ಸಿಗರೇಟು, ಮದ್ಯ ಮುಂತಾದ ದುರಭ್ಯಾಸಗಳು ಜನರ ಕೈಯಲ್ಲಿ ಏನೆಲ್ಲಾ ಮಾಡಿಸುತ್ತವೆ ಅನ್ನೋದಕ್ಕೆ ಇದೇ ನಿದರ್ಶನ. ಯದ್ವಾ ತದ್ವಾ ಕರೊನಾ ಹರಡಿರುವಾಗ, ಲಾಕ್​​ಡೌನ್ ಟೈಮಲ್ಲಿ ಸಿಗರೇಟ್ ಖರೀದಿಗಾಗಿ 20 ಕಿಲೋಮೀಟರ್ ಬೈಕಲ್ಲಿ ಬಂದಿರೋ ಆಸಾಮಿಯೊಬ್ಬ ಪೊಲೀಸರ ಕೈಗೆ ಸಿಕ್ಕಿರುವ ಪ್ರಸಂಗ ನಡೆದಿದೆ.
ಯಲಹಂಕದ ಚಿಕ್ಕಬೊಮ್ಮಸಂದ್ರದ ನಿವಾಸಿ ಫರ್ದಾಮ್ ಎಂಬಾತ ಸಿಗರೇಟ್ ಖರೀದಿಗಾಗಿ ಕೆ.ಆರ್​.ಮಾರ್ಕೆಟ್​ಗೆ ಬಂದಿದ್ದರು. ಸಿಗರೇಟ್​ ಖರೀದಿಸಿ ವಾಪಸ್ ಮನೆಗೆ ಹೋಗೋ ವೇಳೆಯಲ್ಲಿ ಯಲಹಂಕ ಟ್ರಾಫಿಕ್ ಪೊಲೀಸರು ಜಕ್ಕೂರು ಸಿಗ್ನಲ್​ ಬಳಿ ಬೈಕ್ಅನ್ನು ನಿಲ್ಲಿಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ, “ಸರ್, ಐ ಆ್ಯಮ್ ಎ ಚೈನ್ ಸ್ಮೋಕರ್.. ಐ ಕಾಂಟ್ ಲೀವ್ ವಿಥೌಟ್ ಸ್ಮೋಕಿಂಗ್… ಪ್ಲೀಸ್ ಲೀವ್ ಮಿ”(ಸ್ಮೋಕ್ ಮಾಡದೆ ನಾನು ಬದುಕಲಾರೆ, ನನ್ನನ್ನು ಬಿಟ್ಟುಬಿಡಿ) ಎಂದು ಪರ್ಧಾಮ್​​ ಕೋರಿಕೆ ಇಟ್ಟಿದ್ದಾರೆ.
ಇದನ್ನೂ ಓದಿ:ಹೆಲ್ಮೆಟ್ ಧರಿಸದ ಬೈಕ್​ ಸವಾರನಿಗೆ ದಂಡ ಹಾಕಿದ ಎಸ್​ಐಗೆ ನಡುರಸ್ತೆಯಲ್ಲೇ ಎಸಿ, ತಹಸೀಲ್ದಾರ್ ಅವಾಜ್​! ವಿಡಿಯೋ ವೈರಲ್​
ತುರ್ತು ಅಗತ್ಯದ ವಸ್ತಗಳ ಖರೀದಿಗೆ ಅವಕಾಶ ನೀಡಿದ್ದರೆ, ಸಿಗರೇಟ್ ಖರೀದಿಗಾಗಿ ವಾಹನ ತೆಗೆದುಕೊಂಡು ರಸ್ತೆಗೆ ಬಂದಿದ್ದಕ್ಕಾಗಿ ಬೈಕ್​​ಅನ್ನು ಸೀಜ್ ಮಾಡಿದ ಯಲಹಂಕ ಟ್ರಾಫಿಕ್ ಪೊಲೀಸರು, ನಡ್ಕೊಂಡ್ ಮನೆಗೆ ಹೋಗಿ ಅಂತ ಕಳಿಸಿದ್ದಾರೆ.
ಫೇಸ್​​ಬುಕ್​ನಲ್ಲಿ ಫೇಕ್ ವಿಡಿಯೋ ಬಗ್ಗೆ ಮಹಿಳೆಯ ವಿಚಾರಣೆ
“ಸೆಂಟ್ರಲ್ ವಿಸ್ತಾ ಖರ್ಚಲ್ಲಿ 62 ಕೋಟಿ ಡೋಸ್​ ಕರೊನಾ ಲಸಿಕೆ ನೀಡಬಹುದು”
“ಸೆಂಟ್ರಲ್ ವಿಸ್ತಾ ಖರ್ಚಲ್ಲಿ 62 ಕೋಟಿ ಡೋಸ್​ ಕರೊನಾ ಲಸಿಕೆ ನೀಡಬಹುದು”


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 20 =
Remember me
