ನೆಲಮಂಗಲ:ಗಂಡ-ಹೆಂಡತಿ ಹಾಗೂ ಮಗು ಒಟ್ಟಿಗೇ ತೆರಳುತ್ತಿದ್ದ ಬೈಕ್​ಗೆ ಲಾರಿ ಡಿಕ್ಕಿ ಹೊಡೆದ್ದಿದ್ದು, ಕೆಳಕ್ಕೆ ಬಿದ್ದ ಮಗುವಿನ ಮೇಲೆಯೇ ಲಾರಿ ಚಲಿಸಿ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ನೆಲಮಂಗಲದ ಬಳಿ ಇಂಥದ್ದೊಂದು ದುರ್ಘಟನೆ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿ 4ರ ತುಮಕೂರು ರಸ್ತೆಯ ನೆಲಮಂಗಲದ ಹುರುಳಿಹಳ್ಳಿ ಗೇಟ್ ಬಳಿ ಈ ಅಪಘಾತ ಸಂಭವಿಸಿದೆ. ದಾಸನಪುರದ ಶ್ರೀನಿವಾಸಮೂರ್ತಿ ಹಾಗೂ ಕಲಾವತಿ ದಂಪತಿ ಬೈಕ್​ನಲ್ಲಿದ್ದು, ಅವರ ಪುತ್ರಿ ಶ್ರಾವಣಿ (3) ಮೃತಪಟ್ಟಿದ್ದಾಳೆ.
ಲಾರಿ-ಬೈಕ್​ ಡಿಕ್ಕಿಯಾದಾಗ ಮೂರು ವರ್ಷದ ಶ್ರಾವಣಿ ಬೈಕ್​ನಿಂದ ಕೆಳಕ್ಕೆ ಬಿದ್ದಿದ್ದಾಳೆ. ಅವಳ ಮೇಲೆ ಲಾರಿ ಸಾಗಿಹೋಗಿದ್ದು, ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಈ ಅಪಘಾತದಲ್ಲಿ ಶ್ರೀನಿವಾಸಮೂರ್ತಿ ಹಾಗೂ ಕಲಾವತಿ ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲಾವತಿ ತನ್ನ ತಂಗಿಯ ಮದುವೆಗಾಗಿ ಪತಿ ಮತ್ತು ಪುತ್ರಿಯೊಂದಿಗೆ ಬೈಕ್​ನಲ್ಲಿ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ನೆಲಮಂಗಲ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಲಾರಿ ಹಾಗೂ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ
ತಾಯಿ ಹಾಗೂ ಮಕ್ಕಳಿಬ್ಬರು ‘ಕೆರೆಗೆ ಹಾರ’; ಸಾಲಭಾದೆ ತಾಳಲಾಗದೆ ಆತ್ಮಹತ್ಯೆ

ಅಯ್ಯೋ, ಮಗಳೇ ಕಾಲೇಜಿಗೆ ಹೋಗವ್ವ ಅಂದಿದ್ದೇ ತಪ್ಪಾಯ್ತಾ? ನಡೆದೇ ಹೋಯ್ತು ದುರಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − two =
Remember me
