ಬೆಂಗಳೂರು: ಡ್ರಗ್ಸ್ ಪೆಡ್ಲರ್‌ಗೆ ಅಕ್ರಮವಾಗಿ ಹಣಕಾಸು ವರ್ಗಾವಣೆ ಮಾಡಿ ಸಿಕ್ಕಿಬಿದ್ದಿರುವ ಕೇರಳ ಮಾಜಿ ಸಚಿವರ ಪುತ್ರ ಬಿನೀಶ್ ಕೊಡಿಯೇರಿಯನ್ನು ನ.20ರ ವರೆಗೆ ಬೆಂಗಳೂರು ವಲಯದ ನಾರ್ಕೊಟಿಕ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕಂಬಿ ಎಣಿಸುತ್ತಿದ್ದ ಬಿನೀಶ್‌ನ್ನು ಮಂಗಳವಾರ ಮಧ್ಯಾಹ್ನ ಇಡಿ ಅಧಿಕಾರಿಗಳು ಬಾಡಿವಾರೆಂಟ್ ಮೂಲಕ ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.
ಈತ ಡ್ರಗ್ಸ್ ಪೆಡ್ಲರ್ ಮೊಹಮದ್ ಅನೂಪ್ ಜತೆ ಒಟನಾಟ ಹೊಂದಿದ್ದು, ಅನೂಪ್ ಬ್ಯಾಂಕ್ ಖಾತೆಗೆ ಕೋಟ್ಯಂತರ ರೂ.ನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದ. ಇದೀಗ ಬಿನೀಶ್‌ಗೆ ಸೇರಿದ ಹಣ ಡ್ರಗ್ಸ್ ವ್ಯವಹಾರಕ್ಕೆ ಬಳಕೆಯಾದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಎನ್‌ಸಿಬಿ ಅಧಿಕಾರಿಗಳು ಈ ಹಿಂದೆ ಜಾರಿ ನಿರ್ದೇಶನಾಲಯ (ಇಡಿ) ಕಚೇರಿಗೆ ಭೇಟಿ ನೀಡಿ ಬಿನೀಶ್ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಇಡಿ ವಿಚಾರಣೆ ನಡೆಸಿದ ಬಳಿಕ ನ್ಯಾಯಾಂಗ ಬಂಧನದಲ್ಲಿದ್ದ ಬಿನೀಶ್‌ನ್ನು ಬಾಡಿ ವಾರೆಂಟ್ ಮೂಲಕ ವಶಕ್ಕೆ ಪಡೆಯಲು ಎನ್‌ಸಿಬಿ ಅಧಿಕಾರಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಇದೀಗ ನ್ಯಾಯಾಲಯ ಅನುಮತಿ ನೀಡಿದ ಬೆನ್ನಲ್ಲೇ ಬಿನೀಶ್‌ನ್ನು ಎನ್‌ಸಿಬಿ ವಶಕ್ಕೆ ಪಡೆದಿದೆ. ಬಿನೀಶ್ ಒಡನಾಟ ಹೊಂದಿದ್ದ ಕೇರಳ ಮೂಲದ ಕೆಲ ಪ್ರಭಾವಿಗಳಿಗೆ ಎನ್‌ಸಿಬಿ ಭೀತಿ ಉಂಟಾಗಿದೆ. ಡ್ರಗ್ಸ್ ಪ್ರಕರಣದಲ್ಲಿ ಸದ್ಯದಲ್ಲೇ ಇನ್ನಷ್ಟು ಜನರನ್ನು ಬಲೆಗೆ ಬೀಳಿಸಲು ಎನ್‌ಸಿಬಿ ಸಿದ್ಧತೆ ನಡೆಸಿದೆ. ವಿಚಾರಣೆ ಬಳಿಕ ಡ್ರಗ್ಸ್ ಪ್ರಕರಣದಲ್ಲಿ ಬಿನೀಶ್ ಪಾತ್ರ ಇದೆಯೇ ? ಎಂಬುದು ಬೆಳಕಿಗೆ ಬರಲಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 4 =
Remember me
