ಬಳ್ಳಾರಿ:ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದರೆ ಯಾರಿಗೂ ಗೊತ್ತಾಗದೇ ಇರುತ್ತದೆಯೇ? ಈ ಪ್ರಕರಣ ಕೂಡ ಒಂಥರ ಅಂಥದ್ದೇ. ಯಾರಿಗೂ ಗೊತ್ತಾಗದಂತೆ ಬೈಕ್​ ಕಳುವು ಮಾಡುತ್ತಿದ್ದೇನೆ ಎಂದುಕೊಂಡು ಕಳ್ಳನೊಬ್ಬನು ಎಸಗಿದ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈಗ ಜಗಜ್ಜಾಹೀರಾಗಿದೆ.
ಕಳ್ಳನೊಬ್ಬ ನಕಲಿ ಕೀ ಬಳಸಿ ಬೈಕ್​ ಕಳವು ಮಾಡುತ್ತಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆ ವಿಡಿಯೋ ತುಣುಕು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಳ್ಳಾರಿಯ ಕನಕದುರ್ಗಮ್ಮ ದೇಗುಲ ಸಮೀಪದ ಮ್ಯಾಕ್ಸ್ ಶಾಪಿಂಗ್ ಕಾಂಪ್ಲೆಕ್ಸ್ ಮುಂಭಾಗ ನಿಲುಗಡೆ ಮಾಡಲಾಗಿದ್ದ ಬೈಕ್​ವೊಂದನ್ನು ಕಳ್ಳ ಕಳುವು ಮಾಡಿಕೊಂಡು ಹೋಗಿದ್ದಾನೆ.
ಬುಧವಾರ ಈ ಕಳ್ಳತನ ಪ್ರಕರಣ ನಡೆದಿದೆ. ಸಂಜೆ ಶಾಪಿಂಗ್ ಕಾಂಪ್ಲೆಕ್ಸ್ ಬಳಿಗೆ ವ್ಯಕ್ತಿಯೊಬ್ಬ ಮಾಸ್ಕ್​ ಹಾಕಿಕೊಂಡು ಬಂದಿದ್ದ. ಅಲ್ಲಿ ನಿಲುಗಡೆ ಮಾಡಲಾಗಿದ್ದ ಬೈಕ್​ಗಳಲ್ಲಿ ಒಂದರ ಮೇಲೆ ಕುಳಿತುಕೊಂಡು ಯಾರಿಗೆ ಗೊತ್ತಾಗದ ರೀತಿಯಲ್ಲಿ ತನ್ನಲ್ಲಿರುವ ನಕಲಿ ಕೀ ಹಾಕಿ ಬೈಕ್ ಕಳವು ಮಾಡಲು ಯತ್ನಿಸುತ್ತಾನೆ. ಆದರೆ ಆ ಬೈಕ್​ಗೆ ನಕಲಿ ಕೀ ಪ್ರಯೋಜನವಾಗದ್ದರಿಂದ ಮತ್ತೊಂದು ಬೈಕ್​ನತ್ತ ತೆರಳಿ ಪ್ರಯತ್ನಿಸುತ್ತಾನೆ. ಅಲ್ಲಿಯೂ ವಿಫಲವಾದಾಗ ಇನ್ನೊಂದು ಬೈಕ್​ನತ್ತ ತೆರಳಿ ನಕಲಿ ಕೀ ಹಾಕಿ ತಿರುವುತ್ತಾನೆ.

ಹೀಗೆ ಆ ಬೈಕ್​ ಹ್ಯಾಂಡ್​ಲಾಕ್​ ಓಪನ್​ ಮಾಡಿಕೊಂಡು ಸ್ಟಾರ್ಟ್​ ಮಾಡಿಕೊಂಡು ಅದನ್ನು ಕದ್ದುಕೊಂಡು ಹೋದ ದೃಶ್ಯ ಅಲ್ಲಿರುವ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆ ವಿಡಿಯೋ ತುಣುಕು ವೈರಲ್ ಆಗುತ್ತಿದ್ದು, ಕಳ್ಳನ ಪತ್ತೆ ಇನ್ನಷ್ಟೇ ಆಗಬೇಕಿದೆ.
ಕ್ಷಣಕ್ಷಣದ ಮಾಹಿತಿಗಾಗಿವಿಜಯವಾಣಿಫೇಸ್​ಬುಕ್​ ಪೇಜ್​ ಲೈಕ್​ ಮಾಡಿ


ಮದ್ವೆಯಾದ ಮೂರೇ ದಿನಕ್ಕೆ ಪ್ರೇಮಿಗಳನ್ನು ದೂರ ಮಾಡಿದ್ರಾ ಪೊಲೀಸರು?; ಈ ದಾಂಪತ್ಯದಲ್ಲೀಗ ‘ಚೈತನ್ಯ’ವೂ ಇಲ್ಲ, ‘ತೇಜಸ್ಸೂ’ ಇಲ್ಲ..!

ಬಾಯಲ್ಲೇನು ಇಟ್ಕೊಂಡಿದೀರಾ ಎನ್ನುತ್ತಾ ಸ್ಕೂಟರ್​ ಸವಾರಿ ಹೊರಟ ದೀದಿ!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − four =
Remember me
