ಕೀರ್ತಿನಾರಾಯಣ ಸಿ. ಬೆಂಗಳೂರುಬಿಟ್ ಕಾಯಿನ್ ಹಗರಣದಲ್ಲಿ ನೇರವಾಗಿ ಭಾಗಿಯಾದ ಆರೋಪದಲ್ಲಿ ತನಿಖಾಧಿಕಾರಿಗಳ ಬಂಧನವಾದ ಬೆನ್ನಲ್ಲೇ ಅವ್ಯವಹಾರದಲ್ಲಿ ಪರೋಕ್ಷ ಹಾಗೂ ಪ್ರತ್ಯಕ್ಷವಾಗಿ ಭಾಗಿಯಾಗಿರುವ ಹಿರಿಯ ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಅವರ ಮಕ್ಕಳಿಗೆ ನಡುಕ ಶುರುವಾಗಿದೆ. ಏತನ್ಮಧ್ಯೆ ಹಗರಣದಲ್ಲಿ ನಡೆದಿರುವ ಬಿಟ್ ಕಾಯಿನ್ ವಹಿವಾಟಿನ ರೂಪಾಯಿ ಮೌಲ್ಯ ಸಾವಿರಾರು ಕೋಟಿ ಎಂದು ಪೊಲೀಸ್ ಅಧಿಕಾರಿಗಳ ವಲಯದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.
ಬಂಧಿತ ಇನ್​ಸ್ಪೆಕ್ಟರ್ ಡಿ.ಎಂ. ಪ್ರಶಾಂತ್ ಬಾಬು ಹಾಗೂ ಜಿಸಿಐಡಿ ಟೆಕ್ನಾಲಜೀಸ್ ಪ್ರೖೆವೇಟ್ ಲಿಮಿಟೆಡ್ ಸಿಇಒ ಸಂತೋಷ್ ಕುಮಾರ್ ವಿಚಾರಣೆಯನ್ನು ಸಿಐಡಿ ವಿಶೇಷ ತನಿಖಾ ತಂಡ (ಎಸ್​ಐಟಿ) ತೀವ್ರಗೊಳಿಸಿದೆ. ಎಫ್​ಐಆರ್​ನಲ್ಲಿ ಹೆಸರಿರುವ ಡಿವೈಎಸ್ಪಿ ಶ್ರೀಧರ ಕೆ. ಪೂಜಾರ, ಇನ್​ಸ್ಪೆಕ್ಟರ್​ಗಳಾದ ಲಕ್ಷಿ್ಮೕಕಾಂತಯ್ಯ, ಚಂದ್ರಾಧರ ಬಂಧನ ನಿಶ್ಚಿತವಾಗಿದ್ದು, ಯಾವ ಸಂದರ್ಭದಲ್ಲಿ ಬೇಕಾದರೂ ದಸ್ತಗಿರಿಯಾಗಬಹುದು.
ಅಪರಾಧ ದಂಡ ಸಂಹಿತೆ (ಸಿಆರ್​ಪಿಸಿ) ಸೆಕ್ಷನ್ 41 (ಸಿ) ಪ್ರಕಾರ (ಮ್ಯಾಜಿಸ್ಟ್ರೇಟ್ ಆದೇಶ ಅಥವಾ ವಾರಂಟ್ ಇಲ್ಲದೆ ಬಂಧಿಸಲು ಅವಕಾಶ) ಮೂವರಿಗೂ ಎಸ್​ಐಟಿ ನೋಟಿಸ್ ಜಾರಿ ಮಾಡಿದೆ. ಅವ್ಯವಹಾರದಲ್ಲಿ ಭಾಗಿಯಾಗಿ ರುವುದಕ್ಕೆ ಸಾಕ್ಷ್ಯಾಧಾರ ಸಿಕ್ಕಿರುವುದರಿಂದ ಬಂಧಿಸುತ್ತೇವೆ ಎಂದೇ ಆರೋಪಿಗಳಿಗೆ ಸೂಚನೆ ಕೊಡಲಾಗಿದೆ. ಬಂಧಿತ ಇನ್​ಸ್ಪೆಕ್ಟರ್ ಪ್ರಶಾಂತ್ ಬಾಬು ಹಾಗೂ ಸಂತೋಷ್ ಕುಮಾರ್ ವಿಚಾರಣೆಯಲ್ಲಿ ನೀಡುವ ಹೇಳಿಕೆಯ ಆಧಾರದ ಮೇಲೆ ಹಗರಣದ ನಂಟು ಹೊಂದಿರುವ ‘ಪ್ರಭಾವಿ’ಗಳ ಭವಿಷ್ಯ ನಿಂತಿದೆ. 2020ರಲ್ಲಿ ಕೆಂಪೇಗೌಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ 12ನೇ ಆರೋಪಿಯಾಗಿರುವ ರಾಬಿನ್ ಖಂಡೇಲ್​ವಾಲ್​ನ ಕ್ರಿಪ್ಟೋ ವ್ಯಾಲೆಟ್​ಗಳಲ್ಲಿದ್ದ 1,83,624 ರೂ. ಮೌಲ್ಯದ ಬಿಟ್ ಕಾಯಿನ್​ಗಳನ್ನು ಬಂಧಿತ ಆರೋಪಿ ಸಂತೋಷ್ ಕುಮಾರ್ ಖಾತೆಗೆ ವರ್ಗಾವಣೆ ಮಾಡಿಕೊಂಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ.
ಅದೇ ರೀತಿ ಶ್ರೀಕಿಯಿಂದಲೂ ಹಲವಾರು ಬಿಟ್ ಕಾಯಿನ್ ವೆಬ್​ಸೈಟ್​ಗಳನ್ನು ಹ್ಯಾಕ್ ಮಾಡಿಸಿರುವುದು, ಹ್ಯಾಕಿಂಗ್​ಗೆ ಪ್ರಯತ್ನಿಸಿರುವುದು ತಾಂತ್ರಿಕ ವಿಶ್ಲೇಷಣಾ ವರದಿಯಲ್ಲಿ ದೃಢಪಟ್ಟಿದೆ ಎಂದು ಎಸ್​ಐಟಿ ಅಧಿಕಾರಿಗಳೇ ಎಫ್​ಐಆರ್​ನಲ್ಲಿ ಉಲ್ಲೇಖಿಸಿದ್ದಾರೆ.
ಸದ್ಯ 1 ಬಿಟ್ ಕಾಯಿನ್​ನ ರೂಪಾಯಿ ಮೌಲ್ಯ 34 ಲಕ್ಷ . ಪ್ರತಿಷ್ಠಿತ ಬಿಟ್ ಕಾಯಿನ್ ಎಕ್ಸ್​ಚೇಂಜ್ ವೆಬ್​ಸೈಟ್​ಗಳಲ್ಲಿ ಲಕ್ಷಾಂತರ ಬಿಟ್ ಕಾಯಿನ್​ಗಳು ಇರುತ್ತವೆ. ಅಂತಹ ವೆಬ್​ಸೈಟ್​ಗಳನ್ನು ಶ್ರೀಕಿ ಹ್ಯಾಕ್ ಮಾಡಿದ್ದಾನೆ. 2021 ಜ.15ರಂದು 31 ಬಿಟ್ ಕಾಯಿನ್​ಗಳನ್ನು ಶ್ರೀಕಿ ಖಾತೆಯಿಂದ ಜಪ್ತಿ ಮಾಡಿರುವುದಾಗಿ ಹಿರಿಯ ಅಧಿಕಾರಿಗಳು ಸುದ್ದಿಗೋಷ್ಠಿ ಮಾಡಿ ಘೋಷಿಸಿದ್ದರು. 31 ಬಿಟ್ ಕಾಯಿನ್ ರೂಪಾಯಿ ಮೌಲ್ಯವೇ 10 ಕೋಟಿ ರೂ. ಇದೆ. ಇನ್ನು ಶ್ರೀಕಿಯ ವ್ಯಾಲೆಟ್​ನಲ್ಲಿ 186.811 ಬಿಟ್ ಕಾಯಿನ್​ಗಳಿದ್ದವು. ಅವುಗಳ ಜಪ್ತಿಗೆ ಕೋರ್ಟ್ ಅನುಮತಿ ಕೊಟ್ಟಿತ್ತು. ಇದರ ಈಗಿನ ಮೌಲ್ಯ 63.78 ಕೋಟಿ ರೂ. ಇದ್ಯಾವುದನ್ನು ಅಧಿಕೃತವಾಗಿ ಆಗಿನ ತನಿಖಾಧಿಕಾರಿಗಳು ದಾಖಲಿಸಿಲ್ಲ.
ಪ್ರಕರಣಕ್ಕೂ ಹ್ಯಾಕರ್ ಶ್ರೀಕಿ ನಂಟಿರುವುದು ಗೊತ್ತಾಗಿತ್ತು. 2016 ಆಗಸ್ಟ್​ನಲ್ಲಿ ಕ್ರಿಪ್ಟೋಕರೆನ್ಸಿ ವಹಿವಾಟಿನ ಬಿಟ್​ಫಿನೆಕ್ಸ್ ವೆಬ್​ಸೈಟ್ ಅನ್ನು ನ್ಯೂಯಾರ್ಕ್​ನ ಲಿಶ್ಚನ್ ಸ್ಟೇನ್ ಹಾಗೂ ಹೀಥರ್ ರೀಹ್ನನ್ ಮೊರ್ಗನ್ ದಂಪತಿ ಹ್ಯಾಕ್ ಮಾಡಿ 1,19,754 ಬಿಟ್ ಕಾಯಿನ್ ಕದ್ದಿದ್ದರು. ಇದೇ ಸಂದರ್ಭದಲ್ಲಿ ಬಿಟ್​ಫಿನೆಕ್ಸ್ ವೆಬ್​ಸೈಟ್ ಹ್ಯಾಕ್ ಮಾಡಿದ ಮೊದಲ ಹ್ಯಾಕರ್ ತಾನೇ ಎಂದು ಶ್ರೀಕೃಷ್ಣ ಹೇಳಿಕೊಂಡಿದ್ದ. ಸಾವಿರಾರು ಕೋಟಿ ರೂ. ಹಗರಣ ನಡೆದಿದೆ ಎಂಬುದಕ್ಕೆ ಈ ಪ್ರಕರಣವೂ ಸಾಕ್ಷ್ಯವಾಗಿದೆ.
ಶ್ರೀಕಿ ಹಾಗೂ ರಾಬಿನ್ ವ್ಯಾಲೆಟ್​ನಲ್ಲಿದ್ದ ಬಿಟ್ ಕಾಯಿನ್​ಗಳು ಹಾಗೂ ಕ್ರಿಪ್ಟೋ ಕರೆನ್ಸಿ ಎಕ್ಸ್​ಚೆಂಜ್ ವೆಬ್​ಸೈಟ್​ಗಳಿಂದ ಹ್ಯಾಕ್ ಮಾಡಿದ್ದ ಬಿಟ್ ಕಾಯಿನ್​ಗಳನ್ನು ಕೆಲ ಪ್ರಭಾವಿ ರಾಜಕಾರಣಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಮಕ್ಕಳ ವ್ಯಾಲೆಟ್​ಗಳಿಗೆ ವರ್ಗಾವಣೆಯಾಗಿದೆ. ಅದರ ರೂಪಾಯಿ ಮೌಲ್ಯ ಸಾವಿರಾರು ಕೋಟಿ ರೂ. ಇದೆ. ಆ ಹಣವನ್ನು ಸ್ಥಳೀಯ ಬ್ಯಾಂಕ್​ಗಳಲ್ಲಿ ನಗದು ರೂಪದಲ್ಲಿ ಹಂತಹಂತವಾಗಿ ಡ್ರಾ ಮಾಡಿಕೊಂಡಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಸಾಕ್ಷ್ಯನಾಶ ಬಗ್ಗೆ ಎಚ್ಚರಿಸಿದ್ದ ಸೈಬರ್:ಹಗರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಹಾಗೂ ಪ್ರಭಾವಿಗಳಿಗೆ ಉರುಳಾಗುವಂಥ ‘ಸಾಕ್ಷ್ಯನಾಶ’ಪಡಿಸಿರುವ ಬಗ್ಗೆ ಆಗಲೇ ಸಿಐಡಿ ಸೈಬರ್ ಅಧಿಕಾರಿಗಳ ತನಿಖೆಯಲ್ಲಿ ದೃಢಪಟ್ಟಿತ್ತು. ವಿಧಿವಿಜ್ಞಾನ ತಜ್ಞರಿಂದ ವಿಶ್ಲೇಷಣೆ ನಡೆಸುವ ಅಗತ್ಯವಿದೆ. ಆಗ ಮಾತ್ರ ಸತ್ಯ ಬಯಲಾಗಲಿದೆ. ಹೀಗಾಗಿ ಸಾಕ್ಷ್ಯನಾಶಪಡಿಸಿರುವ ಬಗ್ಗೆ ತನಿಖೆ ನಡೆಸುವಂತೆ ಡಿಜಿಪಿಗೆ ಸೈಬರ್
ಸಿಐಡಿಗೂ ಮುನ್ನ ಸಿಸಿಬಿ ಸೆರೆ:2019ರಲ್ಲಿ ರಾಜ್ಯ ಸರ್ಕಾರದ ಇ-ಪ್ರಕ್ಯೂರ್​ವೆುಂಟ್ ವೆಬ್​ಸೈಟ್ ಹ್ಯಾಕ್ ಮಾಡಿದ್ದ ಶ್ರೀಕಿ, 11.55 ಕೋಟಿ ರೂ. ಎಗರಿಸಿದ್ದ. ಈ ಬಗ್ಗೆ ತನಿಖೆ ಕೈಗೊಂಡ ಸಿಐಡಿ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿದ್ದ ಶ್ರೀಕಿ ಮತ್ತು ಇತರ ಸ್ವಯಂ ಸೇವಾ ಸಂಸ್ಥೆಗಳ 14 ಬ್ಯಾಂಕ್ ಖಾತೆಗಳನ್ನು ಬ್ಲಾ್ಯಕ್ ಮಾಡಿ 1.44 ಕೋಟಿ ರೂ. ಜಪ್ತಿ ಮಾಡಿದ್ದರು. ಇದೇ ಪ್ರಕರಣದಲ್ಲಿ ಶ್ರೀಕಿ ಬಂಧನಕ್ಕೆ ಸಿಐಡಿ ಅಧಿಕಾರಿಗಳು ಖೆಡ್ಡಾ ತೋಡಿದ್ದರು. ಸಿಐಡಿಗೂ ಮುನ್ನವೇ ಶ್ರೀಕಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಆಗ ಸಿಸಿಬಿ ತಂಡದಲ್ಲಿದ್ದ ತನಿಖಾಧಿಕಾರಿಗಳೇ ಈಗ ಆರೋಪಿ ಸ್ಥಾನದಲ್ಲಿದ್ದು, ಬಂಧಿತರಾಗುತ್ತಿದ್ದಾರೆ.
ಅಧಿಕಾರಿಗಳಿಗೆ ಸಂತೋಷ್​ಕುಮಾರ್ ಆಪ್ತ:ಎಚ್​ಎಸ್​ಆರ್ ಲೇಔಟ್​ನಲ್ಲಿರುವ ಜಿಸಿಐಡಿ ಟೆಕ್ನಾಲಜೀಸ್ ಪ್ರೖೆವೇಟ್ ಲಿಮಿಟೆಡ್ ಸಿಇಒ ಸಂತೋಷ್ ಕುಮಾರ್ ಪೊಲೀಸ್ ಇಲಾಖೆಯಲ್ಲಿರುವ ಹಲವು ಪೊಲೀಸ್ ಅಧಿಕಾರಿಗಳಿಗೆ ಆಪ್ತನಾಗಿದ್ದ. ಈತನ ಮುಖಾಂತರವೇ ಬಿಟ್ ಕಾಯಿನ್ ಹಗರಣ ನಡೆದಿದೆ. ಸಂತೋಷ್ ಹೇಳಿಕೆ ಆಧರಿಸಿ ಈತನ ಜತೆ ಗುರುತಿಸಿಕೊಂಡಿರುವ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಂಕಷ್ಟ ಶುರುವಾಗಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
