ಬೆಂಗಳೂರು:ಚಿಕ್ಕ ವಿಷಯವನ್ನೇ ದೊಡ್ಡದಾಗಿ ಮಾಡಿ ಸದನದಿಂದ 10 ಜನ ಬಿಜೆಪಿ ಶಾಸಕರನ್ನು ಅಮಾನತು ಮಾಡಿದ ಕ್ರಮ ಅಕ್ಷಮ್ಯವೆಂದು ವಿಧಾನಸಭೆ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು.ಬೆಂಗಳೂರಿನ ಗಾಂಧಿ ಭವನದಲ್ಲಿ ‘ಸಿಟಿಜನ್ಸ್ ಾರ್ ಡೆಮಾಕ್ರೆಸಿ’ ಗುರುವಾರ ಆಯೋಜಿಸಿದ್ದ ’ಶಾಸಕರ ಅಮಾನತು ಒಂದು ಚರ್ಚೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯದ ಸದನದಲ್ಲಿ ಬಹಳ ಕಡಿಮೆ ಬಾರಿ ಅಮಾನತುಗಳಾಗಿವೆ. ಮೊನ್ನೆ ದುರ್ಬೀನು ಹಾಕಿಕೊಂಡು ಹುಡುಕಿದರೆ ಸಿಗುವಷ್ಟು ಚಿಕ್ಕ ವಿಷಯಕ್ಕೆ 10 ಶಾಸಕರ ಅಮಾನತಾಗಿದೆ. ಇದರಲ್ಲಿ ಮುಖ್ಯಮಂತ್ರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರ ಪಾತ್ರವೂ ಇದೆ. ಸದನದ ರಾಜಕೀಯ ದುರ್ಬಳಕೆಗೆ ಸ್ಪಷ್ಟ ಉದಾಹರಣೆಯಾಗಿದೆ ಎಂದರು.ಸುಗಮ ಕಲಾಪ ನಡೆಯಲು ಆಡಳಿತ ಪಕ್ಷದ ಹೊಣೆಯೂ ಪ್ರಮುಖವಾದುದು. ದೇಶದಲ್ಲಿ 50-60 ವರ್ಷಗಳ ಸುದೀರ್ಘ ಆಡಳಿತವನ್ನು ಕಾಂಗ್ರೆಸ್ ನಡೆಸಿದೆ. ಪೇಪರ್ ಹರಿದು ಎಸೆದರು ಎಂಬ ಘಟನೆ ಮುಂದಿಟ್ಟುಕೊಂಡು ಅಮಾನತಿನ ಶಿಕ್ಷೆ ನೀಡಿರುವುದು ಸರಿಯಲ್ಲ. ಇದು, ವ್ಯವಸ್ಥೆಗೆ ಹೊಡೆ ನೀಡುತ್ತದೆ ಎಂದು ಕಾಗೇರಿ ಕಳವಳ ವ್ಯಕ್ತಪಡಿಸಿದರು.
ಯೋಗೀಶ್ ಭಟ್ ಅವರು ಡೆಪ್ಯುಟಿ ಸ್ಪೀಕರ್ ಆಗಿದ್ದಾಗ ಪೇಪರ್ ವೇಯ್ಟನ್ನೇ ಅವರತ್ತ ಒಗೆದಿದ್ದರು. ೈಲುಗಳನ್ನು ಕಿತ್ತೆಸೆದಿದ್ದರು. ಆಗೆಲ್ಲ ಸಸ್ಪಂಡ್ ಮಾಡಿದ್ದರೆ ?. ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ 10 ಶಾಸಕರನ್ನು ಅಮಾನತು ಮಾಡಿರುವುದು ಕ್ಷಮಾರ್ಹವಲ್ಲ.
ಹಿರಿಯ ಸಚಿವರು ಮಧ್ಯೆ ಪ್ರವೇಶಿಸಿ ವಿಪಕ್ಷದವರಿಗೆ ಮಾತನಾಡಲು ಅವಕಾಶ ಕೊಡಬೇಕೆಂದು ತಿಳಿಸಬೇಕಿತ್ತು. ಉಗುರು ತುದಿಯಲ್ಲಿ ಹೋಗುವುದನ್ನು ಖಡ್ಗ ತೆಗೆದುಕೊಂಡು ಕತ್ತರಿಸುವುದು ಶೋಭೆಯಲ್ಲ. ಪಶ್ಚಿಮಬಂಗಾಳ, ಕೇರಳದಲ್ಲಿ ರಾಜ್ಯಪಾಲರನ್ನು ಮಾತನಾಡಲು ಬಿಡದ ಸ್ಥಿತಿ ಬಂದಿದೆ. ಲೋಕಸಭೆಯಲ್ಲಿ ಏನಾಗುತ್ತಿದೆ ?. ವಂಶಪಾರಂಪರ್ಯ ಆಡಳಿತದ ಮನಸ್ಥಿತಿಯನ್ನು ಒಪ್ಪಿಕೊಂಡ ಜನರು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಬಲಪಡಿಸಲು ಅಸಾಧ್ಯ ಎಂದರು.
ಕರ್ನಾಟಕದಲ್ಲಿ ಒಳ್ಳೊಳ್ಳೆಯ ಮುಖ್ಯಮಂತ್ರಿ, ಸ್ಪೀಕರ್, ಪ್ರತಿಪಕ್ಷಗಳ ನಾಯಕರು ಕೆಲಸ ಮಾಡಿದ್ದಾರೆ. ಸದನದ ಒಳಗೆ ಅಂಗಿ ಬಿಚ್ಚಿ ಅದನ್ನು ತೂರಾಡಿಕೊಂಡು ಓಡಾಡಿದರೆ ನಮ್ಮ ಸದನದ ಘನತೆ ಹೆಚ್ಚಲು ಸಾಧ್ಯವೆ ?. ಅಂತಹ ಸಂದರ್ಭದಲ್ಲಿ ನಾನೂ ಅವರನ್ನು ಸಸ್ಪೆಂಡ್ ಮಾಡಿದ್ದೇನೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ನೆನಪಿಸಿದರು.
ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ ತಪ್ಪನ್ನು ತಪ್ಪೆಂದು ಹೇಳದಿದ್ದರೆ ಈಗಾಗಲೇ ಕೆಟ್ಟು ಹೋದ ವ್ಯವಸ್ಥೆಯಲ್ಲಿ ಸುಧಾರಣೆ ತರುವುದು ಹೇಗೆ ಸಾಧ್ಯ?. ಸಾಂವಿಧಾನಿಕ ಸಂಸ್ಥೆಗಳಲ್ಲಿ ಸ್ವಾಯತ್ತ ಕ್ರಮೇಣ ಕುಸಿತ ಉಂಟಾಗಿದೆ. ಬೇಲಿಯೇ ಎದ್ದು ಹೊಲ ಮೇಯ್ದರೆ ಕಾಪಾಡುವವರು ಯಾರು ?. ಇವತ್ತಿನ ಆಡಳಿತ ವ್ಯವಸ್ಥೆಗೆ ಲಂಗೂ ಇಲ್ಲ, ಲಗಾಮೂ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬ್ರಿಟಿಷರ ಈಸ್ಟ ಇಂಡಿಯ ಕಂಪೆನಿ ಹೋಗಿದೆ. ವಿಪಕ್ಷಗಳ ಈಟ್ ‘ಇಂಡಿಯ’ ಕಂಪೆನಿ ಈಗ ಬಂದಿದೆ. ಇವರಿಗೆ ಸ್ಥಿರ ಸರ್ಕಾರ ಕೊಡಲು ಸಾಧ್ಯವೆ ?. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದ ನಾಯಕತ್ವ ವಿಶ್ವ ನಾಯಕತ್ವವಾಗಿದೆ ಎಂದು ಎ.ಟಿ.ರಾಮಸ್ವಾಮಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಮಾತನಾಡಿ ಪ್ರಜಾಪ್ರಭುತ್ವ ಎಂದರೆ ಕಾಂಗ್ರೆಸ್‌ನವರು ಎಲ್ಲಿದೆ ಎಂದು ಕೇಳಿದವರು. ಪೇಪರ್ ಹರಿದು ಎಸೆದಿದುನ್ನಷ್ಟೇ ನೋಡಿದರೆ ಅಪರಾಧ ಎನಿಸುತ್ತದೆ. ಅದರ ಹಿನ್ನೆಲೆ ಗಮನಿಸಬೇಕು ಎಂದರು.
ಇವತ್ತಿನ ಮುಖ್ಯಮಂತ್ರಿ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು. ವಿಧಾನಸಭೆಯಲ್ಲಿ ಪೈಲ್ವಾನರಂತೆ ತೊಡೆ ತಟ್ಟಿದವರು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರ ನಡೆಯೂ ಬೇಸರ ಉಂಟು ಮಾಡಿದೆ ಎಂದು ಹೇಳಿದರು.
ಈಗಿನ ನಡೆ ಗಮನಿಸಿದರೆ ಮುಂದಿನ ಬಾರಿ ಕೂಡ ಮಾಡಬಹುದೇನೋ ಎಂಬ ನೋವು ವ್ಯಕ್ತಪಡಿಸಿದ ಶಂಕರಮೂರ್ತಿ, ಕ್ಷುಲ್ಲಕ ರಾಜಕಾರಣದಿಂದ ನಿರಾಶರಾಗಬೇಕಾದ ಅಗತ್ಯವಿಲ್ಲವೆಂದು ಧೈರ್ಯ ತುಂಬಿದರು. ಬೆಂಗಳೂರಿನ ಸಿಟಿಜನ್ಸ್ ಾರ್ ಡೆಮಾಕ್ರೆಸಿಯ ಅಧ್ಯಕ್ಷ ಚಂದ್ರಶೇಖರ್, ಅಜಯ್ ಹೆಬ್ಬಾರ್ ಇದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
