ನೆಲಮಂಗಲ:ಈ ದೃಶ್ಯ ನೋಡದ್ರೆ ಮೈ ಜುಂ ಅನ್ನುತ್ತೆ! ಮೂವರು ಪುಟ್ಟ ಮಕ್ಕಳನ್ನು ಒಂದೇ ಬೈಕ್​ನಲ್ಲಿ ಕೂರಿಸಿಕೊಂಡು ದಂಪತಿ ಹೋಗುತ್ತಿದ್ದರು. ಮಾರ್ಗಮಧ್ಯೆ ಪತ್ನಿ, ಇಬ್ಬರು ಮಕ್ಕಳು ತರಗೆಲೆಯಂತೆ ಹೆದ್ದಾರಿ ಬದಿಯಲ್ಲಿ ಬೈಕ್​ನಿಂದ ಕಳಗೆ ಬಿದ್ದಿದ್ದಾರೆ…
ಹೌದು ಇಂತಹದ್ದೊಂದು ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕು ದಾಬಸ್ ಪೇಟೆ ಸಮೀಪದ ರಾ.ಹೆ.4 ರಾಯರಪಾಳ್ಯದ ಬಳಿ ಮಂಗಳವಾರ ಸಂಭವಿಸಿದ್ದು, ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ದಾವಣೆಗೆರೆ ಮೂಲದ ಮಂಜುನಾಥ್ ತನ್ನ ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ಬೆಂಗಳೂನಿಂದ ದಾವಣಗೆರೆಗೆ ಬೈಕ್​ನಲ್ಲಿ ಹೋಗುತ್ತಿದ್ದರು. ಮಾರ್ಗಮಧ್ಯೆ ರಾಯರಪಾಳ್ಯ ಗ್ರಾಮದ ಬಳಿ ಬರುತ್ತಿದ್ದಂತೆ ನಿದ್ರೆಗೆ ಜಾರಿದ್ದ ಇಬ್ಬರು ಮಕ್ಕಳು ಮತ್ತು ಆತನ ಪತ್ನಿ ಬೈಕ್​ನಿಂದ ಕೆಳಗೆ ಬಿದ್ದಿದ್ದಾರೆ. ಆ ಕ್ಷಣ ಇದ್ಯಾವುದರ ಪರಿವೆ ಇಲ್ಲದ ಮಂಜುನಾಥ್​ ಸ್ವಲ್ಪ ದೂರ ಕ್ರಮಿಸಿದ್ದು, ಅಷ್ಟರಲ್ಲಿ ಅರಿವಾಗಿ ಬೈಕ್​ ನಿಲ್ಲಿಸಿ ಓಡಿಬಂದರು. ಸಾರ್ವಜನಿಕರು ತಾಯಿ-ಮಕ್ಕಳ ರಕ್ಷಣೆಗೆ ಧಾವಿಸಿದ್ದರು.
ಬೈಕ್​ನಿಂದ ಕೆಳಗೆ ಬಿದ್ದ ತಾಯಿ-ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಲ್ಲದೆ ಹಿಂಬದಿಯಲ್ಲಿ ಸಂಚರಿಸುತ್ತಿದ್ದ ವಾಹನಗಳಿಂದಲೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳಿಗೆ ಸ್ಥಳೀಯರು ದಾಬಸ್​ಪೇಟೆ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ತುಮಕೂರು ಜಿಲ್ಲಾ ಆಸ್ಪತ್ರೆಗೆ ಕಳಿಸಲಾಯಿತು. ನೆಲಮಂಗಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾ.ಪಂ.ಗೆ ಪತ್ನಿ ಅವಿರೋಧ ಆಯ್ಕೆ, ಸಂಭ್ರಮದಲ್ಲಿದ್ದ ಪತಿ ಮರುದಿನವೇ ಆತ್ಮಹತ್ಯೆ! ಕಾರಣ ಏನು?

ಸಚಿವ-ಸಂಸದ-ಜಿಲ್ಲಾಧಿಕಾರಿಯನ್ನೇ ‘ಬೋ…ಮಗ’ ಎಂದ ಕಾಂಗ್ರೆಸ್​ ಶಾಸಕ! ಆಡಿಯೋ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
