ಬೆಂಗಳೂರು:ಯಾರಿಗೂ ಗೊತ್ತಾಗುವುದಿಲ್ಲ ಅಂದುಕೊಂಡು ಬೈಕ್​ ಮೇಲೆ ಪೊಲೀಸ್​ ಎಂದು ಬರೆಯಿಸಿಕೊಂಡು ತಿರುಗಾಡುತ್ತಿದ್ದ ಸವಾರನಿಗೆ ಬೆಂಗಳೂರು ಸಂಚಾರಿ ಪೊಲೀಸರು ಭಾನುವಾರ ಬಿಸಿ ಮುಟ್ಟಿಸಿದ್ದಾರೆ.
ಹೌದು, ಬೈಕ್​ ಸವಾರನೊಬ್ಬ ಆಂಧ್ರ ಪ್ರದೇಶದ ಅನಂತಪುರದಿಂದ ಬೆಂಗಳೂರುವರೆಗೆ ನಂಬರ್​ ಪ್ಲೇಟ್ ಮೇಲೆ ‘POLICE’ ಎಂದು ಬರೆಸಿಕೊಂಡು ರಾಜಾರೋಷವಾಗಿ ಬಂದಿದ್ದ. ಆತನನ್ನು ಕೆ.ಆರ್​.ಪುರಂ ಸಂಚಾರಿ ಠಾಣಾ ಪೊಲೀಸರು ತಡೆದು ವಿಚಾರಿಸಿದಾಗ ಸಿಕ್ಕಿಬಿದ್ದಿದ್ದಾನೆ. ತಕ್ಷಣ ಆತನಿಗೆ 2000 ರೂ. ದಂಡ ವಿಧಿಸಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಇನ್ನು ಮುಂದೆ ಇದೇ ರೀತಿ ಮಾಡಿದ್ರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ಎಲೆಕ್ಟ್ರಾನಿಕ್ಸ್​ ಚಿಪ್​ ಅಳವಡಿಸಿ ಗ್ರಾಹಕರಿಗೆ ಮೋಸವೆಸಗುತ್ತಿದ್ದ 33 ಪೆಟ್ರೋಲ್​ ಬಂಕ್ಸ್​ ಸೀಜ್! ​
ಈ ವಿಚಾರವನ್ನು ಕೆ.ಆರ್​. ಪುರಂ ಪೊಲೀಸರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ಮೆಚ್ಚುಗೆಗಳು ವ್ಯಕ್ತವಾಗಿವೆ. ಕೆಲವರು PRESS ಎಂದು ಬರೆಸಿಕೊಂಡು ನಗರದಲ್ಲಿ ಓಡಾಡುತ್ತಿದ್ದಾರೆ ಅವರ ಬಗ್ಗೆಯೂ ಸ್ವಲ್ಪ ವಿಚಾರಿಸಿ ಎಂದು ಆಗ್ರಹಿಸಿದ್ದಾರೆ.
@jointcptraffic@DCPTrEastBCP@blrcitytrafficಅನಂತಪುರದಿಂದ ಬೆಂಗಳೂರು ವರೆಗೆ ನಂಬರ್ ಪ್ಲೇಟ್ ಮೇಲೆ 'POLICE' ಎಂದು ಬರೆಸಿ ರಾಜಾರೋಷವಾಗಿ ಬಂದಿದ್ದ ಈ ಬೈಕ್ ಸವಾರನಿಗೆ K R PURAMನಲ್ಲಿ 2000/ರೂ.ಗಳ ದಂಡ ವಿಧಿಸಲಾಯಿತು.pic.twitter.com/6SBR1oqbZ1
— K.R.PURA TRAFFIC POLICE.BENGALURU. (@KRPURATRAFFIC)September 6, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two − 1 =
Remember me
