ಬೆಂಗಳೂರು: ರಾಜ್ಯವನ್ನು ಪ್ರತಿನಿಧಿಸುವ ಶಾಸಕರು,ಮಾಜಿ ಶಾಸಕರಿಗೆ,ಸುತ್ತಮುತ್ತಲಿನ ವಿವಿಧ ಸಚಿವಾಲಯಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ,ಸಿಬ್ಬಂದಿಗೆ, ಪತ್ರಕರ್ತರು ಮತ್ತು ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಆಹಾರ ನೀಡುವ ಸಲುವಾಗಿ ಶಾಸಕರ ಭವನದಲ್ಲಿ ನಮ್ಮೂರ ಬಿರಿಯಾನಿ ಹೋಟೆಲ್ ಆರಂಭಿಸಲಾಗಿದೆ.ದಿನ ನಿತ್ಯ ನೂರಾರು ಜನರು ಭೇಟಿ ನೀಡುವ ಶಾಸಕರ ಭವನದಲ್ಲಿ ರಾಸಾಯನಿಕ ರಹಿತವಾದ ಮಸಾಲೆಗಳನ್ನು ಉಪಯೋಗಿಸಿ ಸಿದ್ಧಪಡಿಸಿದ ಗುಣಮಟ್ಟದ ಮಾಂಸಹಾರಿ ಊಟ,ತಿಂಡಿಗಳನ್ನು ಒದಗಿಸಬೇಕೆಂಬ ಉದ್ದೇಶದಿಂದ ಶಾಸಕರ ಭವನದ ಕಟ್ಟಡ-೨ರ ನೆಲಮಾಳಿಗೆಯಲ್ಲಿ ನೂತನ ಹೋಟೆಲ್‌ನ್ನು ಗುರುವಾರ ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಉದ್ಘಾಟಿಸಿದರು.
ನಮ್ಮೂರ ಬಿರಿಯಾನಿ ಹೋಟಲ್ ಮಾಲೀಕ ಮಂಜುನಾಥ ಮಾತನಾಡಿ, ನಮ್ಮೂರ ದೊನ್ನೆ ಬಿರಿಯಾನಿ ಹೋಟಲ್ ಸಂಸ್ಥೆಯು ೨೦೨೦ರಲ್ಲಿ ಸ್ಥಾಪನೆಗೊಂಡಿದ್ದು, ಗುಣಮಟ್ಟದ ಮತ್ತು ರುಚಿ ಶುಚಿ ಮಾಂಸಹಾರಿ ಆಹಾರ ಪದಾರ್ಥಗಳನ್ನು ಬೆಂಗಳೂರಿನ ಜನರಿಗೆ ಉಣಬಡಿಸುತ್ತಾ ಬಂದಿದೆ.ಹೋಟೆಲ್‌ನಲ್ಲಿ ದೊರೆಯುವ ಆಹಾರ ಪದಾರ್ಥಗಳಿಗೆ ಸಿಲಿಕಾನ್ ಸಿಟಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಾಸಕರ ಭವನದಲ್ಲಿ ಮೊದಲ ಬಾರಿಗೆ ನೂತನ ಮಳಿಗೆ ಪ್ರಾರಂಭಿಸಿದ್ದೇವೆ. ಇದರಿಂದ ಮತ್ತಷ್ಟು ಜವಾಬ್ದಾರಿ ನಮ್ಮದಾಗಿದೆ ಎಂದರು.ಇದೇ ವೇಳೆ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಶಿವಲಿಂಗಪ್ಪ ಹೊರಟ್ಟಿ ಭೇಟಿ ನೀಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
