ಬೆಂಗಳೂರು:ಕೆಲಸ ಮುಗಿಸಿಕೊಂಡು ಗುರುವಾರ ರಾತ್ರಿ ಮನೆಗೆ ಹೋಗುತ್ತಿದ್ದ ಯುವಕ ಮಾರ್ಗ ಮಧ್ಯೆ ಸಂಭವಿಸಿದ ಸರಣಿ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಈತನ ಮೃತ ದೇಹ ಎರಡು ಕಾರುಗಳ ಮಧ್ಯೆ ಸಿಲುಕಿ ನಜ್ಜುಗುಜ್ಜಾಗಿತ್ತು.
ಕನಕಮಪಾಳ್ಯದ ನಿವಾಸಿ ಕಿರಣ್ ಮೃತ ಯುಕವ. ಈತ ಬೈಕ್​ನಲ್ಲಿ ಮನೆಗೆ ಹೋಗುತ್ತಿದ್ದಾಗ ರಿಚ್ಮಂಡ್​ ಸರ್ಕಲ್ ಬಳಿ ಹಿಂದಿನಿಂದ ಬಂದ ಕಾರು ಗುದ್ದಿದೆ. ಕಾರು ಡಿಕ್ಕಿಯಾದ ರಭಸಕ್ಕೆ ಕಿರಣ್​ ಇದ್ದ ಬೈಕ್​, ಮುಂಬದಿ ಇದ್ದ ಮತ್ತೊಂದು ಕಾರಿಗೆ ಗುದ್ದಿದೆ. ಎರಡೂ ಕಾರಿನ ನಡುವೆ ಸಿಕ್ಕ ಕಿರಣ್​ ಭೀಕರವಾಗಿ ಸ್ಥಳದಲ್ಲೇ ಅಸುನೀಗಿದ. ಅಷ್ಟಕ್ಕೂ ಈ ದುರಂತ ಸಾವಿಗೆ ಕಾರಣವಾಗಿದ್ದು ಕಂಠಪೂರ್ತಿ ಕುಡಿದಿದ್ದವ!
ಇದನ್ನೂ ಓದಿರಿಅಯ್ಯೋ, ಮಗಳೇ ನಿಲ್ಲು ಎಂದು ತಾಯಿ ಗೋಗರೆಯುತ್ತಿದ್ದರೂ ಮಗಳು ನೀರಿಗೆ ಹಾರಿ ಪ್ರಾಣ ಬಿಟ್ಲು!
ಹೌದು, ಕಂಠಪೂರ್ತಿ ಕುಡಿದು ಕಾರು ಓಡಿಸುತ್ತಿದ್ದ ರೋಹಿತ್ ಎಂಬಾತನೇ ಈ ಸರಣಿ ಅಪಘಾತಕ್ಕೆ ಕಾರಣ. ಕುಡಿದ ಅಮಲಿನಲ್ಲೇಇದ್ದ ರೋಹಿತ್​, ಕಾರು ಚಲಾಯಿಸಿಕೊಂಡು ಬಂದಿದ್ದ. ಕಿರಣ್​ ಹೋಗುತ್ತಿದ್ದ ಬೈಕ್​ಗೆ ಡಿಕ್ಕಿ ಹೊಡೆದು ಆತನ ಸಾವಿಗೂ ಕಾರಣನಾದ. ಎರಡೂ ಕಾರಿನ ಮಧ್ಯೆ ಸಿಲುಕ್ಕಿದ್ದ ಕಿರಣ್​ನನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಲು ಸ್ಥಳೀಯರು ಯತ್ನಿಸಿದರಾದರೂ ಅಷ್ಟರಲ್ಲಿ ಆತ ಕೊನೆಯುಸಿರೆಳೆದಿದ್ದ. ಸ್ಥಳಕ್ಕೆ ಭೇಟಿ ನೀಡಿದ ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ರೋಹಿತ್​ನನ್ನು ವಶಕ್ಕೆ ಪಡೆದರು.
ಇದೇ ತಿಂಗಳಲ್ಲಿ ಕಿರಣ್ ಬರ್ತ್ ಡೇ ಇತ್ತು. ಗೆಳೆಯರ ಜೊತೆ ಹುಟ್ಟುಹಬ್ಬ ಆಚರಿಸುವ ಖುಷಿಯಲ್ಲಿದ್ದ ಕಿರಣ್​ ದುರಂತ ಸಾವಿಗೀಡಾಗಿದ್ದಾನೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಅಮಾವಾಸ್ಯೆ ದಿನ ಸಂಭವಿಸಿತು ಭೀಕರ ಅಪಘಾತ! ಈ ದೃಶ್ಯ ನೋಡಿದ್ರೆ ಬೆಚ್ಚಿಬೀಳ್ತೀರಿ…

‘ನಾವಿಬ್ಬರೂ ಒಟ್ಟಿಗೆ ಡ್ರಗ್ಸ್​ ಸೇವಿಸುತ್ತಿದ್ದೆವು, ಬಿಎಂಡಬ್ಲ್ಯು ಕಾರಿನಲ್ಲೇ ಹೋಟೆಲ್​ಗೆ ಕರೆದೊಯ್ಯುತ್ತಿದ್ದೆ…’

‘ರಾಗಿಣಿಗೆ ನಾನೇ ಡ್ರಗ್ಸ್​ ಕೊಡುತ್ತಿದ್ದೆ… ಡ್ರಗ್ಸ್​ ಅಡಗಿಸಿಟ್ಟಿರುವ ಜಾಗವನ್ನೂ ತೋರಿಸುವೆ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + two =
Remember me
