ಹಾಸನ:ಬೈಕ್​ ಮೇಲೆ ಮರ ಬಿದ್ದು ಮರದ ಕೆಳಗೆ ಸಿಲುಕಿದ ಬೈಕ್ ಸವಾರ ನರಳಿ ಸಾವಿಗೀಡಾಗಿದ್ದು, ಗ್ರಾಮಸ್ಥರು ಬಳಿಕ ಮರ ತೆರವುಗೊಳಿಸಲು ಬಿಡದೆ ಅರಣ್ಯ ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಮಾಳೆಕೊಪ್ಪಲು ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ. ಕಲ್ಲೇಸೋಮನಹಳ್ಳಿ ಗ್ರಾಮದ ರಂಗಶೆಟ್ಟಿ ಮರದ ಕೆಳಗೆ ಸಿಲುಕಿ ಸಾವಿಗೀಡಾದ ಬೈಕ್ ಸವಾರ. ಇವರು ಚನ್ನರಾಯಪಟ್ಟಣದಿಂದ ಕಲ್ಲೇಸೋಮನಹಳ್ಳಿಗೆ ಹೋಗುವಾಗ ಈ ದುರಂತ ಸಂಭವಿಸಿದೆ.
ಈ ಮರವನ್ನು ತೆರವುಗೊಳಿಸುವಂತೆ ಅರಣ್ಯ ಅಧಿಕಾರಿಗಳ ಬಳಿ ಕೇಳಿಕೊಂಡಿದ್ದರೂ ತೆರವು ಕಾರ್ಯ ನಡೆದಿಲ್ಲ. ಅರಣ್ಯಾಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಸಾವು ಸಂಭವಿಸಿದೆ. ಗಮನಕ್ಕೆ ತಂದಿದ್ದಾಗಲೇ ಮರವನ್ನು ತೆರವುಗೊಳಿಸಿದ್ದರೆ ದುರಂತ ಸಂಭವಿಸುತ್ತಿರಲಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ತಡೆ ನಡೆಸಿ, ಅರಣ್ಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
ಪ್ರತಿನಿತ್ಯ ಬಸ್ಸು ಹತ್ತುವುದಕ್ಕೆ ಹತ್ತಾರು ಮಂದಿ ಮರದ ಕೆಳಗೆ ಕುಳಿತಿರುತ್ತಿದ್ದರು. ಭಾನುವಾರ ರಜಾದಿನವಾದ್ದರಿಂದ ಹೆಚ್ಚಿನ ಜನರು ಇರದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ.
ಇಸ್ರೋದಿಂದ ಉಡಾವಣೆ ಆಗಿದ್ದ ಹೊಸ ರಾಕೆಟ್ ವಿಫಲ, ಉಪಯೋಗಕ್ಕಿಲ್ಲ ಇನ್ನು ಆ ಉಪಗ್ರಹ..

ಮಬ್ಬು ಕವಿದ ಮಾರ್ಗ, 35 ಪ್ರಯಾಣಿಕರಿದ್ದ ಬಸ್​ ಪಲ್ಟಿ​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
