ಹಾವೇರಿ:ತಿರುವೊಂದರಲ್ಲಿ ಸಂಭವಿಸಿದ ಅಪಘಾತದಿಂದಾಗಿ ಸವಾರನೊಬ್ಬ ಬೈಕ್​ ಸಮೇತ ಕೆರೆಗೆ ಬಿದ್ದು ಸಾವಿಗೀಡಾಗಿದ್ದಾನೆ. ಹಾವೇರಿ ಜಿಲ್ಲೆಯಲ್ಲಿ ಇಂಥದ್ದೊಂದು ಅಪಘಾತ ಸಂಭವಿಸಿದೆ.
ಬಾಷಾಸಾಬ್​ ಜಿಗಳೂರ (49) ಅಪಘಾತದಲ್ಲಿ ಸಾವಿಗೀಡಾದ ಬೈಕ್ ಸವಾರ. ಬಾಷಾಸಾಬ್​ ಸವಣೂರು ಪಟ್ಟಣದ ಕಡೆಯಿಂದ ಹಾವೇರಿಯತ್ತ ಸಾಗುತ್ತಿದ್ದಾಗ ಸವಣೂರು ತಾಲೂಕಿನ ಕಲ್ಮಡವು ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ.
ಕಲ್ಮಡವು ಗ್ರಾಮದ ಬಳಿ ತಿರುವು ಇದ್ದಿದ್ದರಿಂದ ತಕ್ಷಣಕ್ಕೆ ಬೈಕ್​ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಆಗದೆ ಅದು ಸೀದಾ ರಸ್ತೆ ಪಕ್ಕದ ಕೆರೆಗೆ ಹೋಗಿ ಬಿದ್ದಿದೆ. ಸ್ಥಳೀಯರು ಶವವನ್ನು ಕೆರೆಯಿಂದ ಹೊರ ತೆಗೆದಿದ್ದಾರೆ.

ತಿರುವಿನಲ್ಲಿ ಸೂಕ್ತ ಸೂಚನಾ ಫಲಕಗಳು ಇಲ್ಲದಿರುವುದೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಸವಣೂರು ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಐಆರ್​​ಸಿಟಿಸಿ ಮೂಲಕ ಇನ್ಮುಂದೆ ಎಷ್ಟು ರೈಲ್ವೆ ಟಿಕೆಟ್​​ಗಳನ್ನು ಕಾದಿರಿಸಬಹುದು?; ಇಲ್ಲಿದೆ ಹೆಚ್ಚಳದ ಕುರಿತ ವಿವರ..

ಶಾರ್ಟ್​ ಸರ್ಕ್ಯೂಟ್​ನಿಂದ ಹೊತ್ತಿಕೊಂಡ ಬೆಂಕಿ ಆರಿಸುತ್ತಿದ್ದಾಗಲೇ ಸಿಲಿಂಡರ್ ಸ್ಫೋಟ; ಇಬ್ಬರು ಸ್ಥಳದಲ್ಲೇ ಸಾವು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + six =
Remember me
