ಹಾವೇರಿ:ಬೈಕ್​ನಲ್ಲಿ ಮನೆಗೆ ಬರುತ್ತಿದ್ದ ತಾಯಿ-ಮಗ ಇಬ್ಬರೂ ಮಾರ್ಗಮಧ್ಯೆ ದುರಂತ ಅಂತ್ಯಕಂಡಿದ್ದು, ಸಾವಿನಲ್ಲೂ ಒಂದಾದ ಘಟನೆ ಹಾನಗಲ್ ತಾಲೂಕಿನ ಕಾಡಶೆಟ್ಟಿಹಳ್ಳಿ ಬಳಿ ಸಂಭವಿಸಿದೆ.
ಚನ್ನವ್ವ ಪಂಚಾಕ್ಷರಿ ಕುಂದುರು(42) ಮತ್ತು ಪುತ್ರ ಬಸವರಾಜ್ ಕುಂದುರು(24) ಮೃತರು. ಅಮ್ಮ-ಮಗ ಮಂಗಳವಾರ ಸಂಜೆ ಕಂಚಿನೆಗಳೂರು ಗ್ರಾಮದಿಂದ ಸ್ವಗ್ರಾಮಕ್ಕೆ ಬೈಕ್​ನಲ್ಲಿ ತೆರಳುತ್ತಿದ್ದರು. ಇನ್ನೇನು ಊರು ಸಿಕ್ಕಿತು, ಮನೆಗೆ ಹೋಗಬೇಕು ಎನ್ನುವಷ್ಟರಲ್ಲಿ ಅಲ್ಲಿನ ಕಾಲುವೆ ಬಳಿ ಕಾಯುತ್ತಿದ್ದ ಜವರಾಯ ಇವರಿಬ್ಬರ ಪ್ರಾಣ ಹೊತ್ತೊಯ್ದಿದ್ದಾನೆ.
ಮಾರ್ಗಮಧ್ಯೆ ಧರ್ಮಾ ಕಾಲುವೆಗೆ ಬೈಕ್ ಸಮೇತ ಬಿದ್ದ ತಾಯಿ-ಮಗ ಅಲ್ಲೇ ಮೃತಪಟ್ಟಿದ್ದು, ಮೃತದೇಹಗಳು ಬುಧವಾರ ಪತ್ತೆಯಾಗಿವೆ. ಕಾಲುವೆ ಬಳಿಯ ತಿರುವನ್ನು ಗಮನಿಸದ ಪರಿಣಾಮ ಬೈಕ್ ಸಮೇತ ಕಾಲುವೆಗೆ ಬಿದ್ದಿದ್ದರು. ಕಾಲುವೆಗೆ ಬಿದ್ದು ನಾಪತ್ತೆಯಾಗಿದ್ದ ಚನ್ನವ್ವ ಮತ್ತು ಬಸವರಾಜ್​ಗಾಗಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.
ತಾಯಿ-ಮಗನ ಶವಗಳನ್ನು ಕಾಲುವೆಯಿಂದ ಹೊರ ತೆಗೆಯುತ್ತಿದ್ದಂತೆ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು. ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಯುವ ಮುನ್ನ ಅಪ್ಪನಿಗೆ ಊಟ ಬಡಿಸಿದರು, ಆ ನಂತರ ಅಕ್ಕ-ತಂಗಿ ಇಬ್ಬರೂ ನೇಣಿಗೆ ಶರಣಾದರು!

ಮದ್ವೆಗೆ 2 ದಿನ ಇದ್ದಂತೆ ವಧುಗೆ ಕೈಕೊಟ್ಟ ವರ​! ಮದ್ವೆ ದಿನ ವಾಪಸ್​ ಬಂದವನಿಂದ ಮತ್ತೊಂದು ಶಾಕ್​

ಇಡೀ ಲೋಕಕ್ಕೇ ದೊಡ್ಡ ದೇವರಾದ ನಾನೀಗ ಭಿಕಾರಿ! ರಕ್ಷಣೆ ಕೋರಿ ಸಿಎಂಗೆ ಪತ್ರ ಬರೆದ ‘ಅವತಾರ ಪುರುಷ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
