|ಗೋವಿಂದರಾಜು ಚಿನ್ನಕುರ್ಚಿಬೆಂಗಳೂರು
ಲಂಚ, ತೆರಿಗೆ ವಂಚನೆ, ಅಪಹರಣ ಮಾಡಿ ಒತ್ತೆಹಣಕ್ಕೆ ಬೇಡಿಕೆ, ವಿದೇಶದಿಂದ ಡ್ರಗ್ಸ್ ಖರೀದಿ, ಹವಾಲ ದುಡ್ಡು, ಬ್ಲಾ್ಯಕ್​ವುನಿಯಂತಹ ಕಳ್ಳವ್ಯವಹಾರಗಳಿಗೂ ‘ಬಿಟ್ ಕಾಯಿನ್’ ದಂಧೆ ವ್ಯಾಪಿಸಿರುವುದು ಪೊಲೀಸರಿಗೆ ತಲೆನೋವು ತಂದಿಟ್ಟಿದೆ. ಬಿಟ್ ಕಾಯಿನ್ ಬಳಕೆಗೆ ಭಾರತದಲ್ಲಿ ಆರ್​ಬಿಐ ಮಾನ್ಯತೆ ಇಲ್ಲದಿದ್ದರೂ ದೊಡ್ಡಮಟ್ಟದಲ್ಲಿ ಚಲಾವಣೆಯಾಗುತ್ತಿದೆ. ಜಾಗತಿಕ ಕ್ರಿಪ್ಟೋ ಕರೆನ್ಸಿ ಕಂಪನಿಯೊಂದರ ಸಂಶೋಧನೆ ಪ್ರಕಾರ ಬಿಟ್ ಕಾಯಿನ್ ವ್ಯವಹಾರದಲ್ಲಿ ಭಾರತ ಏಷ್ಯಾದಲ್ಲೇ ಚೀನಾ ನಂತರದ 2ನೇ ಅತಿದೊಡ್ಡ ರಾಷ್ಟ್ರವಾಗಿದೆ. ವಿಶ್ವದಲ್ಲಿ 6ನೇ ಸ್ಥಾನ ಹೊಂದಿದೆ. ಬ್ಲಾಕ್ ಮಾರ್ಕೆಟ್ ಡ್ರಗ್ಸ್ ದಂಧೆಗೆ ಬಿಟ್ ಕಾಯಿನ್ ಕಾಲಿಟ್ಟಿದೆ. ವಿದೇಶಿ ಪೆಡ್ಲರ್​ಗಳನ್ನು ಸಂರ್ಪಸಿ ಅವರಿಗೆ ಬಿಟ್ ಕಾಯಿನ್ ಕೊಟ್ಟು ಡ್ರಗ್ಸ್ ಖರೀದಿಸಲಾಗುತ್ತಿದೆ. 2020ನೇ ಸಾಲಿನಲ್ಲಿ ಎನ್​ಸಿಬಿ ಮತ್ತು ಸಿಸಿಬಿ ಪೊಲೀಸರು ಬಂಧಿಸಿರುವ ಪೆಡ್ಲರ್​ಗಳು ಡಾರ್ಕ್ ವೆಬ್ ಸೈಟ್​ನಲ್ಲಿ ಡ್ರಗ್ಸ್ ವ್ಯವಹಾರ ನಡೆಸುತ್ತಿರುವುದು ದೃಢಪಟ್ಟಿದೆ.
ಹ್ಯಾಕರ್​ಗಳು ಪ್ರತಿಷ್ಠಿತ ಕಂಪನಿಗಳ ದತ್ತಾಂಶ ಕದ್ದು ಮಾರಾಟ ಮಾಡಿ ಬಿಟ್​ಕಾಯಿನ್ ಪಡೆಯುತ್ತಿದ್ದಾರೆ. ಪಾಸ್ ವರ್ಡ್ ಬದಲಾಯಿಸಿ ಹಫ್ತಾ ವಸೂಲಿಗೂ ಕ್ರಿಪ್ಟೋ ಕರೆನ್ಸಿ ಬಳಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿ ನಡೆದಿದ್ದ ಬಾಲಕನ ಅಪಹರಣ ಪ್ರಕರಣದಲ್ಲಿ ಕಿಡ್ನಾ ್ಯರ್​ಗಳು 100 ಬಿಟ್ ಕಾಯಿನ್ ಕೊಡುವಂತೆ ಬೇಡಿಕೆ ಒಡ್ಡಿದ್ದರು. ಕಳ್ಳ ವ್ಯವಹಾರಕ್ಕೆ ಡಿಜಿಟಲ್ ರೂಪವಾದ ಬಿಟ್ ಕಾಯಿನ್ ಸುರಕ್ಷಿತ ಎಂಬುದೇ ಇದಕ್ಕೆ ಕಾರಣವಾಗಿದೆ. ಇನ್ನು ಉನ್ನತ ಮಟ್ಟದಲ್ಲಿ ನಡೆಯುವ ಭ್ರಷ್ಟಾಚಾರಗಳಿಗೂ ಬಿಟ್​ಕಾಯಿನ್ ಬಳಕೆಯಾಗುತ್ತಿದೆ. ಲಂಚದ ರೂಪದಲ್ಲಿ ದೊಡ್ಡ ಮೊತ್ತದ ಕರೆನ್ಸಿ ವ್ಯವಹಾರ ಕಠಿಣವಾದ ಕಾರಣ ಬಿಟ್​ಕಾಯಿನ್ ರೂಪದಲ್ಲಿ ವ್ಯವಹಾರ ಮುಗಿಸುತ್ತಿದ್ದಾರೆ.
ದೇಶದಲ್ಲಿ ಕ್ರಿಪ್ಟೋ ಕರೆನ್ಸಿ ವಹಿವಾಟು ತಡೆಗಟ್ಟಲು ಕೇಂದ್ರ ಸರ್ಕಾರದ ಕಾನೂನಿನಲ್ಲಿ ಗೊಂದಲ ಮುಂದುವರಿದಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಬಿಟ್ ಕಾಯಿನ್ ದಿನೇದಿನೆ ತನ್ನ ಮೌಲ್ಯ ಹೆಚ್ಚಿಸಿಕೊಳ್ಳುತ್ತಿದೆ. ಭಾರತದಲ್ಲಿ 1 ಬಿಟ್ ಕಾಯಿನ್ ಮೌಲ್ಯ 27,48,680 ರೂ. ಆಗಿದೆ. ಇದೊಂದು ಕಾಗದ ರಹಿತ ಡಿಜಿಟಲ್ ಕರೆನ್ಸಿ. ರೂಪಾಯಿ, ಡಾಲರ್, ಯುರೊ ಅಥವಾ ಇನ್ಯಾವುದೇ ದೇಶದ ಅಧಿಕೃತ ಕರೆನ್ಸಿಯ ಮಾದರಿಯಲ್ಲಿ ಇರುವುದಿಲ್ಲ. ಎಲ್ಲ ವ್ಯವಹಾರ ಇಂಟರ್​ನೆಟ್​ನಲ್ಲಿ ಡಿಜಿಟಲ್ ರೂಪದಲ್ಲಿ ನಡೆಯುತ್ತದೆ.
ಪೊಲೀಸರಿಗೆ ಸವಾಲು:ಕ್ರಿಪ್ಟೋ ಕರೆನ್ಸಿ ಪ್ರಧಾನ ಕಚೇರಿ ವಿದೇಶದಲ್ಲಿರುವ ಕಾರಣ ಬಿಟ್​ಕಾಯಿನ್ ವ್ಯವಹಾರ ನಡೆಸಿದವರ ವಿವರ ಪಡೆಯಲು ಪೊಲೀಸರಿಗೆ ಕಷ್ಟಸಾಧ್ಯವಾಗಿದೆ.
ಲಾಕ್​ಡೌನ್​ನಲ್ಲಿ ಹೆಚ್ಚು:ಜಗತ್ತಿನಲ್ಲಿ ಕರೊನಾ ಲಾಕ್​ಡೌನ್ ಇದ್ದಾಗ ಷೇರು ಮಾರುಕಟ್ಟೆ ಪಾತಾಳಕ್ಕೆ ತಲುಪಿತ್ತು. ತೈಲದ ಮೇಲಿನ ಹೂಡಿಕೆ ಸಹ ಇಳಿಕೆಯಾಗಿ ಚಿನ್ನದತ್ತ ಮುಖ ಮಾಡಿದ್ದರು. ಆದರೆ, ಚಿನ್ನವನ್ನೂ ಮೀರಿಸಿ ಬಿಟ್ ಕಾಯಿನ್​ನತ್ತ ಹೂಡಿಕೆದಾರರು ಹೆಚ್ಚು ಆಸಕ್ತಿ ತೋರಿಸಿದ್ದರು. ಲಾಕ್​ಡೌನ್​ನಲ್ಲಿ ಬಿಟ್​ಕಾಯಿನ್ ಶೇ.800 ಹೂಡಿಕೆ ಹೆಚ್ಚಿಸಿಕೊಂಡಿದೆ.
ಮರಳಿ ಪಡೆಯುವುದು ಕಷ್ಟ ಕಷ್ಟ:ಜನಸಾಮಾನ್ಯರು ಬಿಟ್ ಕಾಯಿನ್ ನಿಯಮ ತಿಳಿದುಕೊಳ್ಳುವುದು ಕಷ್ಟ. ಒಮ್ಮೆ ಬಿಟ್ ಕಾಯಿನ್ ಹೂಡಿಕೆ ಮಾಡಿದರೆ ಮತ್ತೆ ಮರಳಿ ಪಡೆಯಲು ಸಾಧ್ಯವಿಲ್ಲ. ಯಾರು ಯಾರಿಗೆ ವರ್ಗಾವಣೆ ಮಾಡಿದ್ದಾರೆ ಎಂಬುದು ಗೊತ್ತಾಗುವುದಿಲ್ಲ. ಪಾಸ್​ವರ್ಡ್ ಮರೆತರೇ ಮುಗಿತು. ಹಣ ಹಿಂಪಡೆಯಲು ಸಾಧ್ಯವಿಲ್ಲ. ಪಾಸ್​ವರ್ಡ್ ಮರೆತವರ 9,49,000 ಕೋಟಿ ರೂ. (ಶೇ.20) ಬಿಟ್ ಕಾಯಿನ್​ಗಳು ಕ್ರಿಪ್ಟೋ ವ್ಯಾಲೆಟ್​ನಲ್ಲಿ ಸಿಕ್ಕಿಕೊಂಡಿವೆ ಎನ್ನಲಾಗಿದೆ.
ಬಳಕೆ ಹೆಚ್ಚಳ ಏಕೆ?:ಜಗತ್ತಿನ ಯಾವುದೇ ಭಾಗದಿಂದ ಕೆಲವೇ ನಿಮಿಷಗಳಲ್ಲಿ ಹಣ ಕಳಿಸಲು ಅಥವಾ ಪಡೆಯಲು ಬಳಸುತ್ತಿದ್ದಾರೆ. ಅದಕ್ಕಾಗಿ ಇದು ಕಳ್ಳರ ಸಂವಹನವಾಗಿದೆ. ಬ್ಯಾಂಕಿಂಗ್ ಸೇವೆ ಬಳಕೆ ಇಲ್ಲ. ವರ್ಡ್ ಪ್ರೆಸ್, ರೆಡಿಟ್, ನೇಮ್ೕಪ್ ಮತ್ತು ಫ್ಲಾಟ್ಟರ್​ನಂತಹ ಅಂತರ್ಜಾಲ ತಾಣಗಳು ಬಿಟ್ ಕಾಯಿನ್​ಗಳನ್ನು ನೇರವಾಗಿ ವ್ಯವಹಾರ ನಡೆಸುತ್ತಿವೆ. ಕಾನೂನುಬದ್ಧ ಕ್ರಿಪ್ಟೋ ಕರೆನ್ಸಿ ವಿನಿಮಯ ಕೇಂದ್ರಗಳಲ್ಲಿ ಬಿಟ್​ಕಾಯಿನ್ ಖರೀದಿ ಮತ್ತು ಮಾರಾಟಕ್ಕೆ ಗ್ರಾಹಕರು ಕೆವೈಸಿ ವಿವರ, ಬ್ಯಾಂಕ್ ಖಾತೆ ಮತ್ತು ನೋಂದಾಯಿತ ಮೊಬೈಲ್ ನಂಬರ್ ಕೊಟ್ಟರೆ ಸಾಕು. ಕೆವೈಸಿ ಪರಿಶೀಲನೆಗೆ ಪಾನ್ ಮತ್ತು ಆಧಾರ್ ಕೊಟ್ಟರೇ ಸಾಕು ವ್ಯವಹಾರ ಶುರುವಾಗಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 14 =
Remember me
