ಬೆಂಗಳೂರು:ಷರತ್ತು ರಹಿತವಾಗಿ ಗ್ಯಾರಂಟಿ ಯೋಜನೆ ಜಾರಿ ಮಾಡಬೇಕು ಮತ್ತು ಕೊಟ್ಟ ಮಾತಿನಂತೆ ತಡಮಾಡದೇ ಅನುಷ್ಠಾನ ಮಾಡಬೇಕೆಂದು ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿ ರೋಷಾವೇಶ ವ್ಯಕ್ತಪಡಿಸಿ ಹೋರಾಟ ನಡೆಸಿ, ನಿಲುವಳಿ ಮಂಡಿಸಲು ಮುಂದಾಗಿದ್ದ ಬಿಜೆಪಿ, ಬುಧವಾರ ಧರಣಿಯಿಂದ ಹಿಂದೆ ಸರಿದಿದೆ. ಈ ಮೂಲಕ ಹಳಿ ತಪ್ಪಿದ್ದ ಕಲಾಪ ಸರಿಯಾದ ದಿಕ್ಕಿನತ್ತ ಸಾಗಿದೆ.
ದಿನದ ಆರಂಭದಲ್ಲಿಯೇ ಬಿಜೆಪಿ ಧರಣಿ ನಡೆಸಿತಾದರೂ, ನಿಲುವಳಿ ಸೂಚನೆ ಬದಲು ನಿಯಮ 69ರಡಿ ಚರ್ಚೆಗೆ ಅವಕಾಶ ನೀಡುವುದಾಗಿ ಸ್ಪೀಕರ್ ಭರವಸೆ ನೀಡಿದ ಬಳಿಕ ತನ್ನ ನಿಲುವು ಸಡಿಲಿಸಿತು. ಈ ನಡುವೆ ಸರ್ಕಾರ ಮತ್ತು ಪ್ರತಿಪಕ್ಷದ ನಡುವೆ ಹರಿತ ಮಾತುಗಳು ಪರಸ್ಪರ ವರ್ಗಾವಣೆಯಾಯಿತು. ಬಳಿಕ ಪೂರ್ವ ನಿಗದಿಯಂತೆ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ, ವಿಧೇಯಕಗಳ ಮಂಡನಾ ಪ್ರಕ್ರಿಯೆ ನಡೆಯಿತು.
ದೋಖಾ ಗ್ಯಾರಂಟಿ:ಪ್ರಶ್ನೋತ್ತರ ಕಲಾಪದ ಬಳಿಕ ನಿಲುವಳಿ ಸೂಚನೆ ಪ್ರಸ್ತಾವನೆ ಮಂಡಿಸಿದ ಆರ್.ಅಶೋಕ್, ಕಾಂಗ್ರೆಸ್ ನೀಡಿದ್ದು ದೋಖಾ ಗ್ಯಾರಂಟಿ. ಚುನಾವಣೆಗೆ ಮುನ್ನ ಬಣ್ಣದ ಬಣ್ಣದ ಜಾಹೀರಾತುಗಳನ್ನು ನೀಡಿ ಜನರನ್ನು ಮರುಳು ಮಾಡಿ ನೀವು ಅಧಿಕಾರಕ್ಕೆ ಬಂದಿರಿ. ಐದು ಗ್ಯಾರಂಟಿಗಳನ್ನು ಮೊದಲ ಕ್ಯಾಬಿನೆಟ್​ನಲ್ಲಿ ಜಾರಿಗೊಳಿಸುತ್ತೇವೆ ಎಂದು ಸುಳ್ಳು ಭರವಸೆ ನೀಡಿದ್ದಿರಿ. ಆದರೆ ಈಗ ಪ್ರತಿಯೊಂದಕ್ಕೂ ಷರತ್ತು ವಿಧಿಸಿದರೆ ಹೇಗೆ ಎಂದು ಪ್ರಶ್ನೆ ಮಾಡಿದರು.
ಜಟಾಪಟಿ:ಚುನಾವಣೆಗೆ ಪೂರ್ವದಲ್ಲಿ ಕಾಂಗ್ರೆಸ್ ಪತ್ರಿಕೆಗಳಿಗೆ ನೀಡಿದ ಜಾಹೀರಾತನ್ನು ಸದನದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರದರ್ಶನ ಮಾಡಿದರು. ಮತದಾರರಿಗೆ ಈ ರೀತಿ ವಂಚಿಸಿ ನೀವು ಅಧಿಕಾರಕ್ಕೆ ಬಂದು ಈಗ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದೀರಿ ಎಂದು ಟೀಕಾಪ್ರಹಾರ ನಡೆಸಿದರು.
ಯತ್ನಾಳ್ ಮಾತು ಜಾರ್ಜ್ ಅವರನ್ನು ಕೆರಳಿಸಿ, ಬಿಜೆಪಿ ಹಾದಿ ತಪ್ಪಿಸುತ್ತಿದೆ. ನಾವು ಐದು ಗ್ಯಾರಂಟಿ ಜಾರಿಗೆ ತಂದಿದ್ದೇವೆ ಎಂದರು. ಇದಕ್ಕೆ ಯತ್ನಾಳ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.ಬಿಜೆಪಿ-ಕಾಂಗ್ರೆಸ್ ಶಾಸಕರ ಜಟಾಪಟಿ ನಡುವೆ ಮಧ್ಯ ಪ್ರವೇಶಿಸಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್​ನವರು ಬಣ್ಣ ಬಣ್ಣದ ಜಾಹೀರಾತು ನೀಡಿದ್ದನ್ನು ನಂಬಿ ಜನ ಮತ ಹಾಕಿದ್ದಾರೆ. ಈಗ ಚರ್ಚೆಗೆ ಅವಕಾಶ ನೀಡಿ ತಪ್ಪೇನಿದೆ ? ಎಂದು ವಾದಿಸಿದರು.
ಡಿಕೆಶಿ ಸಿಡಿಮಿಡಿ:ಬಿಜೆಪಿ ಕಡೆಯಿಂದ ನಡೆದ ವಾಗ್ದಾಳಿ ಮತ್ತು ಕುಮಾರಸ್ವಾಮಿಯವರ ಪ್ರವೇಶದ ಬಳಿಕ ಸಿಡಿಮಿಡಿಗೊಂಡ ಡಿಸಿಎಂ ಡಿ.ಕೆ.ಶಿವಕುಮಾರ್, ಬಿಜೆಪಿಯ ನಿಲುವಳಿ ಸೂಚನೆಗೆ ನೀವು ಅವಕಾಶ ಮಾಡಿಕೊಡಬಾರದಿತ್ತು. ಬಿಜೆಪಿಯವರು ನಡೆಸುತ್ತಿರುವುದು ಪಶ್ಚಾತಾಪದ ಪ್ರತಿಭಟನೆ. ರಾಜ್ಯದ ಜನರಿಗೆ ನಾವು ಕೊಟ್ಟ ಕಷ್ಟವನ್ನು ಕಾಂಗ್ರೆಸ್ ಪರಿಹರಿಸುತ್ತಿದೆ ಎಂಬ ಪಶ್ಚಾತ್ತಾಪ ಅವರನ್ನು ಕಾಡುತ್ತಿದೆ. ಹೀಗಾಗಿ ಈಗ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.ಬಿಜೆಪಿಯ ಆರೋಪಗಳಿಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ, ಇದೇ ಆರ್ಥಿಕ ವರ್ಷದಲ್ಲಿ ಐದು ಗ್ಯಾರಂಟಿಗಳನ್ನು ನೂರಕ್ಕೆ ನೂರರಷ್ಟು ಜಾರಿ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
55 ಲಕ್ಷ ಮಹಿಳೆಯರ ಆಶೀರ್ವಾದ:ಶಕ್ತಿ ಯೋಜನೆ ಜಾರಿಯಿಂದ ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರು ಪ್ರತಿ ದಿನ ಸಿದ್ದರಾಮಯ್ಯಗೆ ಹಿಡಿಶಾಪ ಹಾಕುತ್ತಿದ್ದಾರೆಂದು ಆರ್.ಅಶೋಕ್ ಹೇಳಿದಾಗ, ತಿರುಗೇಟು ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, ಯಾರೂ ಶಾಪ ಹಾಕುತ್ತಿಲ್ಲ. ಪ್ರತಿನಿತ್ಯ 55 ಲಕ್ಷ ಮಹಿಳೆಯರು ಉಚಿತ ಬಸ್ ಪಾಸ್ ಮೂಲಕ ಪ್ರಯಾಣ ಮಾಡುತ್ತಿದ್ದಾರೆ, ಅವರೆಲ್ಲರ ಆಶೀರ್ವಾದ ನಮ್ಮ ಸರ್ಕಾರಕ್ಕೆ ಇದೆ ಎಂದು ಸಮರ್ಥಿಸಿಕೊಂಡರು. ಆದರೆ, ನಿಮ್ಮ ಭಾಗ್ಯಗಳು ದೌರ್ಭಾಗ್ಯವಾಗಿರುವುದರಿಂದ ಜನ ಶಾಪ ಹಾಕುತ್ತಿದ್ದಾರೆ ಎಂದು ಅಶೋಕ್ ಕುಟುಕಿದರು.
ಬಡ ಜನರಿಗೆ ಅಕ್ಕಿ ಕೊಡಲು ರಾಜ್ಯ ಸಕಾರ ಬದ್ಧವಾಗಿದೆ. ಆದರೆ ಅಕ್ಕಿ ಕೊಡಲು ಕೇಂದ್ರ ಸರ್ಕಾರ ಮನಸ್ಸು ಮಾಡುತ್ತಿಲ್ಲ. ಅದಕ್ಕಾಗಿಯೇ ಫಲಾನುಭವಿಗಳ ಅಕೌಂಟ್​ಗೆ ಹಣ ಹಾಕುತ್ತಿರುವುದನ್ನು ನೀವು ಸ್ವಾಗತಿಸಬೇಕಿತ್ತು. ಅದನ್ನು ಬಿಟ್ಟು 10 ಕೆಜಿಗೆ ಹಣ ಹಾಕಿ ಎಂದು ಹೇಳುವ ನೀವು ಈ ಸರ್ಕಾರ ದಿವಾಳಿ ಆಗಬೇಕು ಎಂದು ಬಯಸುತ್ತೀರೇನು? ಎಂದು ಪ್ರಶ್ನಿಸಿದ ಕಾಂಗ್ರೆಸ್​ನ ನಾಗರಾಜ್ ಯಾದವ್ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದರು.
ಮೇಲ್ಮನೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯನ್ನು ಪ್ರಾರಂಭಿಸಲಾಯಿತು. ಈ ವೇಳೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಸಾಲ ಡಬ್ಬಲ್ ಆಗಿದ್ದರೆ, ಕೇಂದ್ರದಲ್ಲಿ ಸಾಲ ತ್ರಿಬ್ಬಲ್ ಆಗಿದೆ. ನಿರುದ್ಯೋಗ ಹೆಚ್ಚಾಗಿದೆ. ಇದೆಲ್ಲವೂ ನಿಮ್ಮ ಸಾಧನೆಯಾ? ಮೊದಲು ಕೊಂಕು ಮಾತನಾಡುವುದನ್ನು ಬಿಡಿ. ದೀನ ದಲಿತರ ಕಾರ್ಯಕ್ರಮವನ್ನು ಒಪ್ಪಿಕೊಳ್ಳಿ ಎಂದರು. ಬಿಜೆಪಿಯವರ ಆಕ್ಷೇಪದ ನಡುವೆಯೇ ತಮ್ಮ ಏರುದನಿಯ ಭಾಷಣ ಮುಂದುವರೆಸಿದ ನಾಗರಾಜ್ ಯಾದವ್, ಯಾರಿಗೂ ಬಗ್ಗಲೇ ಇಲ್ಲ. ಈ ವೇಳೆ ಮಧ್ಯೆ ಪ್ರವೇಶಿಸಿದ ಜೆಡಿಎಸ್​ನ ಪರಿಷತ್ ನಾಯಕ ಭೋಜೆಗೌಡ ಎದೆ ತುಂಬಿ ಹಾಡುವೆನು… ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ… ಎಂದು ಜಿ.ಎಸ್.ಶಿವರುದ್ರಪ್ಪನವರ ಭಾವಗೀತೆ ಹಾಡುವ ಮೂಲಕ ವಾತಾವರಣ ತಿಳಿಗೊಳಿಸಿದರು.
ಯಡಿಯೂರಪ್ಪರನ್ನು ಕಣ್ಣೀರಾಕಿಸಿದ್ರಿ!:ಕಾಂಗ್ರೆಸ್​ನ ಯು.ಬಿ.ವೆಂಕಟೇಶ್ ಮಾತನಾಡಿ, ನೀವು ಇಬ್ಬರು ಮುಖ್ಯಮಂತ್ರಿಗಳನ್ನ ಮಾಡಿದಿರಿ. ಯಡಿಯೂರಪ್ಪ ಅವರನ್ನ ಕಣ್ಣೀರು ಹಾಕಿಸಿ ಅಧಿಕಾರದಿಂದ ಇಳಿಸಿದಿರಿ ಎಂದು ತರಾಟೆಗೆ ತೆಗೆದುಕೊಂಡರು. ಮಧ್ಯ ಪ್ರವೇಶಿಸಿದ ಕೋಟಾ ಶ್ರೀನಿವಾಸ ಪೂಜಾರಿ, ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಇದೆಲ್ಲಾ ಬರುತ್ತಾ ಎಂದು ಕೆಣಕಿದರು. ಅದಕ್ಕೆ ಸಿಟ್ಟಾದ ವೆಂಕಟೇಶ್, ನೀವೇನು ವಿಪಕ್ಷ ನಾಯಕರಲ್ಲ ಸುಮ್ನೆ ಕೂತ್ಕೊಳ್ರಿ. ಚುನಾವಣೆ ಆಗಿ 60 ದಿನ ಆಯಿತು. ಇನ್ನೂ ಪ್ರತಿಪಕ್ಷ ನಾಯಕರ ಆಯ್ಕೆ ಮಾಡಲು ಆಗಿಲ್ಲ. ಬಿಜೆಪಿಯವರದ್ದು ಆರಂಭ ಶೂರತ್ವ. ನಾವು ಉಚಿತ ಭಾಗ್ಯ ಕೊಡ್ತೇವೆ ಅಂದರೆ ಉರಿಯುತ್ತದೆ ಎಂದು ಟೀಕಿಸಿದರು.
ಇದು ಸಿಂಗಲ್​ ಆಗಿರುವವರಿಂದ ಮಿಂಗಲ್ ಆಗಲು ಗ್ರೀನ್​ ಸಿಗ್ನಲ್; ಪೇರಿಂಗ್ ಆಗಲೆಂದೇ ಪಿಯರ್ ರಿಂಗ್, ಏನಿದು ಹೊಸ ಟ್ರೆಂಡ್?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − two =
Remember me
