ಬೆಂಗಳೂರು:ಮಕ್ಕಳ ಹಠಕ್ಕೆ ಮಣಿದು ಸಾಲ ಮಾಡಿ ಮಕ್ಕಳಿಗೆ ಬೈಕ್, ಹೆಣ್ಣು ಮಕ್ಕಳಿಗೆ ಮೊಬೈಲ್ ಕೊಡಿಸುವ ಪೋಷಕರು ಈ ಸ್ಟೋರಿ ನೋಡಲೇಬೇಕು. ಆನ್​ಲೈನ್​ ಜಮಾನದಲ್ಲಿ ಸ್ವಲ ಯಾಮಾರಿದರೂ ನಿಮ್ಮ ಮಕ್ಕಳು ಕೈಮೀರುವುದು ಖಚಿತ ಎನ್ನುವುದಕ್ಕೆ ಈ ಸ್ಟೋರಿ ಒಂದು ತಾಜಾ ಉದಾಹರಣೆಯಾಗಿದೆ.
ಇತ್ತೀಚಿನ ದಿನಗಳಲ್ಲಿ ಮಕ್ಕಳು ಹೆಚ್ಚಾಗಿ ವ್ಹೀಲಿಂಗ್ ಕ್ರೇಜ್ ಮರುಳಾಗುತ್ತಿದ್ದಾರೆ. ಸಿನಿಮಾ ಶೈಲಿಯಲ್ಲಿ ಹುಡುಗಿಯರನ್ನು ಇಂಪ್ರೆಸ್ ಮಾಡಲು ಮುಖ್ಯ ರಸ್ತೆಗಳಲ್ಲಿ ವ್ಹೀಲಿಂಗ್​ ಮಾಡಲು ಮುಂದಾಗುತ್ತಿದ್ದಾರೆ. ಈ ಬಗ್ಗೆ ಪಾಲಕರು ಎಚ್ಚರವಹಿಸುವುದು ಸೂಕ್ತ. ಇಲ್ಲವಾದಲ್ಲಿ ನಿಮ್ಮ ಮಕ್ಕಳು ನಿಮ್ಮ ಕೈತಪ್ಪಿ ಹೋಗುವುದುರಲ್ಲಿ ಸಂಶಯವೇ ಇಲ್ಲ.
ತಾಜಾ ಉದಾಹರಣೆ ಎಂಬಂತೆ ಮಾರ್ಕೆಟ್ ಪ್ಲೇಓವರ್ ಮೇಲೆ 21 ವರ್ಷದ ಜೈಕರ್ ಎಂಬಾತ ವ್ಹೀಲಿಂಗ್ ಮಾಡಿದ್ದು, ಅದರ ವಿಡಿಯೋವನ್ನು ತನ್ನ ಸ್ನೇಹಿತೆಗೆ ಕಳುಹಿಸಿ, ಬಿಲ್ಡಪ್​ ತೆಗೆದುಕೊಂಡಿದ್ದಾನೆ. ಜೈಕರ್​ ಅದೃಷ್ಟ ಕೆಟ್ಟಿತ್ತೇನೋ ವ್ಹೀಲಿಂಗ್ ಮಾಡುವಾಗ ಬ್ಯಾಟರಾಯನಪುರ ಸಂಚಾರಿ ಇನ್ಸ್​ಪೆಕ್ಟರ್​ ಗಿರಿರಾಜ್​ ಕೈಗೆ ಜೈಕರ್​ ಲಾಕ್​ ಆಗಿದ್ದಾನೆ.
ಇದನ್ನೂ ಓದಿರಿ:ಕಿಕ್ಕಿರಿದ ಬಸ್​ನಲ್ಲಿ ಸಿಲುಕಿ ಉಸಿರುಗಟ್ಟಿ ವಿದ್ಯಾರ್ಥಿನಿಯರು ಅಸ್ವಸ್ಥ: ಸಾರಿಗೆ ಸಚಿವರ ತವರಲ್ಲೇ ಘಟನೆ!
ಒಂದು ಕಡೆದ ಹುಡುಗಿಯನ್ನು ಇಂಪ್ರೆಸ್ ಮಾಡಲು ಫ್ಲೈಓವರ್ ಮೇಲೆ ಜೈಕರ್​ ವ್ಹೀಲಿಂಗ್​ ಮಾಡಿ ಸಿಕ್ಕಿಬಿದ್ದಿದ್ದರೆ, ಮತ್ತೊಂದು ಕಡೆ ನಿಖಿಲ್​ ಎಂಬಾತ ಫೇಸ್​ಬುಕ್ ಮತ್ತು ವಾಟ್ಸ್​ಆ್ಯಪ್​ ಸ್ಟೇಟಸ್ ಹಾಕಲು ಡೆಡ್ಲಿ ಬೈಕ್ ಸ್ಟಂಟ್ ಮಾಡಿ​ ಸಿಕ್ಕಿಬಿದ್ದಿದ್ದಾನೆ. ಡ್ಯೂಕ್​ ಬೈಕ್​ನಲ್ಲಿ ಸ್ಟಂಟ್​ ಮಾಡುವುದರ ಜತೆಗೆ ಮಚ್ಚು ಹಿಡಿದ ಪೋಸ್​ ನೀಡಿದ್ದಾರೆ.
ಮಕ್ಕಳ ಹಠಕ್ಕೆ ಮಣಿದು ಬೈಕ್, ಮೊಬೈಲ್ ಕೊಡಿಸುವ ಪೋಷಕರು ಈ ಸ್ಟೋರಿ ನೋಡ್ಲೇಬೇಕು..! ಮಾಹಿತಿಗೆ ಲಿಂಕ್​ ಮೇಲೆ ಕ್ಲಿಕ್ಕಿಸಿhttps://t.co/PpQn6l1Q7h#BikeWheeling#BengaluruPolice#YouthArrest#YouthWheelingpic.twitter.com/9h0K63dllr
— Vijayavani (@VVani4U)February 24, 2021

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬ್ಯಾಟರಾಯನಪುರ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಕಿದ್ವಾಯಿ-ನಿಮ್ಹಾನ್ಸ್ ಮಾದರಿ ಇನ್ನಷ್ಟು ಆಸ್ಪತ್ರೆ; ರಾಜ್ಯದಲ್ಲಿ ವಲಯವಾರು ಕೇಂದ್ರಗಳ ಆರಂಭಕ್ಕೆ ಸಿಎಂ ನಿರ್ಧಾರ

ಸ್ಫೋಟಕಗಳ ಜತೆ ಹುಡುಗಾಟ; ಎಚ್ಚೆತ್ತುಕೊಳ್ಳದ ಸರ್ಕಾರ, ಶಿವಮೊಗ್ಗ ಬಳಿಕ ಚಿಕ್ಕಬಳ್ಳಾಪುರದಲ್ಲೂ ದುರಂತ..

ಒಂದೇ ಜಾಗದಲ್ಲಿ ನೂರಾರು ಕುರಿಗಳ ಸಾವು; ಸಾವಿನ ನಿಖರ ಕಾರಣವಿನ್ನೂ ನಿಗೂಢ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − 3 =
Remember me
