ವಿಜಯಪುರ:ಸಂಬಂಧಿಕರ ಮನೆಯ ಮದುವೆ ಸಂಭ್ರಮದಲ್ಲಿ ಪಾಲ್ಗೊಳ್ಳಲು ತನ್ನ ಮೂರು ವರ್ಷದ ಮಗಳೊಂದಿಗೆ ಹೊರಟಿದ್ದ ತಂದೆ ಜತೆಗೆ ಮಗಳು ಮಾರ್ಗಮಧ್ಯೆ ದುರ್ಮರಣಕ್ಕೀಡಾದ ಘಟನೆ ಜಿಲ್ಲೆಯಲ್ಲಿ ಸೋಮವಾರ ಸಂಭವಿಸಿದೆ.
ಬಬಲೇಶ್ವರ ತಾಲೂಕಿನ ಮದಗುಣಕಿ ಗ್ರಾಮದ ನಿವಾಸಿ ಧರೆಪ್ಪ ಮತ್ತು ಇವರ ಪುತ್ರಿ ಸಾನ್ವಿ(3) ಮೃತ ದುರ್ದೈವಿಗಳು.ಇದನ್ನೂ ಓದಿರಿರಾತ್ರೋರಾತ್ರಿ ಮಹಿಳೆ ಸೇರಿ ಮತ್ತಿಬ್ಬರು ಕಂಡವರ ಮನೆಯಲ್ಲಿ ಮಾಡಬಾರದ್ದನ್ನು ಮಾಡಲು ಹೋಗಿ ಸಿಕ್ಕಿಬಿದ್ರು!
ತೆಲಗಿಯಲ್ಲಿ ಧರೆಪ್ಪ ಸಂಬಂಧಿಕರ ಮದುವೆ ಕಾರ್ಯಮವಿತ್ತು. ಅಲ್ಲಿಗೆ ಮದಗುಣಕಿ ಗ್ರಾಮದಿಂದ ಬೈಕ್​ನಲ್ಲಿ ಹೋರಟ ಧರೆಪ್ಪ, ತನ್ನ ಮಗಳನ್ನೂ ಕರೆದೊಯ್ಯುತ್ತಿದ್ದರು. ಕೊಲ್ಹಾರ ತಾಲೂಕಿನ ಮಟ್ಟಿಹಾಳ ಬಳಿ ಧರೆಪ್ಪರ ಬೈಕ್​ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿದ್ದು, ಸ್ಥಳದಲ್ಲೇ ತಂದೆ-ಮಗಳು ಮೃತಪಟ್ಟಿದ್ದಾರೆ.
ಧರೆಪ್ಪ ಜತೆಗೆ ಮತ್ತೊಂದು ಬೈಕ್​ನಲ್ಲಿ ಅವರ ಗ್ರಾಮದ ಮತ್ತಿಬ್ಬರು ಮದುವೆಗೆ ಬರುತ್ತಿದ್ದರು. ಧರೆಪ್ಪ ಬೈಕ್​ ಅಪಘಾತಕ್ಕೀಡಾಗಿರುವುದನ್ನ ಕಂಡ ಅವರು ಸಹಾಯಕ್ಕೆ ಬಂದರಾದರೂ ಅಷ್ಟರಲ್ಲಿ ತಂದೆ-ಮಗಳು ಹೆಣವಾಗಿದ್ದರು.
ಕಾರು ಚಾಲಕ ಗಾಯಗೊಂಡಿದ್ದು, ಕೊಲ್ಹಾರ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೋಟೆಲ್​ ಬಿಲ್​ 2 ಸಾವಿರ ಆದ್ರೆ ಬರೋಬ್ಬರಿ 50 ಸಾವಿರ ರೂಪಾಯಿ ಟಿಪ್ಸ್​ ಕೊಡ್ತಾನೆ ಈ ಭೂಪ!

ರಾತ್ರಿಗಿಂತ ಹಗಲಿನಲ್ಲೇ ಕಾಂಡಂ ಮಾರಾಟ ಜಾಸ್ತಿ!

ಯಾವ ಜಯಂತಿನ್ಲಾ? ಹನುಮ ಹುಟ್ಟಿದ ತಾರೀಖು‌‌ ನಿನಗೆ ಗೊತ್ತಾ? ಸುಮ್ನೆ ಚಿಕನ್​ ತಿನ್ಲಾ: ಸಿದ್ದರಾಮಯ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 3 =
Remember me
