ಬೆಂಗಳೂರು:ಸಿಲಿಕಾನ್‌ ಸಿಟಿಯಲ್ಲಿ‌ ದಿನದಿಂದ‌ ದಿನಕ್ಕೆ ಪಾರಿವಾಳಗಳ ಸಂಖ್ಯೆ ಜಾಸ್ತಿಯಾಗುತ್ತಿದೆ.ಹಾಯಾಗಿದ್ದ ಪಾರಿವಾಳಗಳಿಗೆ ಪಾಲಿಕೆ (BBMP) ದಂಡಾಸ್ತ್ರ ಪ್ರಯೋಗಕ್ಕೆ‌ ಮುಂದಾಗಿದೆ.
ಇನ್ಮೆಲೆ ಪಾರಿವಾಳಗಳಿಗೆ ಊಟ ಹಾಕಿದ್ರೆ 200 ದಂಡಹಾಕುವ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಹೇಳ್ತಿದ್ದಾರೆ.‌ ಹೀಗಾಗಿ ಪಾರಿವಾಳಗಳ ಹಾಟ್ ಸ್ಪಾಟ್​ಗಳಾದ ರೇಸ್ ಕೋರ್ಸ್ ರೋಡ್, ಕಬ್ಬನ್ ಪಾರ್ಕ್, ಸ್ಯಾಂಕಿ ಟ್ಯಾಂಕಿ ರಸ್ತೆಗಳಲ್ಲಿ  ಇನ್ನು ಈ 200 ರೂ ದಂಡ ಹಾಕಲಾಗುತ್ತೆ ಎಂದು ಬೋರ್ಡ್ ಹಾಕಲಾಗಿದೆ. ದಂಡ ಹಾಕೋದಿಕ್ಕೆ ಕಾರಣ ಸಧ್ಯ ಪರಿವಾಳ‌ಗಳ‌ ಸಂಖ್ಯೆ ಹೆಚ್ಚಾಗಿರುವುದು. ಈ ಬೋರ್ಡ್​ ಕಂಡ ಪಕ್ಷಿ ಪ್ರಿಯರು ಗರಂ ಆಗಿದ್ದಾರೆ.
ಪರಿವಾಳಗಳ ರೆಕ್ಕೆಗಳಿಂದ‌ ಅಸ್ತಮ ಕೇಸ್​ಗಳು ಹೆಚ್ಚಾಗ್ತಿವೆ.‌ ಈ ಬೇಸಿಗೆಯ ಸಮಯದಲ್ಲಿ ಪರಿವಾಳಗಳು ಹೆಚ್ಚಾದ್ರೆ ಆರೋಗ್ಯದ ಮೇಲೆ‌ ಪರಿಣಾಮ ಬೀರಲಿದೆ.‌ ಅಲ್ಲದೇ ರೇಸ್ ಕೋರ್ಸ್ ಸರ್ಕಲ್ ನಲ್ಲಿ ಅಭಿವೃದ್ಧಿ ಕೆಲಸ ಶುರು ಆಗಿದೆ. ರೇಸ್ ಕೋರ್ಸ್ ರಸ್ತೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪರಿವಾಳಗಳಿವೆ. ದಿನನಿತ್ಯ ಇಲ್ಲಿಗೆ ಪಕ್ಷಿ ಪ್ರಿಯರು ಬಂದು ಅವುಗಳಿಗೆ ನೀರು, ಆಹಾರ ನೀಡ್ತಾರೆ. ಇದ್ರಿಂದ ರೇಸ್ ಕೋರ್ಸ್ ರಸ್ತೆ ಸರ್ಕಲ್ ಸಂಪೂರ್ಣವಾಗಿ ಪಾರಿವಾಳ ಪಿಕ್ಕೆಯಿಂದ ಹಾಳಾಗ್ತಿದೆ. ಇದನ್ನ ತಪ್ಪಿಸಲು ಪಾಲಿಕೆ‌ ಈ ರೀತಿಯಾಗಿ ದಂಡ ಪ್ರಯೋಗಕ್ಕೆ‌ ಮುಂದಾಗಿದೆ. ಮತ್ತೊಂದೆಡೆ ವೈಧ್ಯರು ಪಾರಿವಾಳಗಳಿಂದ ಕೊಂಚ ದೂರ ಇರಿ ಎಂದು ಸಲಹೆ ನೀಡಿದ್ದಾರೆ.
ಕಂಡ ಕಂಡಲ್ಲಿ ಪಾರಿವಾಳಗಳಿಗೆ ಆಹಾರ ಹಾಕೋದು ಮಾನವೀಯ ಉತ್ತಮ‌ಗುಣ. ಇದು ಮಕ್ಕಳಿಗೆ ಹಾಗೂ‌ ಮಹಿಳೆಯರಿಗೆ ವೃದ್ಧ ರಿಗೆ ಉಸಿರಾಟ ಸಮ್ಯಸೆ ಇರೋರಿಗೆ ಮಾರಕವಾಗಬಹುದು ಎಂದು ಕೆಲವು ವರದಿಗಳು ಬಂದಿದೆ.‌ ಆದರೆ ಇದು ಎಲ್ಲಿಯೂ ಸಾಭೀತಾಗಿಲ್ಲ.‌  ಪಾರಿವಾಳಗಳು ಇರುವುದು ಬೇಡ ಅಂದ್ರೆ ಹೇಗೆ ಅಂತ ಪಾರಿವಾಳ‌ ಪ್ರಿಯರು ಆಕ್ರೋಶ ಹೊರ ಹಾಕಿದ್ದಾರೆ.
ಬೆಳ್ಳಂಬೆಳಗ್ಗೆ ರಾಜ್ಯದ 60 ಕಡೆ ದಾಳಿ ಲೋಕಾಯುಕ್ತ ದಾಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
