ಬೆಂಗಳೂರು:ಸಿಡಿ ಪ್ರಕರಣದಲ್ಲಿ ಕಾಂಗ್ರೆಸ್​ ನಾಯಕ ಡಿ.ಕೆ.ಶಿವಕುಮಾರ್​ ಹೆಸರು ಕೇಳಿಬರುತ್ತಿದ್ದಂತೆಯೇ ಆಡಳಿತ ಪಕ್ಷವು ಕಾಂಗ್ರೆಸ್​ನ್ನು ತರಾಟೆಗೆ ತೆಗೆದುಕೊಂಡಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನೂ ಕಾಲೆಳೆಯಲಾರಂಭಿಸಿದೆ.
ಕಾಗೆ ಹಿಕ್ಕೆ ಹಾಕಿದರೂ ಸಿದ್ದರಾಮಯ್ಯನವರು ಅದರಲ್ಲಿ ಮೂಗು ತೂರಿಸುತ್ತಾರೆ. ಆದರೆ ಈ ಸಿಡಿ ಷಡ್ಯಂತ್ರದಲ್ಲಿ ಡಿ.ಕೆ.ಶಿವಕುಮಾರ್​ ಅವರ ಪಾತ್ರದ ಬಗ್ಗೆ ಅವರೇಕೆ ಇನ್ನೂ ಮೌನವಾಗಿದ್ದಾರೆ? ಎಂದು ಪ್ರಶ್ನಿಸಿದೆ. ಈ ರೀತಿ ಷಡ್ಯಂತ್ರದಲ್ಲಿ ಭಾಗವಹಿಸುವುದು ಯಾವ ಸೆಕ್ಷನ್ ಪ್ರಕಾರ ಪರಾಧವಾಗುತ್ತದೆ ಎಂದು ಜನರ ಮುಂದೆ ತೆರೆದಿಡಿ ಎಂದು ಕೇಳಿದೆ.
ಸಹಾಯ ಮಾಡುವುದಕ್ಕೂ ಷಡ್ಯಂತ್ರದಲ್ಲಿ ಭಾಗಿಯಾಗುವುದಕ್ಕೂ ವ್ಯತ್ಯಾಸವಿದೆ. ಷಡ್ಯಂತ್ರದ ಭಾಗವಾಗಿದ್ದುಕೊಂಡ ಕಾರಣದಿಂದಲೇ ಹೆಗಲುಮುಟ್ಟಿ ನೋಡಿಕೊಂಡಿದ್ದಲ್ಲವೇ!? ಮಹಾನಾಯಕರೇ, ಪ್ರಕರಣದ ಪ್ರಮುಖ ಮಾಸ್ಟರ್ ಮೈಂಡ್‌ಗಳೊಂದಿಗೆ ಅಸರಲ್ಲೂ ಈ ಪ್ರಕರಣ ಬೆಳಕಿಗೆ ಬಂದ ನಂತರವೂ ಸಂಬಂಧ ಹೊಂದಿರಲು ಅದು ಹೇಗೆ ಸಾಧ್ಯ? ಎಂದು ಬಿಜೆಪಿ ಮತ್ತೊಂದು ಟ್ವೀಟ್​ನಲ್ಲಿ ಡಿ.ಕೆ.ಶಿವಕುಮಾರ್​ರನ್ನು ಪ್ರಶ್ನಿಸಿದೆ.
ಶಿವಕುಮಾರ್​ ಅವರೇ, ಆರಂಭದಲ್ಲಿ ಹೆಗಲು ಮುಟ್ಟಿಕೊಡು ನನ್ನನ್ನು ಸಿಲುಕಿಸುವ ಪ್ರಯತ್ನ ಎಂದಿರಿ. ಈಗ ಸಂತ್ರಸ್ಥೆ ನನ್ನ ಭೇಟಿಗೆ ಪ್ರಯತ್ನಿಸಿದ್ದು ನಿಜ, ನರೇಶ್ ಮನೆಗೆ ಹೋಗಿದ್ದೇನೆ ಎನ್ನುತ್ತಿದ್ದೀರಿ. ಅಂದರೆ ಪ್ರಕರಣದ ಎಲ್ಲಾ ಆಗುಹೋಗುಗಳು ನಿಮ್ಮ ನಿಯಂತ್ರಣದಲ್ಲೇ ನಡೆಯುತ್ತಿತ್ತು ಎಂಬುದು ಸ್ಪಷ್ಟ ಅಲ್ಲವೇ? ಎಂದೂ ಪ್ರಶ್ನೆ ಕೇಳಲಾಗಿದೆ.
ಕಾಗೆ ಹಿಕ್ಕೆ ಹಾಕಿದ್ದಕ್ಕೂ ಮೂಗು ತೂರಿಸುವ ಸೆಕ್ಷನ್@siddaramaiahಅವರೇ,#CDGateಷಡ್ಯಂತ್ರದಲ್ಲಿ@DKShivakumarಅವರ ಪಾತ್ರದ ಬಗ್ಗೆ ಏಕೆ ಇನ್ನೂ ಮೌನವಾಗಿದ್ದೀರಿ?
ಯಾವ ಸೆಕ್ಷನ್ ಪ್ರಕಾರ ಇದು ಅಪರಾಧವಾಗುತ್ತದೆ ಎಂದು ಜನರ ಮುಂದೆ ತೆರೆದಿಡಿ.#DKShiMustResign
— BJP Karnataka (@BJP4Karnataka)March 27, 2021

ಐ ಫೋನ್​ ಆರ್ಡರ್​ ಮಾಡಿದವನಿಗೆ ಬಂದಿದ್ದು ಅವನಷ್ಟೇ ಎತ್ತರದ ಐ ಫೋನ್​! ಏನಿದರ ಒಳಗುಟ್ಟು?

ಬಾಂಗ್ಲಾದೇಶದ ಕಾಳಿ ಮಂದಿರದಲ್ಲಿ ಮೋದಿ ಪ್ರಾರ್ಥನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − fifteen =
Remember me
