ಬೆಂಗಳೂರು: ಬಿಎಂಟಿಸಿ ಬಸ್‌ ಓವರ್‌ಟೇಕ್‌ ಮಾಡುವ ವಿಷಯದಲ್ಲಿ ನಡೆದ ಗಲಾಟೆಯೊಂದು ಇದೀಗ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಹಾಗೆ ನೋಡಿದರೆ ರಾಜ್ಯ ರಾಜಧಾನಿಯಲ್ಲಿ ಪ್ರತಿದಿನ ಇಂತಹ ಸಾವಿರಾರು ಘಟನೆಗಳು ನಡೆಯುತ್ತಿರುತ್ತವೆ. ಇದು ಮಾತ್ರ ಯಾಕೆ ವೈರಲ್ ಆಯ್ತು ಅಂತೀರಾ? ಅದಕ್ಕೂ ಕಾರಣ ಇದೆ.
ಯಲಹಂಕದಲ್ಲಿ ಬಿಎಂಟಿಸಿ ಬಸ್‌ ಓವರ್‌ಟೇಕ್‌ ಮಾಡಲು ಬೈಕ್ ಸವಾರನೊಬ್ಬ ಬಹಳ ಹೊತ್ತಿನಿಂದ ಪ್ರಯತ್ನ ಮಾಡುತ್ತಿದ್ದ. ಎಷ್ಟು ಸಲ ಪ್ರಯತ್ನ ಮಾಡಿದರೂ ಸಾಧ್ಯವೇ ಆಗದೇ ಅವನಿಗೆ ಸಿಕ್ಕಾಪಟ್ಟೆ ಸಿಟ್ಟು ಬಂದಿತ್ತು. ಎಷ್ಟು ಹಾರ್ನ್ ಮಾಡಿದರೂ ಬಸ್ ಚಾಲಕ ದಾರಿ ಬಿಡಲಿಲ್ಲ. ಅದೇನು ಅವಸರದಲ್ಲಿದ್ದನೋ ಏನೋ, ಬೈಕ್ ಸವಾರ ಕೊನೆಗೂ ಬಸ್ ಓವರ್ ಟೇಕ್ ಮಾಡುವಲ್ಲಿ ಯಶಸ್ವಿಯಾದ. ಹಾಗೇ ಓವರ್ ಟೇಕ್ ಮಾಡಿಕೊಂಡು ಹೋಗಿ ಬಿಟ್ಟಿದ್ದರೆ ಏನೂ ಆಗುತ್ತಿರಲಿಲ್ಲ. ಆದರೆ ಸಿಟ್ಟಿನ ಭರದಲ್ಲಿ ಬೈಕ್ ಸವಾರ ಬಸ್ ಡ್ರೈವರ್‌ಗೆ ಮಧ್ಯದ ಬೆರಳು ತೋರಿಸಿದ. ಆಗ ಅವರಿಬ್ಬರ ಮಧ್ಯೆ ಜಗಳ ಶುರುವಾಯಿತು. ಅವಾಚ್ಯ ಪದಗಳೂ ಬಂದವು. ಬೈಕ್ ಸವಾರ ಇನ್ನಷ್ಟು ಸಿಟ್ಟಾಗಿ ಬೈಕನ್ನು ಅಲ್ಲೇ ನಿಲ್ಲಿಸಿ ಬಸ್ ಹತ್ತಿದ. ಡ್ರೈವರ್ ಜತೆ ಕೈಕೈ ಮಿಲಾಯಿಸಿದ.
ಈ ಹಂತದಲ್ಲಿ ಚಾಲಕ ಆ ಬೈಕ್ ಸವಾರನನ್ನು ಹಿಡಿದು ಹಿಗ್ಗಾಮುಗ್ಗಾ ಬಾರಿಸಿದ್ದಾನೆ. ಇದರ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − three =
Remember me
