|ಕೀರ್ತಿನಾರಾಯಣ ಸಿ.ಬೆಂಗಳೂರು
ಪ್ರಪಂಚದ ಬಹುದೊಡ್ಡ ಕ್ರಿಪ್ಟೋಕರೆನ್ಸಿ ಹಗರಣ ಬಿಟ್​ಫಿನೆಕ್ಸ್ ಹ್ಯಾಕಿಂಗ್​ಗೆ ಸಂಬಂಧಿಸಿದಂತೆ ಅಮೆರಿಕದಲ್ಲಿ ಬಂಧಿತರಾಗಿರುವ ನ್ಯೂಯಾರ್ಕ್​ನ ಲಿಶ್ಚನ್ ಸ್ಟೇನ್ ಹಾಗೂ ಹೀಥರ್ ರೀಹ್ನನ್ ಮೊರ್ಗನ್ ದಂಪತಿ ಪ್ರಕರಣಕ್ಕೆ ಭಾರತದ ನಂಟಿರುವ ವಿಚಾರ ಅಲ್ಲಿನ ಪೊಲೀಸರ ತನಿಖೆಯಲ್ಲಿ ದೃಢಪಟ್ಟಿದೆ. ಅಲ್ಲದೆ, ಇದೇ ಹ್ಯಾಕಿಂಗ್​ನಲ್ಲಿ ತನ್ನ ಪಾತ್ರವಿರುವುದಾಗಿ ಅಂತಾರಾಷ್ಟ್ರೀಯ ಹ್ಯಾಕರ್ ‘ಶ್ರೀಕೃಷ್ಣ’ ಸಿಸಿಬಿ ಪೊಲೀಸರ ವಿಚಾರಣೆಯಲ್ಲಿ ಹೇಳಿಕೊಂಡಿದ್ದರಿಂದ ಕರ್ನಾಟಕದ ಬಿಟ್ ಕಾಯಿನ್ ಹಗರಣಕ್ಕೂ ಈ ಜಾಲದ ಸಂಬಂಧವಿರುವ ಬಗ್ಗೆ ಅನುಮಾನ ಶುರುವಾಗಿದೆ.
2016 ಆಗಸ್ಟ್​ನಲ್ಲಿ ಕ್ರಿಪ್ಟೋಕರೆನ್ಸಿ ವಹಿವಾಟಿನ ಬಿಟ್​ಫಿನೆಕ್ಸ್ ವೆಬ್​ಸೈಟ್ ಹ್ಯಾಕ್ ಮಾಡಿದ್ದ ದಂಪತಿ,71 ಮಿಲಿಯನ್ ಮೌಲ್ಯದ (7.10 ಕೋಟಿ) 1,19,754 ಬಿಟ್ ಕಾಯಿನ್ ಕದ್ದಿದ್ದರು. ಇದರ ಮೌಲ್ಯವೀಗ 4.5 ಬಿಲಿಯನ್ (450 ಕೋಟಿ) ಇದೆ. ಕದ್ದ ಬಿಟ್ ಕಾಯಿನ್ ನಗದು ಮಾಡಿಕೊಳ್ಳಲು ಭಾರತೀಯ ಮೂಲದ ಇಮೇಲ್ ಸೇವಾಪೂರೈಕೆದಾರ ಕಂಪನಿಯನ್ನು ಬಳಸಿಕೊಂಡಿದ್ದಾರೆ.
ಡ್ರಗ್ಸ್ ಹಾಗೂ ಕಳವು ದಾಖಲೆ ಮಾರಾಟದ ಆಲ್ಪಾಬೇ ವೆಬ್​ಸೈಟ್​ನ 8 ಖಾತೆಗೆ 2017ರ ಫೆಬ್ರವರಿ, ಮಾರ್ಚ್ ಹಾಗೂ ಏಪ್ರಿಲ್​ನಲ್ಲಿ ಬಿಟ್ ಕಾಯಿನ್ ಕಳುಹಿಸಿದ್ದು, ಅದಕ್ಕೆ ಭಾರತೀಯ ಮೂಲದ ಒಂದೇ ಕಂಪನಿ ಇಮೇಲ್ ಬಳಸಿದ್ದಾರೆ ಎಂದು ಅಮೆರಿಕದ ಎಫ್​ಬಿಐ ಹಾಗೂ ಐಆರ್​ಎಸ್ ತನಿಖಾ ಸಂಸ್ಥೆಗಳು ಅಲ್ಲಿನ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಿವೆ. ಭಾರತದ ಇಮೇಲ್ ಬಳಸಿರುವ ಬಗ್ಗೆ ಉಲ್ಲೇಖಿಸಿರುವ ದಾಖಲೆ ‘ವಿಜಯವಾಣಿ’ಗೆ ಲಭ್ಯವಾಗಿದೆ.
ದಾಖಲೆ ವಸೂಲಿ:ದೊಡ್ಡದೊಡ್ಡ ಸಂಸ್ಥೆಗಳನ್ನೇ ಸೈಬರ್ ಕಳ್ಳರು ಟಾರ್ಗೆಟ್ ಮಾಡಿ ಸರ್ವರ್ ಹ್ಯಾಕ್ ಮಾಡುತ್ತಿದ್ದಾರೆ. ಹೀಗಾಗಿ ವೈರಸ್ ದಾಳಿಗೆ ಹೆದರಿದ ಸಂಸ್ಥೆಯೊಂದು ಒಂದೇ ಬಾರಿಗೆ 40 ಮಿಲಿಯನ್ ಕೊಟ್ಟಿದ್ದು, ದೊಡ್ಡ ಮೊತ್ತದ ವಸೂಲಿ ದಾಖಲೆಯಾಗಿತ್ತು. ಆದರೆ, 2020ರಲ್ಲಿ 88 ಮಿಲಿಯನ್ ಹಾಗೂ 2021ರಲ್ಲಿ 118 ಮಿಲಿಯನ್ ಬಿಟ್ ಕಾಯಿನ್ ರೂಪದಲ್ಲಿ ಒಂದೇ ಬಾರಿಗೆ ವಸೂಲಿ ಮಾಡಲಾಗಿದೆ. 2019ರಲ್ಲಿ ಒಂದೇ ಬಾರಿಗೆ 25 ಮಿಲಿಯನ್ ಬಿಟ್ ಕಾಯಿನ್ ಸುಲಿಗೆ ಮಾಡಿತ್ತು.
ದಾಳಿಯಾದರೆ ಏನಾಗುತ್ತದೆ?:ಕಂಪ್ಯೂಟರ್​ಗಳಲ್ಲಿನ ದತ್ತಾಂಶವನ್ನು ಸಂಕೇತಾಕ್ಷರಗಳಾಗಿ ಮಾರ್ಪಡಿಸುತ್ತಾರೆ. ದಾಳಿಗೆ ಒಳಗಾಗಿರುವ ಕಂಪ್ಯೂಟರ್​ಗಳಲ್ಲಿ ಫೈಲ್ ಓಪನ್ ಮಾಡಲು ಸಾಧ್ಯವಿಲ್ಲ. ಹ್ಯಾಕರ್ಸ್​ಗಳು ಬೇಡಿಕೆ ಇಟ್ಟಷ್ಟು ಹಣ ನೀಡಬೇಕು. ಇಲ್ಲವಾದರೆ, ದಾಖಲೆ ಕಳೆದುಕೊಳ್ಳಲು ಸಿದ್ಧರಾಗಬೇಕಾಗುತ್ತದೆ. ದತ್ತಾಂಶ ಕಳುವಾದರೆ ಆಡಳಿತ ನಿರ್ವಹಣೆ ಸಾಧ್ಯವಾಗುವುದಿಲ್ಲ.
ವರ್ಷದಲ್ಲಿ 140 ವೈರಸ್!:2021ರಲ್ಲಿ 140 ರೀತಿಯ ರ್ಯಾನ್ಸಮ್ೇರ್ ದಾಳಿ ನಡೆದಿದೆ. ಇದರಲ್ಲಿ ಕೊಂಟಿ, ಕ್ಯೂಬಾ, ಡಾರ್ಕ್​ಸೈಡ್, ಕ್ಲಾಪ್, ಹೈವ್, ಬ್ಲಾ್ಯಕ್​ವ್ಯಾಟರ್ ಸೇರಿ 10 ವೈರಸ್​ಗಳ ದಾಳಿ ಮೂಲಕ ಅತಿಹೆಚ್ಚು ಬಿಟ್ ಕಾಯಿನ್ ಪಡೆದು ಟಾಪ್ 10 ಸ್ಥಾನದಲ್ಲಿವೆ. ಇದರಲ್ಲಿ ಕೊಂಟಿ ಒಂದೇ ಸಂತ್ರಸ್ತ ಕಂಪನಿಗಳಿಂದ 180 ಮಿಲಿಯನ್ ವಸೂಲಿ ಮಾಡಿದೆ. ಡಾರ್ಕ್​ಸೈಡ್ 80 ಮಿಲಿಯನ್ ಸುಲಿಗೆ ಮಾಡಿ 2ನೇ ಸ್ಥಾನದಲ್ಲಿದೆ.
ದಾಳಿ ಹೇಗೆ?:ಯಾವುದೋ ಇ ಮೇಲ್​ಗೆ ಅಟ್ಯಾಚ್ ಆಗಿ ವೈರಸ್ ಅನ್ನು ಹ್ಯಾಕರ್ಸ್ ಹರಿಬಿಡುತ್ತಾರೆ. ಇಮೇಲ್ ಓಪನ್ ಮಾಡಿದ ತಕ್ಷಣ ಕಂಪ್ಯೂಟರ್ ಮಾತ್ರವಲ್ಲದೆ ಸಂಪೂರ್ಣ ಡಿಎನ್​ಎಸ್ (ಡೊಮೈನ್ ನೇಮ್ ಸಿಸ್ಟಮ್ ಮೇಲೆ ದಾಳಿ ಮಾಡುತ್ತದೆ. ದಾಳಿಯಾದ ಬಳಿಕ ಕಂಪ್ಯೂಟರ್ ಲಾಕ್ ಆಗುತ್ತದೆ. ಅಷ್ಟೇ ಅಲ್ಲದೇ ಹ್ಯಾಕರ್ಸ್ ನಾವು ನಿಮ್ಮ ಕಂಪ್ಯೂಟರ್ ಲಾಕ್ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ಮೆಸೇಜ್ ಕಂಪ್ಯೂಟರ್ ಸ್ಕ್ರೀನ್​ನಲ್ಲಿ ತೋರಿ ಸುತ್ತದೆ. ಹೀಗಾಗಿ ಅನಾಮಿಕ, ಅನುಮಾನಾಸ್ಪದ ಇಮೇಲ್​ಗಳ ಬಗ್ಗೆ ಎಚ್ಚರ ವಹಿಸುವುದು ಒಳಿತು ಎನ್ನುತ್ತಾರೆ ಸೈಬರ್ ಕ್ರೖೆಂ ತಜ್ಞರು.
ಹ್ಯಾಕಿಂಗ್ ಬ್ಲ್ಯಾಕ್​ಮೇಲ್​:ಪ್ರತಿಷ್ಠಿತ ಕಂಪನಿಗಳು, ಖಾಸಗಿ ಆಸ್ಪತ್ರೆಗಳ ಸರ್ವರ್​ಗಳಿಗೆ ‘ರ್ಯಾನ್ಸಮ್ೇರ್’ ಬಿಟ್ಟು, ಹ್ಯಾಕ್ ಮಾಡುವ ಮೂಲಕ ಬಿಟ್ ಕಾಯಿನ್​ಗಾಗಿ ಬ್ಲಾ್ಯಕ್​ವೆುೕಲ್ ಮಾಡುತ್ತಿರುವ ಪ್ರಕರಣಗಳು 2 ವರ್ಷದಲ್ಲಿ ಭಾರತ ಸೇರಿ ವಿಶ್ವದಾದ್ಯಂತ ಮಿತಿಮೀರಿರುವ ವಿಚಾರವೂ ಬೆಳಕಿಗೆ ಬಂದಿದೆ. 2020ರಲ್ಲಿ 692 ಮಿಲಿಯನ್ ಹಾಗೂ 2021ರಲ್ಲಿ 602 ಮಿಲಿಯನ್ ಮೌಲ್ಯದ ಬಿಟ್ ಕಾಯಿನ್ (130 ಕೋಟಿ ಮೌಲ್ಯ) ವಸೂಲಿ ಮಾಡಲಾಗಿದೆ. ಭಾರತ, ಅಮೆರಿಕ ಸೇರಿ ಪ್ರಮುಖ ದೇಶಗಳನ್ನೇ ಟಾರ್ಗೆಟ್ ಮಾಡಲಾಗುತ್ತಿದ್ದು, ಡೇಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾ ಸಂಸ್ಥೆಯ ಎಚ್ಚರಿಕೆಯಂತೆ ಕಳೆದೆರಡು ವರ್ಷದಲ್ಲಿ ಹ್ಯಾಕರ್ಸ್ ಉಪಟಳ ಅತಿರೇಕಕ್ಕೆ ಹೋಗಿದೆ.
ಬೆಂಗ್ಳೂರಿಗೆ ಎಫ್​ಬಿಐ?:ಬಿಟ್​ಫಿನೆಕ್ಸ್ ಹ್ಯಾಕ್ ಕೇಸಲ್ಲಿ ಖುದ್ದು ಶ್ರೀಕಿಯೇ ತನ್ನ ಪಾತ್ರದ ಬಗ್ಗೆ ಹೇಳಿಕೊಂಡಿರುವ ಹಿನ್ನೆಲೆಯಲ್ಲಿ ಅಮೆರಿಕ ತನಿಖಾ ಸಂಸ್ಥೆ (ಎಫ್​ಬಿಐ) ಏಪ್ರಿಲ್​ನಲ್ಲಿ ಭಾರತಕ್ಕೆ ಬಂದು ತನಿಖೆ ನಡೆಸುವ ಅಥವಾ ಇಲ್ಲಿನ ಪೊಲೀಸರಿಂದ ಮಾಹಿತಿ ಪಡೆಯುವ ಸಾಧ್ಯತೆ ಇದೆ.
ರಾಜ್ಯದಲ್ಲಿ 2 ಆಸ್ಪತ್ರೆ ಹ್ಯಾಕ್:2020ರಲ್ಲಿ ಬೆಂಗಳೂರಿನ ರಾಜರಾಜೇಶ್ವರಿನಗರದ ಆಸ್ಪತ್ರೆಯೊಂದರ ಸರ್ವರ್ ಹ್ಯಾಕ್ ಮಾಡಿದ್ದ ಸೈಬರ್ ಖದೀಮರು, ಇತ್ತೀಚೆಗೆ 2021ರ ನ.14ರಂದು ಮೈಸೂರಿನ ಕಾವೇರಿ ಹಾರ್ಟ್ ಆಂಡ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಹಣಕಾಸು ವಿಭಾಗದ ಸರ್ವರ್ ಹಾಗೂ ರೋಗಿಗಳ ದತ್ತಾಂಶ ಹ್ಯಾಕ್ ಮಾಡಿ, ಬಿಟ್ ಕಾಯಿನ್ ಖರೀದಿಸಿ ್ಟಠಛಿಙ1996ಃಠ್ಠಿಠಿಚ.ಜಿಟಗೆ ಕಳುಹಿಸಲು ಬ್ಲಾ್ಯಕ್​ವೆುೕಲ್ ಮಾಡಿದ್ದು, ಸೈಬರ್ ಪೊಲೀಸರ ತನಿಖೆ ಪ್ರಗತಿಯಲ್ಲಿದೆ.
ಏನಿದು ಪ್ರಕರಣ?:2020 ನವೆಂಬರ್​ನಲ್ಲಿ ಸ್ಯಾಂಡಲ್​ವುಡ್ ಡ್ರಗ್ಸ್ ಪ್ರಕರಣದಲ್ಲಿ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. 2015 ಹಾಗೂ 2016ಲ್ಲಿ ಎರಡು ಬಾರಿ ಬಿಟ್​ಫಿನೆಕ್ಸ್ ವೆಬ್​ಸೈಟ್ ಹ್ಯಾಕ್ ಆಗಿತ್ತು. ಎರಡನೇ ಬಾರಿ ಅಂದರೆ 2016ರಲ್ಲಿ ದೊಡ್ಡಮೊತ್ತದ ಬಿಟ್ ಕಾಯಿನ್ ಕಳುವಾಗಿತ್ತು. ಬಿಟ್​ಫಿನೆಕ್ಸ್ ಹ್ಯಾಕ್ ಮಾಡಿದ ಮೊದಲ ಹ್ಯಾಕರ್ ತಾನೇ ಎಂದು ಶ್ರೀಕೃಷ್ಣ ಹೇಳಿಕೆ ಕೊಟ್ಟಿದ್ದ. ಕಳೆದ ಫೆಬ್ರವರಿಯಲ್ಲಿ ಮೊರ್ಗನ್ ದಂಪತಿಯನ್ನು ಇದೇ ಪ್ರಕರಣದಲ್ಲಿ ಬಂಧಿಸಿ, 350 ಕೋಟಿ ರೂ. ಮೌಲ್ಯದ ಬಿಟ್ ಕಾಯಿನ್ ಜಪ್ತಿ ಮಾಡಲಾಗಿದೆ. ದಂಪತಿ, ಬಿಟ್ ಕಾಯಿನ್ ನಗದು ಮಾಡಿಕೊಳ್ಳಲು ಭಾರತೀಯ ಮೂಲದ ಇಮೇಲ್ ಪ್ರೊವೈಡರ್ ಬಳಸಿ ರುವ ಬಗ್ಗೆ ಎಫ್​ಬಿಐ ಹಾಗೂ ಐಆರ್​ಎಸ್ ತನಿಖೆಯಲ್ಲಿ ಗೊತ್ತಾಗಿದೆ. ಆದರೆ, ಶ್ರೀಕೃಷ್ಣನ ಪಾತ್ರದ ಬಗ್ಗೆ ಯಾವುದೇ ಮಾಹಿತಿ ಉಲ್ಲೇಖಿಸಿಲ್ಲ.
ಭೀಕರ ಅಪಘಾತ: ತಾಯಿ-ಮಗಳ ಸಾವು, ತಂದೆಯ ಪರಿಸ್ಥಿತಿ ಗಂಭೀರ..
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:9 + 6 =
Remember me
