
ಬೆಂಗಳೂರು:ಬಿಜೆಪಿ ಕಚೇರಿಯಲ್ಲಿ ಗುರು ಗೋವಿಂದ ಸಿಂಗ್ ಅವರ ಪುತ್ರರಾದ ಜೋರಾವರ್ ಸಿಂಗ್ ಮತ್ತು ಫತೆಹ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ವೀರ ಬಾಲ ದಿನವನ್ನು ಆಚರಣೆ ಮಾಡಲಾಯಿತು.ದಾಳಿಕೋರ ಔರಂಗಜೇಬನ ಜೀವ ಬೆದರಿಕೆಗೂ ಜಗ್ಗದೇ ಪ್ರಾಣಾರ್ಪಣೆ ಮಾಡಿದ್ದವರ ಸ್ಮರಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆ ಮೇರೆಗೆ ಈ ದಿನ ಆಚರಣೆ ಮಾಡುತ್ತಿರುವುದಾಗಿ ಬಿಜೆಪಿ ಅಧ್ಯಕ್ಷ ವೈ.ಬಿ.ವಿಜಯೇಂದ್ರ ತಿಳಿಸಿದರು.ಹತ್ತು ವರ್ಷ ವಯಸ್ಸನ್ನೂ ದಾಟದ ವೀರ ಮಕ್ಕಳ ಕಣ್ಣುಗಳಲ್ಲಿದ್ದ ಔರಂಗಜೇಬ್ ವಿರುದ್ಧದ ಜ್ವಾಲೆ, ಎಂಥವರನ್ನೂ ಮೀರಿಸುವಂತಿದ್ದ ಧೈರ್ಯ- ಶೌರ್ಯ ಅವಿಸ್ಮರಣೀಯ. ತಾಯ್ನಡಿಗಾಗಿ ಬಲಿದಾನಗೈದ ಶೌರ್ಯ ಬಾಲಕರನ್ನು ಹೆಮ್ಮೆಯಿಂದ ಸ್ಮರಿಸೋಣ. ಈ ಇಬ್ಬರೂ ಜೀವ ತೆತ್ತ ಸ್ಥಳ ಫತೆಹ್ ಗಢ ಸಾಹಿಬ್ ಇಂದು ಸಿಖ್ಖರ ಪುಣ್ಯಸ್ಥಳವಾಗಿರುವುದು ಹೆಮ್ಮೆಯ ಸಂಗತಿ ಎಂದರು.ವಿಧಾನಸಭೆಯ ವಿರೋಧ ಪಕ್ಷದ ನೂತನ ಮುಖ್ಯ ಸಚೇತಕ ದೊಡ್ಡನಗೌಡ ಹೆಚ್ ಪಾಟೀಲ್ ಮಾತನಾಡಿ, ಜೀವದ ಅಂಗು ತೊರೆದು ದೇಶಕ್ಕಾಗಿ ಬಲಿದಾನ ಮಾಡಿದವರ ತ್ಯಾಗ ನಮಗೆ ಆದರ್ಶವಾಗಬೇಕು ಎಂದರು.ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ, ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್, ರಾಜ್ಯ ಕಾರ್ಯದರ್ಶಿ ಶರಣು ತಳ್ಳೀಕೆರೆ, ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಅಂಬೇಕಲ್ ಮತ್ತಿತರರು ಇದ್ದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:9 + eleven =
Remember me
