ಬೆಂಗಳೂರು:ಕದ್ದ ಬೈಕ್​ನಲ್ಲಿ ಜಾಲಿ ರೈಡ್ ಮಾಡುವಾಗ ಖದೀಮರು ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ನಗರದಲ್ಲಿ ನಡೆದಿದೆ.
ಬಂಧಿತರನ್ನು ಸಂತೋಷ್ (20), ನಾಗರಾಜ್ (20) ಹಾಗೂ ದಿಲೀಪ್ (19) ಎಂದು ಗುರುತಿಸಲಾಗಿದೆ. ಆರೋಪಿಗಳು ಜುಲೈ 17ರಂದು ಕಳ್ಳತನ‌ ಮಾಡಿದ್ದರು. ಸಿಸಿಟಿವಿ ದೃಶ್ಯವನ್ನು ಆಧರಿಸಿ ಕಾರ್ಯಾಚರಣೆಗೆ ಇಳಿದ ಬೆನ್ನಲ್ಲೇ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಇದನ್ನೂ ಓದಿ:ರಿಯಾಳಿಂದ 2 ಐಷಾರಾಮಿ ಫ್ಲ್ಯಾಟ್ಸ್​ ಖರೀದಿ; ವಿಚಾರಣೆಗೆ ಬಂದಿದ್ದು ಯಾರ ಕಾರಿನಲ್ಲಿ?; ಇ.ಡಿಯಿಂದ ಬಯಲಾಗಲಿದೆ ಸತ್ಯ
ಕದ್ದ ಬೈಕ್​ನಲ್ಲಿ ಖಾಲಿ ರಸ್ತೆಯಲ್ಲಿ ಆರೋಪಿಗಳು ಜಿಗ್​ಜಾಗ್ ರೈಡ್ ಮಾಡುತ್ತಿದ್ದರು. ಈ ವೇಳೆ ಪೊಲೀಸರು ಆರೋಪಿಗಳ ಹಿಂದೆ ಬಿದ್ದಿದ್ದರು. ಅವರನ್ನು ಬಂಧಿಸಿ ಠಾಣೆಗೆ ಕರೆತಂದು ವಿಚಾರಣೆ ನಡೆಸುವಾಗ ಕಳ್ಳತನದ ಬೈಕ್ ಎಂದು ಬಾಯಿ ಬಿಟ್ಟಿದ್ದಾರೆ.
ಹೆಚ್ಚಿನ ವಿಚಾರಣೆ ವೇಳೆ ಮನೆಗಳ್ಳತನ, ಅಂಗಡಿ ಕಳವು ಸಹ ಬೆಳಕಿಗೆ ಬಂದಿದೆ. ಕಳೆದ ತಿಂಗಳು 17ರಂದು ಚಿನ್ನಕ್ಕಾಗಿ ಆಚಾರಿ ಕಬ್ಬಿಣ ಪೆಟ್ಟಿಗೆಯನ್ನು ಕದ್ದಿದ್ದರು. ಅಂಗಡಿಯ ಮಸ್ಕಟ್ ಮಣ್ಣನ್ನು ಕದ್ದುಕೊಂಡು ಹೋಗಿದ್ದರು.
ಇದನ್ನೂ ಓದಿ:ಹೋಟೆಲ್‌ನಲ್ಲಿ ರಾತ್ರಿ ಕಳೆದ ಪ್ರೇಮಿಗಳು ಮಾರನೆಯ ದಿನ ಶವವಾದರು!
ಸದ್ಯ ಆರೋಪಿಗಳಿಂದ 16 ಲಕ್ಷ 50 ಸಾವಿರ ಮೌಲ್ಯದ ಚಿನ್ನಾಭರಣ ಹಾಗೂ ಎರಡು ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರ ವಿಚಾರಣೆ ವೇಳೆ 5 ಪ್ರಕರಣಗಳು ಬೆಳಕಿಗೆ ಬಂದಿವೆ. ಪ್ರಕರಣ ದಾಖಲಿಸಿಕೊಂಡಿರೋ ಸುಬ್ರಮಣ್ಯ ನಗರ ಪೊಲೀಸರು ಮತ್ತಷ್ಟು ವಿಚಾರಣೆ ನಡೆಸುತ್ತಿದ್ದಾರೆ.(ದಿಗ್ವಿಜಯ ನ್ಯೂಸ್​)
ದಿಶಾ ಸತ್ತ ಆ ರಾತ್ರಿ ನಿಜಕ್ಕೂ ನಡೆದಿದ್ದೇನು? ಕ್ಲೋಸ್​ ಫ್ರೆಂಡ್​ ಬಿಚ್ಚಿಟ್ಟ ಸ್ಪೋಟಕ ಮಾಹಿತಿ ಇದು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
