ರಾಯಚೂರು:ರಾಜ್ಯದಲ್ಲಿ ಮತ್ತೆ ಮತ್ತೆ ಭೀಕರ ಅಪಘಾತಗಳು ಸಂಭವಿಸುತ್ತಲೇ ಇದ್ದು, ಇಂದು ನಡೆದ ಮತ್ತೊಂದು ಅಪಘಾತದಲ್ಲಿ ಮದುಮಗಳು ಸೇರಿ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ನಾಲ್ಕೈದು ದಿನಗಳು ಕಳೆದರೆ ತವರು ಮನೆಯನ್ನು ಬಿಟ್ಟು ಗಂಡನ ಮನೆಯನ್ನು ಸೇರಬೇಕಿದ್ದ ವಧು, ಅದಕ್ಕೂ ಮೊದಲೇ ಅಜಾಗರೂಕತೆಯ ಚಾಲನೆಗೆ ಬಲಿಯಾಗಿ ಇಹಲೋಕ ತ್ಯಜಿಸುವಂತಾಗಿದೆ.
ಲಿಂಗಸಗೂರು ತಾಲೂಕಿನ ಅಡವಿಭಾವಿ ಗ್ರಾಮದ ವಧು ರಜಿಯಾ ಬೇಗಂ, ಆಕೆಯ ಫ್ರೆಂಡ್ಸ್ ಅರುಣಾಕ್ಷಿ ಮತ್ತು ವೀರೇಶ್ ಮೃತರು. ರಾಯಚೂರು ಜಿಲ್ಲೆ ಮಸ್ಕಿ ಬಳಿ ಈ ಅಪಘಾತ ಸಂಭವಿಸಿದೆ. ಜನವರಿ 24ರಂದು ನಡೆಯಲಿದ್ದ ತನ್ನ ಮದುವೆಗೆ ಕರೆಯಲು ಗೆಳತಿ ಅರುಣಾಕ್ಷಿ ಹಾಗೂ ವೀರೇಶ್​ ಜತೆ ಒಂದೇ ಬೈಕ್​ನಲ್ಲಿ ರಜಿಯಾ ಬೇಗಂ ಹೋಗಿದ್ದರು.
ಮಾರ್ಗಮಧ್ಯೆ ಮಸ್ಕಿ ಪಟ್ಟಣದ ಬಸ್​ ಡಿಪೋ ಸಮೀಪ ಬೈಕ್​ ಆಯತಪ್ಪಿ ಸೂಚನಾ ಫಲಕಕ್ಕೆ ಡಿಕ್ಕಿ ಹೊಡೆದಿದೆ. ಬೈಕ್ ಅಪಘಾತಕ್ಕೀಡಾದ ತೀವ್ರತೆಗೆ ಮೂವರೂ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಅಪಘಾತ ಸಂಬಂಧ ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸತ್ತವರ ಕುಟುಂಬಕ್ಕೆ ಇನ್ನಷ್ಟು ನೋವು ಕೊಡುತ್ತಿದೆ ಸೋಶಿಯಲ್​ ಮೀಡಿಯಾ!

ಮಾಜಿ ಶಾಸಕರ ಪತ್ನಿ ಚಲಾಯಿಸುತ್ತಿದ್ದ ಕಾರ್ ಅಪಘಾತ; ಪತಿಗೆ ಗಾಯ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + thirteen =
Remember me
