ಬೆಂಗಳೂರು:ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು, ಆದರೆ ಬಹಳ ಚಾಚಿ ಬಿಟ್ಟಿದ್ದೇವೆ. ಹೀಗಾಗಿ, ಹಳೇ ಬಿಲ್ ಪಾವತಿಯೇ ದೊಡ್ಡ ಕೆಲಸವಾಗಿದೆ ಎಂದು ತಮ್ಮ ಇಲಾಖೆಯ ವಸ್ತುಸ್ಥಿತಿಯನ್ನು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಅನಾವರಣಗೊಳಿಸಿದರು. ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಈ ಹಿಂದೆ 4-5 ಸಚಿವರು ಇದ್ದರು. ಅವರ ಹೆಸರನ್ನು ಪ್ರಸ್ತಾಪಿಸಲು ಬಯಸುವುದಿಲ್ಲ. ಇಲಾಖೆಗೆ 8-9 ಸಾವಿರ ಕೋಟಿ ರೂ. ಅನುದಾನ ಬರಲಿದ್ದು, ಅದನ್ನೂ ಮೀರಿ ಕೆಲಸ ತೆಗೆದುಕೊಳ್ಳಲಾಗಿದೆ, ಇದರಿಂದ ಹೆಚ್ಚುವರಿ ಹೊರೆಯಾಗಿದೆ. ಹಿಂದಿನದೇ 4 ಸಾವಿರ ಕೋಟಿ ರೂ.ನಷ್ಟು ಬಾಕಿ ಪಾವತಿಸ ಬೇಕಿದೆ ಎಂದರು. ಪಕ್ಷದ ಕಾರ್ಯಕರ್ತರ ಒತ್ತಾಯ, ತಮ್ಮ ಪಕ್ಷದ ಶಾಸಕರ ಮನವೊಲಿಸಲು, ಕ್ಷೇತ್ರದ ಅಭಿವೃದ್ಧಿ ಎಂದು ಹೆಚ್ಚುವರಿ ಕಾಮಗಾರಿ ಮಂಜೂರು ಮಾಡಿದ್ದರಿಂದ ಬಾಕಿ ಬಿಲ್ ಬೆಳೆದಿದೆ. ಈಗ ಆದ್ಯತೆ ಮೇಲೆ ತೀರಿಸುತ್ತಿದ್ದೇವೆ, ಇದು ವಾಸ್ತವ ಸ್ಥಿತಿ ಎಂದು ವಿವರಿಸಿದರು. ಎಚ್.ಸಿ.ಮಹದೇವಪ್ಪ ಸಚಿವರಾಗಿದ್ದ ಕಾಲದಿಂದಲೂ ಬಿಲ್​ಗಳು ಬಾಕಿ ಇವೆ ಎಂದು ತಿಳಿಸಿದ ಸಿ.ಸಿ.ಪಾಟೀಲ್, ನಾವು ಎಲ್ಲವನ್ನೂ ಚುಕ್ತಾ ಮಾಡುವ ವಿಶ್ವಾಸವಿದೆ, ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇವೆ ಎಂದರು. ಪೀಣ್ಯ ಮೇಲ್ಸೇತುವೆ ವಿಷಯದಲ್ಲಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಪ್ರಸ್ತುತ ವಾಹನ ಸಂಚಾರ ಪುನರ್ ನಿಗದಿ ಪ್ರಕಾರ ನಡೆಯುತ್ತಿದೆ. ಎರಡು ಪಿಲ್ಲರ್ ಬಳಿ ಸಮಸ್ಯೆ ಕಾಣಿಸಿತ್ತು, ಇನ್ನೆಷ್ಟು ಕಡೆ ಈ ರೀತಿಯಾಗಿದೆ ಎಂಬುದನ್ನೂ ಪರಿಶೀಲಿಸಿ ಸೂಕ್ತ ಕ್ರಮಕೈ ಗೊಳ್ಳಲಾಗುತ್ತದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಗಮನಕ್ಕೂ ತರಲಾಗಿದೆ ಎಂದರು.
2275 ಕಿಮೀ ರಸ್ತೆ ಅಭಿವೃದ್ಧಿಗೆ ಟೆಂಡರ್:ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ-4, ಘಟ್ಟ 2ರ ಯೋಜನೆ ಅನುಷ್ಠಾನ ಮಾಡಲಾಗುತ್ತಿದ್ದು, 2275.26 ಕಿಮೀ ಉದ್ದದ ರಸ್ತೆಗಳನ್ನು 3500 ಕೋಟಿ ರೂ. ಅಂದಾಜು ಮೊತ್ತದಲ್ಲಿ ಅಭಿವೃದ್ಧಿಪಡಿಸಲು ಟೆಂಡರ್ ಕರೆಯಲಾಗಿದೆ, ಈ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಸಿ.ಸಿ.ಪಾಟೀಲ್ ತಿಳಿಸಿದರು.
ಬೆಂಗಳೂರು:ಲೋಕೋಪಯೋಗಿ ಇಲಾಖೆಯ ಏಕರೂಪ ದರಪಟ್ಟಿ ಸಂಪುಟ 1, 2 ಮತ್ತು 3ನ್ನು 2022ರ ಮಾರ್ಚ್ 18ರಿಂದ ಅನ್ವಯವಾಗುವಂತೆ ಜಾರಿಗೆ ತರಲಾಗಿದೆ. ಪ್ರಮುಖ ಇಲಾಖೆಗಳಾದ ಲೋಕೋಪಯೋಗಿ, ಜಲಸಂಪನ್ಮೂಲ, ನಗರಾಭಿವೃದ್ಧಿ, ವಸತಿ, ಇಂಧನ ಇಲಾಖೆ ತಮ್ಮದೇ ಆದ ಅನುಸೂಚಿತ ದರಗಳನ್ನು ಅಳವಡಿಸಿ ಅಂದಾಜು ತಯಾರಿಸುತ್ತಿವೆ. ಇದರಿಂದ ಅಂದಾಜುಗಳನ್ನು ತಯಾರಿಸಲು ಮತ್ತು ಟೆಂಡರ್ ಮೌಲ್ಯಮಾಪನ ಮಾಡುವಲ್ಲಿ ಅನೇಕ ಸಮಸ್ಯೆಗಳು ಉದ್ಭವವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಏಕರೂಪ ಸಮಗ್ರ ಅನುಸೂಚಿ ದರಗಳನ್ನು ತಯಾರಿಸಿ ಪ್ರಕಟಿಸುವುದು ಸೂಕ್ತವೆಂದು ಆರ್ಥಿಕ ಇಲಾಖೆ ಅಭಿಪ್ರಾಯ ನೀಡಿತ್ತು. ಹೀಗಾಗಿ ಲೋಕೋಪಯೋಗಿ ಇಲಾಖೆಯನ್ನು ನೋಡಲ್ ಇಲಾಖೆಯನ್ನಾಗಿ ನೇಮಿಸಿ ಎಲ್ಲ ಪ್ರಮುಖ ಇಲಾಖೆಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿ ರಚಿಸಿ, ಆ ಮೂಲಕ ಸಮಗ್ರ ಅನುಸೂಚಿ ದರಗಳನ್ನು ತಯಾರಿಸಿ ಪ್ರಕಟಿಸಲು ಉದ್ದೇಶಿಸಲಾಗಿತ್ತು. ಏಕರೂಪ ದರಪಟ್ಟಿಯನ್ನು ಜಾರಿಗೆ ತರಲು 2020-21ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಸಹ ಮಾಡಲಾಗಿತ್ತು. ಏಕರೂಪ ಅನುಸೂಚಿ ದರಗಳನ್ನು ತಯಾರಿಸಲು ವಿವಿಧ ಇಲಾಖೆಗಳ ನಿವೃತ್ತ ಅಧಿಕಾರಿಗಳನ್ನು ಒಳಗೊಂಡ ತಾಂತ್ರಿಕ ಕಾರ್ಯನಿರತ ತಂಡವನ್ನು ನಿವೃತ್ತ ಪ್ರಧಾನ ಇಂಜಿನಿಯರ್ ಆರ್. ಜೈಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಸೃಜಿಸಲಾಗಿತ್ತು.
ಏಕರೂಪ ದರಪಟ್ಟಿ ತಯಾರಿಕೆ ಕುರಿತು ರಚಿಸಲಾದ ಸಮಿತಿಯು ತಾಂತ್ರಿಕ ಕಾರ್ಯನಿರತ ತಂಡವು 15 ಇಲಾಖೆಗಳ ದರಪಟ್ಟಿಗಳನ್ನು ಅಧ್ಯಯನ ಮಾಡಿದ್ದು, ಈ ದರಪಟ್ಟಿಗಳಲ್ಲಿ ಇರುತವ ವೈಪರಿತ್ಯಗಳ ವ್ಯತ್ಯಾಸಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿದೆ. ಇದೀಗ ಲೋಕೋಪಯೋಗಿ ಇಲಾಖೆ ಬೆಂಗಳೂರು ವೃತ್ತದ ಅಧೀಕ್ಷಕ ಇಂಜಿನಿಯರ್ ಅವರು ಏಕರೂಪ ದರಪಟ್ಟಿಯ ದರಗಳನ್ನು ಹಾಗೂ ಚಾಲ್ತಿಯಲ್ಲಿರುವ 2018-19ನೇ ಸಾಲಿನ ದರಗಳನ್ನು ತುಲನೆ ಮಾಡಿದ್ದು, ರಸ್ತೆ, ಸೇತುವೆ ಮತ್ತು ಕಟ್ಟಡಗಳ ಹೊಸ ದರಗಳಿಂದ ಆಗುವ ಹಣಕಾಸು ಪರಿಣಾಮದ ವಿವರಗಳನ್ನು ತಯಾರಿಸಿದ್ದಾರೆ. ರಸ್ತೆ ಯೋಜನೆಗೆ ಶೇ.14.03. ಹೆಚ್ಚಳ, ಮೈನರ್ ಬ್ರಿಡ್ಜ್- ಶೇ.10.54 ಹೆಚ್ಚಳ, ಕಟ್ಟಡ ನಿರ್ವಣ- ಶೇ.10.10, ವಸತಿ ಗೃಹ- ಶೇ.14 ಹೆಚ್ಚಳವಾಗುತ್ತಿದೆ.
ಇಪ್ಪತ್ತರ ಯುವತಿಯ ಹುಡುಕಾಟದಲ್ಲಿ ‘ರಾಮಾ ರಾಮಾ ರೇ’ ಸತ್ಯ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × five =
Remember me
