕ್ ಸವಾರ ಅಕ್ಷಯ್ (28)​ ಮೇಲಕ್ಕೆ ಹಾರಿಬಿದ್ದಿದ್ದ. ಡಿಕ್ಕಿ ಹೊಡೆದ ಪರಿಣಾಮ ಅಕ್ಷಯ್​ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು.
ಇದನ್ನೂ ಓದಿ:ಹೆಂಡತಿ, ಮಕ್ಕಳನ್ನು ಕೊಂದು, ಆತ್ಮಹತ್ಯೆ ಮಾಡಿಕೊಂಡ ಪತಿ! ಕಿಟಕಿಯಿಂದ ನೋಡಿದ ಗ್ರಾಮಸ್ಥರಿಗೆ ಕಾದಿತ್ತು ಶಾಕ್​!
ಈ ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ನಗರದ ಮೂಡಲಪಾಳ್ಯದಲ್ಲಿ ಕಳೆದ ಭಾನುವಾರ ರಾತ್ರಿ ನಡೆದ ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಬೆಚ್ಚಿಬೀಳಿಸುವಂತಿದೆ.#BikeAccident#CarAccident#Bengaluru#RoadAccidentpic.twitter.com/AObiYSl3KW
— Vijayavani (@VVani4U)December 4, 2020

VIDEO| ಯುವಕರ ಹುಚ್ಚಾಟಕ್ಕೆ ಸಾವು ಬದುಕಿನ ನಡುವೆ ಬೈಕ್​ ಸವಾರನ ಹೋರಾಟ: ಸಿಸಿಟಿವಿಯಲ್ಲಿ ಬೆಚ್ಚಿಬೀಳಿಸುವ ದೃಶ್ಯ!

https://www.vijayavani.net/bride-leaves-from-marriage-hall/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
