ರಮೇಶ ದೊಡ್ಡಪುರ
ಬೆಂಗಳೂರು: ಭಾರತೀಯ ಸಂವಿಧಾನವನ್ನು ಯಾವುದೇ ಗೊಂದಲ ವಿಲ್ಲದಂತೆ ಅರ್ಥ ಮಾಡಿಕೊಳ್ಳುವ ಸಲುವಾಗಿ ಕನ್ನಡ- ಇಂಗ್ಲಿಷ್ ದ್ವಿಭಾಷಾ ಆವೃತ್ತಿಯನ್ನು ಕರ್ನಾಟಕ ರಾಜಭಾಷಾ (ವಿಧಾಯಿ) ಆಯೋಗ ಪ್ರಕಟಿಸಿದೆ. ಇದರಲ್ಲಿ ಒಂದೆಡೆ ಇಂಗ್ಲಿಷ್- ಮತ್ತೊಂದೆಡೆ ಕನ್ನಡದ ಅನುವಾದ ನೀಡಲಾದೆ.
ನ್ಯಾಯಾಂಗದಲ್ಲಿ ಕನ್ನಡ ಅನುಷ್ಠಾನಕ್ಕೆ ಒತ್ತಾಯಗಳಿದ್ದರೂ ಸಾಕಷ್ಟು ಮೂಲಸೌಕರ್ಯ ಕೊರತೆಯಿಂದಾಗಿ ಪೂರ್ಣ ಅನುಷ್ಠಾನವಾಗಿಲ್ಲ. ಸಂವಿಧಾನದ ದ್ವಿಭಾಷಾ ಆವೃತ್ತಿ ಜತೆಗೆ ಇದೀಗ ಪರಿಷ್ಕರಣೆಯಾಗಿರುವ ಕಾನೂನು ಪದಕೋಶ ಈ ನಿಟ್ಟಿನಲ್ಲಿ ಸಹಕಾರಿಯಾಗುತ್ತದೆ.| ನ್ಯಾ. ಮಹಿಪಾಲ ದೇಸಾಯಿಕರ್ನಾಟಕ ರಾಜಭಾಷಾ ಆಯೋಗದ ಅಧ್ಯಕ್ಷ
ಸಂವಿಧಾನದ 103ನೇ ತಿದ್ದುಪಡಿವರೆಗಿನ ಪರಿಷ್ಕೃತ ಆವೃತ್ತಿಯ ಮುದ್ರಣ ಮುಕ್ತಾಯವಾಗಿದ್ದು, ಶೀಘ್ರದಲ್ಲೇ ಸಾರ್ವಜನಿಕರಿಗೆ ಆನ್​ಲೈನ್​ನಲ್ಲಿ ಲಭ್ಯವಾಗಲಿದೆ. ಸಂವಿಧಾನವನ್ನು ಅರ್ಥೈಸುವಾಗ ಹಾಗೂ ಕಾನೂನು ವ್ಯಾಜ್ಯಗಳಲ್ಲಿ ಸಾಮಾನ್ಯವಾಗಿ ಇಂಗ್ಲಿಷ್ ಭಾಷೆಯೇ ಮೇಲುಗೈ ಸಾಧಿಸು ತ್ತದೆ. ಪ್ರಾದೇಶಿಕ ಭಾಷೆ ಗಳಲ್ಲಿ ನ್ಯಾಯಾಂಗ ವ್ಯವಹಾರಗಳು, ವಾದ ಪ್ರತಿವಾದಗಳು ನಡೆಯಬೇಕು ಎಂದು ಅನೇಕ ಪ್ರಯತ್ನಗಳು ನಡೆಯುತ್ತಿದ್ದರೂ ಯಶಸ್ಸು ಕಂಡಿಲ್ಲ. ಕಕ್ಷಿದಾರರಿಗೆ ಅರ್ಥವಾಗುವ ಭಾಷೆಯಲ್ಲೇ ವಾದ ಮಾಡಬೇಕೆಂಬ ತೀರ್ವನಗಳೂ ಅನುಷ್ಠಾನವಾಗಿಲ್ಲ. ಇಂಗ್ಲಿಷ್​ನಲ್ಲಿ ಸಂವಿಧಾನ ಓದಿಕೊಂಡಿರುವವರು ಅದರ ಎದುರಿನ ಪುಟದಲ್ಲೇ ಕನ್ನಡವನ್ನೂ ಓದುವುದರಿಂದ, ಕನ್ನಡದ ಅರ್ಥ ಹುಡುಕಾಟಕ್ಕೆ ಶ್ರಮಿಸಬೇಕಿಲ್ಲ. ತೀರ್ಪು ನೀಡುವ ಸಮಯದಲ್ಲಿ ನ್ಯಾಯಾಧೀಶರಿಗೆ, ವಕೀಲರು ವಾದ ಮಂಡಿಸಲು, ಶಾಸಕರು ಹಾಗೂ ಸಂಸದರಿಗೆ ನೀತಿ ನಿರೂಪಣೆಗಾಗಿ ವಿತರಣೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಮಾನ್ಯತೆ ದೊರಕಿದ್ದು, ಅಧಿಕೃತ ದಾಖಲೆಯಾಗಿದೆ ಎಂದು ಆಯೋಗದ ಸದಸ್ಯ ಬೇಲೂರು ಜವರಯ್ಯ ತಿಳಿಸಿದ್ದಾರೆ.
ಸಾಮಾನ್ಯರಿಗೂ ಸಿಗಲಿ:ಕನ್ನಡ ಹಾಗೂ ಇಂಗ್ಲಿಷ್​ನ ತಲಾ 333 ಪುಟಗಳೊಂದಿಗೆ ಒಟ್ಟು 666 ಪುಟ ಹೊಂದಿರುವ ಪುಸ್ತಕವನ್ನು ಇಲ್ಲಿವರೆಗೆ ಸಾರ್ವಜನಿಕರಿಗೆ ಲಭಿಸುವಂತೆ ಮುದ್ರಣ ಮಾಡುತ್ತಿಲ್ಲ. ಅಧಿಕೃತ ಕನ್ನಡ ಆವೃತ್ತಿ ಜನರಿಗೆ ಲಭಿಸುವಂತಾದರೆ ಸ್ಪಧಾತ್ಮಕ ಪರೀಕ್ಷೆಗಳಿಗೆ, ನಾಗರಿಕ ಸೇವಾ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿರುವವರಿಗೆ ಅನುಕೂಲವಾಗುತ್ತದೆ ಎಂಬ ಒತ್ತಾಯ ಕೇಳಿಬಂದಿದೆ. ಸದ್ಯದಲ್ಲೆ ಸಂಸದೀಯ ವ್ಯವಹಾರಗಳ ಇಲಾಖೆ ವೆಬ್​ಸೈಟ್​ನಲ್ಲಿ ಆನ್​ಲೈನ್ ಆವೃತ್ತಿ ಅಪ್​ಲೋಡ್ ಆಗುತ್ತದೆ. ಆದರೆ ಸಾರ್ವಜನಿಕರಿಗೆ ಲಭಿಸುವಂತೆ ಹೆಚ್ಚಿನ ಪ್ರಮಾಣದಲ್ಲಿ ಮುದ್ರಿಸಿ ವಿತರಿಸುವ ಕಾರ್ಯ ಸರ್ಕಾರದ ಮಟ್ಟದಲ್ಲೆ ಆಗಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ:ಪಶ್ಚಿಮ ಬಂಗಾಳದಲ್ಲಿ “ಯು” ಅಂದ್ರೆ ಅಗ್ಲಿ: ಪಠ್ಯ ಪುಸ್ತಕದಲ್ಲಿತ್ತು ವರ್ಣ ದ್ವೇಷದ ಪಾಠ!
ಕಾನೂನು ಸರಳೀಕರಣ:ರಾಜಭಾಷಾ ಆಯೋಗವನ್ನು ಪ್ರತಿ 3 ವರ್ಷ ಕ್ಕೊಮ್ಮೆ ನವೀಕರಣ ಮಾಡಲಾಗುತ್ತಿದೆ. ಸದ್ಯ ನಿವೃತ್ತ ನ್ಯಾಯಮೂರ್ತಿ ಮಹಿಪಾ ದೇಸಾಯಿ ಅಧ್ಯಕ್ಷರಾಗಿರುವ ಆಯೋಗದ ಅವಧಿ ಜೂನ್​ನಲ್ಲಿ ಮುಕ್ತಾಯವಾಗುತ್ತಿದೆ. ಆದರೆ, ಬಹಳಷ್ಟು ಯೋಜನೆಗಳು ಚಾಲನೆಯಲ್ಲಿರುವ ಕಾರಣ ಮುಂದುವರಿಯುವುದು ಖಚಿತ ಎನ್ನಲಾಗಿದೆ. ಈ ಸಮಿತಿ ಅವಧಿಯಲ್ಲಿ 48 ಕೇಂದ್ರ ಕಾನೂನುಗಳನ್ನು ಕನ್ನಡಕ್ಕೆ ಭಾಷಾಂತರ ಮಾಡಲಾಗಿದೆ. ತ್ರಿವಳಿ ತಲಾಖ್ ನಿಷೇಧ, ಸಿಎಎ ಭಾಷಾಂತರ ಚಾಲನೆ ಯಲ್ಲಿದೆ. 60ರ ದಶಕದಲ್ಲಿ ಅನುವಾದ ಮಾಡಲಾದ ಐಪಿಸಿ, ಭಾರತೀಯ ಅಪರಾಧ ನ್ಯಾಯಸಂಹಿತೆ, ಸಾಕ್ಷ್ಯ ಅಧಿನಿಯಮಗಳನ್ನು ಇಂದಿನ ಕನ್ನಡ ಭಾಷೆಗೆ ಅನುಗುಣವಾಗಿ ಪರಿಷ್ಕೃತ ಗೊಳಿಸಲಾಗುತ್ತಿದೆ ಎಂದು ಆಯೋಗದ ಸದಸ್ಯ ಜವರಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸಾರ್ವಜನಿಕ ಸೇವಕರಿಗೆ ಕರೊನಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − one =
Remember me
