ಬೆಂಗಳೂರುಶಿಕ್ಷಣ ಸಂಸ್ಥೆಗಳಲ್ಲಿರುವ ಬೋಧನೆ, ಮೂಲಸೌಕರ್ಯ ಸೇರಿ ಹಲವು ವಿಭಾಗದ ಗುಣಮಟ್ಟ ತಿಳಿದು ಪದವಿ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಿಗೆ ನೀಡುತ್ತಿರುವ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ (ನ್ಯಾಕ್)ಯ ಗ್ರೇಡ್ ಪರಿಕಲ್ಪನೆಯನ್ನು ರದ್ದುಗೊಳಿಸಿ ಬೈನರಿ ಮಾನ್ಯತೆ ಮತ್ತು ’ಔನ್ನತ್ಯ ಹಂತ’ (ಮೆಚ್ಯರಿಟಿ ಲೆವೆಲ್) ಪರಿಕಲ್ಪನೆ ಜಾರಿಗೊಳಿಸಲಾಗುತ್ತಿದೆ ಎಂದು ಸಂಸ್ಥೆಯ ನಿರ್ದೇಶಕ ಗಣೇಶನ್ ಕಣ್ಣಬೀರನ್ ತಿಳಿಸಿದರು.
ನಾಗರಬಾವಿಯಲ್ಲಿರುವ ನ್ಯಾಕ್ ಕಚೇರಿಯಲ್ಲಿ ಸೋಮವಾರ ’ಗ್ರಾಮೀಣ ಸ್ಥಳಗಳು, ದೂರದ ಸ್ಥಳಗಳಲ್ಲಿರುವ ಶಿಕ್ಷಣ ಸಂಸ್ಥೆಗಳ ಮೇಲಿನ ಗಮನ’ ಎಂಬ ಒಂದು ದಿನದ ಕಾರ್ಯಾಗಾರದ ನಡುವೆ ಅವರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಏನಿದು ಬೈನರಿ ಮಾನ್ಯತೆ?
ಶಿಕ್ಷಣ ಸಂಸ್ಥೆಗಳಿಗೆ ಇಲ್ಲಿಯವರೆಗೂ ಗುಣಮಟ್ಟಕ್ಕೆ ಅನುಗುಣವಾಗಿ ಎ++, ಎ+, ಎ, ಬಿ++ ಹೀಗೆ ಮಾನ್ಯತೆ ನೀಡಲಾಗುತ್ತಿದೆ. ಕೆಲವು ಸಂಸ್ಥೆಗಳಿಗೆ ನ್ಯಾಯಯುತವಾಗಿ ಗ್ರೇಡಿಂಗ್ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿದೆ. ಆದ್ದರಿಂದ ಇನ್ನು ಮುಂದೆ ಗ್ರೇಡ್ ಬದಲಾಗಿ ಮಾನ್ಯತೆ ಪಡೆದಿದೆಯೇ, ಇಲ್ಲವೇ ಎಂಬುದನ್ನಷ್ಟೆ ತಿಳಿಸಲಾಗುತ್ತದೆ. ಇದನ್ನು ಬೈನರಿ ಮಾನ್ಯತೆ ಎನ್ನಲಾಗುತ್ತದೆ. ಒಮ್ಮೆ ಮಾನ್ಯತೆ ಪಡೆದ ಸಂಸ್ಥೆಗಳು ಆ ಬಳಿಕ ಒಂದರಿಂದ ಐದರವರೆಗೆ ಇರುವ ಔನ್ಯತ್ಯ ಮಟ್ಟದ ಪರಿಶೀಲನೆಗೆ ಒಳಗಾಗಲು ಅರ್ಜಿ ಸಲ್ಲಿಸಬಹುದು. ಆದರೆ ಔನ್ನತ್ಯ ಮಟ್ಟದ ಮಾನದಂಡಗಳು ಇನ್ನಷ್ಟೇ ನಿರ್ಧಾರವಾಗಬೇಕಿದೆ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 17 =
Remember me
