ಬೆಂಗಳೂರು:ರಾಜ್ಯದ ಬೊಕ್ಕಸಕ್ಕೆ ಪ್ರತಿಯೊಂದು ರೂಪಾಯಿ ಜಮಾ ಮಾಡಲು, ಆದಾಯ ಹೆಚ್ಚಿಸಿಕೊಳ್ಳಲು ಸರ್ಕಾರ ಕಸರತ್ತು ನಡೆಸಿದೆ. ಹೆಚ್ಚುತ್ತಿರುವ ಖರ್ಚು-ವೆಚ್ಚ ಸರಿದೂಗಿಸಲು ಹೊಸ ಆದಾಯ ಮೂಲ ಶೋಧ ಕಾರ್ಯದಲ್ಲೂ ನಿರತವಾಗಿದೆ.
ಈ ನಡುವೆ ಕರ್ನಾಟಕ ಖನಿಜ ಅಭಿವೃದ್ಧಿ ನಿಗಮವು 109 ಕೋಟಿ ರೂ.ಗಳಿಗೂ ಅಧಿಕ ಲಾಭಾಂಶದ ಚೆಕ್ ನೀಡಿರುವುದು ಹಣಕಾಸು ಹೊಣೆ ಹೊತ್ತ ಸಿಎಂ ಸಿದ್ದರಾಮಯ್ಯ ಅವರನ್ನು ಪುಳಕಗೊಳಿಸಿದೆ.ಸಿಎಂ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಮುಖ್ಯಮಂತ್ರಿಗೆ ಗಣಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮತ್ತು ನಿಗಮದ ಅಧ್ಯಕ್ಷ ಜಿ.ಎಸ್.ಪಾಟೀಲ ಬುಧವಾರ ಭೇಟಿಯಾದರು.
ನಿಗಮವು ಕಳೆದ ಆರ್ಥಿಕ ವರ್ಷ (2023-24)ದಲ್ಲಿ ಗಳಿಸಿದ ಲಾಭದಲ್ಲಿ ಷೇರುದಾರರಿಗೆ ಲಾಭಾಂಶ ನೀಡಿದೆ. ಅದೇ ರೀತಿ ಸರ್ಕಾರಕ್ಕೂ 109.07 ಕೋಟಿ ರೂ. ಲಾಭಾಂಶ ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿಗೆ 10 ಕೋಟಿ ರೂ. ಪ್ರತ್ಯೇಕವಾದ ಚೆಕ್‌ನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಜಂಟಿ ಕಾರ್ಯದರ್ಶಿ ಡಾ.ಕೆ.ವಿ.ತ್ರಿಲೋಕಚಂದ್ರ, ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿಪುಲ್ ಬನ್ಸಲ್ ಇನ್ನಿತರ ಅಧಿಕಾರಿಗಳು ಇದ್ದರು.
ರಾಜ್ಯದ ಖನಿಜ ಅಭಿವೃದ್ಧಿ ನಿಗಮವು ಹಿಂದಿನ ಎರಡು ಆರ್ಥಿಕ ವರ್ಷಗಳಲ್ಲಿ ಲಾಭ ಗಳಿಸಿತ್ತು. ಆದರೆ ಹಿಂದಿನ ವರ್ಷ . ಈ ಬಾರಿ 109 ಕೋಟಿ ರೂ.ಗಳಿಗೂ ಅಧಿಕ ಲಾಭಾಂಶ ಸರ್ಕಾರಕ್ಕೆ ವಹಿವಾಟು ಏರುಮುಖದ ದಾರಿಯಲ್ಲಿರುವುದನ್ನು ಖಚಿತಪಡಿಸಿದೆ.
ಕಳೆದ ಹಣಕಾಸು ವರ್ಷ (2023-24)ದ ಅಧಿಕೃತ ವಾರ್ಷಿಕ ವರದಿ ಇನ್ನೂ ಹೊರಬಂದಿಲ್ಲ. ಆದರೆ ಲಾಭಾಂಶದ ಜತೆಗೆ ಪ್ರತಿ ವರ್ಷದಂತೆ ಸಿಎಂ ಪರಿಹಾರ ನಿಧಿಗೂ 10 ಕೋಟಿ ರೂ. ನೆರವು ನೀಡಿದೆ.ನಿಗಮವು 2020-21ರಲ್ಲಿ 1104.23 ಕೋಟಿ ರೂ. ಆದಾಯ, ತೆರಿಗೆ ಪಾವತಿ ನಂತರ ನಿವ್ವಳ ಲಾಭ 457.98 ಕೋಟಿ ರೂ., ಮುಂದಕ್ಕೆ ಒಯ್ಯಲಾದ ಲಾಭದ ಶಿಲ್ಕು 2365.59 ಕೋಟಿ ರೂ.ಗಳನ್ನು ಲಾಭಾಂಶಕ್ಕೆ ಮುಂಚಿತವಾಗಿ 2803.87 ಕೋಟಿ ರೂ.ಗಳನ್ನು ಸಂತುಲನ ಪಟ್ಟಿಗೆ ಕೊಂಡೊಯ್ದಿತು.
ಅಷ್ಟೇ ಅಲ್ಲ, ನಿಗಮದ ಸ್ವಾಮ್ಯದ ಷೇರುದಾರ ಸರ್ಕಾರಕ್ಕೆ 141.78 ಕೋಟಿ ರೂ. ಲಾಭಾಂಶವನ್ನು ಪಾವತಿ ಮಾಡಿತ್ತು. ಜತೆಗೆ ರಾಜ್ಯ ಸರ್ಕಾರಕ್ಕೆ ರಾಯಧನ, ಮಾರಾಟ ತೆರಿಗೆ, ಜಿಎಸ್‌ಟಿ ರೂಪದಲ್ಲಿ ಒಟ್ಟು 186.46 ಕೋಟಿ ರೂ. ಹಾಗೂ ಸಿಎಂ ಪರಿಹಾರ ನಿಧಿಗೆ 15 ಕೋಟಿ ರೂ. ಪಾವತಿಸಿತ್ತು.
ಅದೇ ರೀತಿ 2022-23ರಲ್ಲಿ 1610.23 ಕೋಟಿ ರೂ. ಆದಾಯ, ತೆರಿಗೆ ಪಾವತಿ ನಂತರ 787.32 ಕೋಟಿ ರೂ. ನಿವ್ವಳ ಲಾಭ, ಮುಂದಕ್ಕೆ ಒಯ್ಯಲಾದ ಲಾಭದ ಶಿಲ್ಕು 2484.97 ಸೇರಿ ಲಾಭಾಂಶಕ್ಕೆ ಮುಂಚಿತವಾಗಿ 3,130.50 ಕೋಟಿ ರೂ. ಸಂತುಲನ ಪಟ್ಟಿಗೆ ಕೊಂಡೊಯ್ದು ಹೆಚ್ಚಳ ದಾಖಲಿಸಿದೆ.
ಷೇರುದಾರ ಅಂದರೆ ಸರ್ಕಾರಕ್ಕೆ ಒಟ್ಟು 236.19 ಕೋಟಿ ರೂ. ಲಾಭಾಂಶ ನೀಡಿದೆ. ಜತೆಗೆ ರಾಯಧನ, ಮಾರಾಟ ತೆರಿಗೆ, ಜಿಎಸ್‌ಟಿ ರೂಪದಲ್ಲಿ 310.72 ಕೋಟಿ ರೂ. ಸಂದಾಯ ಮಾಡಿದರೆ, ಸಿಎಂ ಪರಿಹಾರ ನಿಧಿಗೆ 15 ಕೋಟಿ ರೂ. ಪಾವತಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
