ಉತ್ತರಕನ್ನಡ:ರಾಜ್ಯದಲ್ಲಿ ಚುನಾವಣಾ ಕಾವು ಏರುತ್ತಿದ್ದು ಪಕ್ಷಗಳು ಆರೋಪ ಪ್ರತ್ಯಾರೋಪದಲ್ಲಿ ತೊಡಗಿವೆ. ರಾಜ್ಯದ ಅನೇಕ ಕಡೆಗಳಲ್ಲಿ ರಾಜಕೀಯ ಪಕ್ಷಗಳು ಸಮಾವೇಶಗಳನ್ನು ನಡೆಸುತ್ತಿದ್ದೆ. ಇದನ್ನು ಜನರನ್ನು ತಲುಪಲು ಮತ್ತು ವಿರೋಧಿ ಬಣಕ್ಕೆ ಪ್ರಶ್ನೆಗಳನ್ನು ಎಸೆಯಲು ಪಕ್ಷಗಳು ಬಳಸಿಕೊಳ್ಳುತ್ತಿವೆ. ಅದೇ ರೀತಿ ಕುಮಟಾದಲ್ಲಿ ಕಾಂಗ್ರೆಸ್​ ಸಮಾವವೇಶವನ್ನು ನಡೆಸಿದ್ದು ಈ ಸಂದರ್ಭ ಬಿಜೆಪಿ ಸಿದ್ಧರಾಮಯ್ಯ ಮತ್ತು ಡಿಕೆಶಿಗೆ ಮೂರು ಪ್ರಶ್ನೆಗಳನ್ನು ನೀಡಿದೆ.
ಕಾರವಾರದಲ್ಲಿ ಬಿಜೆಪಿ ವಕ್ತಾರ ನಾಗರಾಜ ನಾಯಕ ಕಾಂಗ್ರೆಸ್​ನ ಕಾಲೆಳೆದಿದ್ದು ‘ಕಾಂಗ್ರೆಸ್ ಅನ್ನೋದು ಸತ್ತ ಕುದುರೆ. ಏಷ್ಟೆ ಓಡಿಸಲು ಪ್ರಯತ್ನಿಸಿದರೂ ಅದು ಹೋಗೋದಿಲ್ಲ’ ಎಂದಿದ್ದಾರೆ. ಜೊತೆಗೆ ಕಾಂಗ್ರೆಸ್​ನ ಸಮಾವೇಶವನ್ನು ಜನರಲ್ಲಿ ಗೊಂದಲ ಮೂಡಿಸುವ ಸಭೆ ಎಂದು ಕರೆದಿದ್ದಾರೆ. ಈ ಸಂದರ್ಭ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್​ಗೆ ಬಿಜೆಪಿ ಪ್ರಶ್ನೆ ಕೇಳಿದೆ.
ಬಿಜೆಪಿ ಕೇಳಿದ ಪ್ರಶ್ನೆಗಳು ಹೀಗಿವೆ:
ಪ್ರಶ್ನೆ ೧:2017 ಡಿಸೆಂಬರ್ ಎಂಟರಂದು ಅಂದಿನ‌ ಜಿಲ್ಲಾಧಿಕಾರಿ ಸಹಜ ಸಾವೆಂದು ಹೇಳಿಕೆ ನೀಡಿದ್ದರು. ಪರೇಶ ಮೇಸ್ತಾ ಮೃತದೇಹದ ಪೋಸ್ಟ್ ಮಾರ್ಟಂ ಸ್ಥಳೀಯ ವೈದ್ಯರು ಅಥವಾ ನುರಿತ ಸರ್ಕಾರಿ ವೈದ್ಯರಿಂದ ಯಾಕೆ ಮಾಡಿಸಿಲ್ಲ?
ಪ್ರಶ್ನೆ ೨:ತನಿಖೆಯಾಗದೇ ಜಿಲ್ಲಾಧಿಕಾರಿ ಸಹಜ ಸಾವೆಂದು ಹೇಳಿಕೆ ನೀಡಿದ್ದೇಕೆ.? ಕಾಟಾಚಾರಕ್ಕಾಗಿ ಸಿಬಿಐಗೆ ಪ್ರಕರಣವನ್ನು ವಿಳಂಬವಾಗಿ ವಹಿಸಿದ್ದೇಕೆ?
ಪ್ರಶ್ನೆ ೩:ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ ಕಾಗದ ಪತ್ರಗಳನ್ನ‌ ನೀಡಲಾಗಿತ್ತು. ಮುದ್ದೆ ಮಾಲನ್ನು ಯಾಕೆ ನೀಡಲಿಲ್ಲ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − four =
Remember me
