ಹುಬ್ಬಳ್ಳಿ:ಶರೇವಾಡ ಟೋಲ್​ಗೇಟ್ ಬಳಿ ಸೋಮವಾರ ತಡರಾತ್ರಿ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ.
ಎರಡು ಬೈಕ್​ಗಳು ಮುಖಾಮುಖಿ ಡಿಕ್ಕಿಯಾಗಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಎರಡೂ ಬೈಕ್​ಗಳ ಮೇಲೆ ಕುಳಿತಿದ್ದ ನಾಲ್ವರು ಒಂದೊಂದು ದಿಕ್ಕಿನಲ್ಲಿ ಬಿದ್ದಿದ್ದರು. ಈ ಪೈಕಿ ಮೂವರು ಸ್ಥಳದಲ್ಲೇ ಅಸುನೀಗಿದ್ದು, ಮತ್ತೊಬ್ಬನ ಸ್ಥಿತಿ ಚಿಂತಾಜನಕವಾಗಿದೆ.
ಕುಂದಗೋಳ ನಿವಾಸಿ ಇಸ್ಮಾಯಿಲ್​ ಬಸೀರಸಾಬ್​ ಹುಬ್ಬಳ್ಳಿ(20), ಖಾಜಾಮೊಹಿನು ಬಾಷೇಸಾಬ ಮಿಶ್ರಿಕೋಟಿ (21) ಹಾಗೂ ನೂಲ್ವಿ ಗ್ರಾಮದ ಶಂಕ್ರಪ್ಪ ಬಸಲಿಂಗಪ್ಪ ಅಂಗಡಿ (27) ಮೃತರು. ನೂಲ್ವಿಯ ಸುರೇಶ ಗಂಗಪ್ಪ ವಲಮಣ್ಣವರ ಗಾಯಗೊಂಡಿದ್ದಾರೆ.
ಇಸ್ಮಾಯಿಲ್​ ಬೈಕ್​ನಲ್ಲಿ ಖಾಜಾಮೋಹಿನ್​ನನ್ನು ಕರೆದುಕೊಂಡು ನೂಲ್ವಿಯಿಂದ ಕುಂದಗೋಳ ಕಡೆಗೆ ಹೊರಟಿದ್ದ. ಶಂಕ್ರಪ್ಪ ಅಂಗಡಿ ಬೈಕ್​ನಲ್ಲಿ ಸುರೇಶನನ್ನು ಕರೆದುಕೊಂಡು ಕುಂದಗೋಳದಿಂದ ನೂಲ್ವಿ ಕಡೆಗೆ ಬರುತ್ತಿದ್ದ. ಇಬ್ಬರೂ ಅತಿ ವೇಗವಾಗಿ ಬಂದು ಬೈಕ್​ ನಿಯಂತ್ರಿಸಲಾಗದೆ ಮುಖಾಮುಖಿ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದ ರಭಕ್ಕೆ ನಾಲ್ವರೂ ನಾಲ್ಕು ದಿಕ್ಕಿನಲ್ಲಿ ಬಿದ್ದಿದ್ದಾರೆ. ಇಸ್ಮಾಯಿಲ್​, ಖಾಜಾಮೋಹಿನ್​ ಹಾಗೂ ಶಂಕ್ರಪ್ಪ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುರೇಶ ಗಂಭೀರವಾಗಿ ಗಾಯಗೊಂಡಿದ್ದು, ಕಿಮ್ಸ್​ಗೆ ದಾಖಲಿಸಲಾಗಿದೆ. ಎರಡೂ ಬೈಕ್​ ನಜ್ಜುಗುಜ್ಜಾಗಿವೆ. ಸ್ಥಳಕ್ಕೆ ಧಾವಿಸಿದ ಗ್ರಾಮೀಣ ಠಾಣೆ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಡೆತ್​ನೋಟ್​ ಬರೆದಿಟ್ಟು ಹೈಸ್ಕೂಲ್​ ಶಿಕ್ಷಕ ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಶಿಕ್ಷಕ

ಕೋಟಿ ಮೌಲ್ಯದ ಜಮೀನು ದಾನ ಕೊಡ್ತೀನಿ, ತಾಕತ್​ ಇದ್ರೆ ರಾಮಮಂದಿರ ಕಟ್ಟಿಸಿ: ಸಿದ್ದುಗೆ ರೈತನ ಸವಾಲು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:18 − 15 =
Remember me
