ನವದೆಹಲಿ:ಬಿಜೆಪಿ ಪಕ್ಷದ ಭೀಷ್ಮ ಎಂದೇ ಜನಜನಿತರಾಗಿರುವ, ರಾಷ್ಟ್ರ ರಾಜಕಾರಣದಲ್ಲಿ ಗೌರವದ ಸ್ಥಾನ ಪಡೆದಿರುವ ಮಾಜಿ ಉಪ ಪ್ರಧಾನಿ ಲಾಲ್​ಕೃಷ್ಣ ಆಡ್ವಾಣಿಯವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ಭಾರತರತ್ನ ಪುರಸ್ಕಾರವನ್ನು ಪ್ರಧಾನಿ ನರೇಂದ್ರ ಮೋದಿ ಘೊಷಿಸಿದ್ದಾರೆ.
ಈ ಹಿಂದೆ ಮಾಜಿ ರಾಷ್ಟ್ರಪತಿ ದಿವಂಗತ ಪ್ರಣಬ್ ಮುಖರ್ಜಿ, ಇತ್ತೀಚೆಗಷ್ಟೇ ಬಿಹಾರದ ಮಾಜಿ ಸಿಎಂ ದಿವಂಗತ ಕರ್ಪರಿ ಠಾಕೂರ್​ಗೆ ಭಾರತರತ್ನ ಘೊಷಿಸಿದ್ದ ಎನ್​ಡಿಎ ಸರ್ಕಾರ ಇದೀಗ, ಬಿಜೆಪಿಯನ್ನು ಪ್ರವರ್ಧಮಾನಕ್ಕೆ ಕೊಂಡೊಯ್ದ ಹಿರಿಯ ನಾಯಕ ಆಡ್ವಾಣಿಯವರಿಗೆ ಭಾರತರತ್ನ ಘೊಷಿಸಿರುವುದು ಆರ್​ಎಸ್​ಎಸ್ ಮುಖಂಡರು, ಸ್ವಯಂಸೇವಕರು, ಪಕ್ಷದ ಕೋಟ್ಯಂತರ ಕಾರ್ಯಕರ್ತರಲ್ಲಿ ಅತೀವ ಹರ್ಷತಂದಿದೆ. ಸಾಮಾಜಿಕ ಜಾಲತಾಣಗಳಲ್ಲೂ ಆಡ್ವಾಣಿಯವರಿಗೆ ಎಂದೋ ಸಲ್ಲಲೇಬೇಕಾಗಿದ್ದ ಗೌರವ ಎಂಬ ಚರ್ಚೆಗಳು ನಡೆದಿವೆ. 2015ರಲ್ಲಿ ಅವರಿಗೆ ಪದ್ಮವಿಭೂಷಣ ನೀಡಿ ಗೌರವಿಸಲಾಗಿತ್ತು.
ಹಿರಿಯ ನಾಯಕನಿಗೆ ಭಾರತರತ್ನ ನೀಡಿ ಗೌರವಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಬೆಳಗ್ಗೆ ಸಾಮಾಜಿಕ ಜಾಲತಾಣದಲ್ಲಿ ಘೊಷಿಸಿ, ಆಡ್ವಾಣಿಯವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಅಭಿನಂದಿಸಿದರು. ಆಡ್ವಾಣಿಯವರಿಗೆ ಗೌರವ ಸಲ್ಲಿಸುತ್ತಿರುವುದನ್ನು ಭಾವನಾತ್ಮಕ ಕ್ಷಣ ಎಂದು ಹೇಳಿದ ಪಿಎಂ ಮೋದಿ, ನಮ್ಮ ಕಾಲದ ಅತ್ಯಂತ ಗೌರವಾನ್ವಿತ ರಾಜನೀತಿಜ್ಞರಲ್ಲಿ ಒಬ್ಬರಾದ ಅವರು, ಭಾರತದ ಅಭಿವೃದ್ಧಿಗೆ ನೀಡಿದ ಕೊಡುಗೆ ಸದಾಕಾಲ ನೆನಪಿನಲ್ಲಿರುವಂಥದ್ದು ಎಂದು ಶ್ಲಾಘಿಸಿದ್ದಾರೆ.
ದೇಶದ ಅತ್ಯುನ್ನತ ನಾಗರಿಕ ಗೌರವ ನೀಡಲಾಗುವುದು ಎಂಬ ಮಾಹಿತಿ ಹಂಚಿಕೊಳ್ಳಲು ತುಂಬಾ ಸಂತೋಷವಾಗಿದೆ. ಆಡ್ವಾಣಿಯವರೊಂದಿಗೆ ಮಾತನಾಡಿ ಈ ಗೌರವಕ್ಕೆ ಪಾತ್ರರಾಗಿದ್ದಕ್ಕೆ ಅಭಿನಂದಿಸಿದ್ದೇನೆ ಎಂದು ಮೋದಿ ಪ್ರತಿಕ್ರಿಯಿಸಿದ್ದಾರೆ.
ಆಡ್ವಾಣಿಯವರು ತಳಮಟ್ಟದಲ್ಲಿ ಕೆಲಸ ಮಾಡುವುದರಿಂದ ಹಿಡಿದು ಉಪಪ್ರಧಾನಿಯಾಗಿ ರಾಷ್ಟ್ರ ಸೇವೆ ಮಾಡಿದ್ದಾರೆ. ಗೃಹ ಮಂತ್ರಿ, ಮಾಹಿತಿ ಪ್ರಸಾರ ಇಲಾಖೆ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸಂಸದರಾಗಿ ಅವರ ಕಾರ್ಯವೈಖರಿ ಸದಾ ಆದರ್ಶಪ್ರಾಯ. ಸದನದ ಭಾಷಣಗಳು ಆಳವಾದ ಒಳನೋಟಗಳಿಂದ ತುಂಬಿರುತ್ತಿದ್ದವು ಎಂದು ಪ್ರಶಂಸಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಆಡ್ವಾಣಿಯವರ ದಶಕಗಳ ಸೇವೆಯು ಪಾರದರ್ಶಕತೆ ಮತ್ತು ಸಮಗ್ರತೆಯಿಂದ ಗುರುತಿಸಲ್ಪಟ್ಟಿದೆ. ಕಾರ್ಯದಲ್ಲಿ ಅಚಲವಾದ ಬದ್ಧತೆ ಇರುತ್ತಿತ್ತು. ರಾಷ್ಟ್ರೀಯ ಏಕತೆ ಮತ್ತು ಸಾಂಸ್ಕೃತಿಕ ಪುನರುತ್ಥಾನಕ್ಕಾಗಿ ಅಪ್ರತಿಮ ಪ್ರಯತ್ನಗಳನ್ನು ಮಾಡಿದ್ದರು ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.
1999-2004 ಅವಧಿಯ ಮಾಜಿ ಪಿಎಂ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್​ಡಿಎ ಸರ್ಕಾರದಲ್ಲಿ ಆಡ್ವಾಣಿ ಉಪಪ್ರಧಾನಿಯಾಗಿದ್ದರು. 1970 ಮತ್ತು 2019ರ ನಡುವೆ ಹಲವು ಬಾರಿ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರಾಗಿದ್ದರು. 2009ರ ಲೋಕಸಭೆ ಚುನಾವಣೆಯಲ್ಲಿ ಆಡ್ವಾಣಿ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿದ್ದರು. ಆದರೆ, 2009ರ ಚುನಾವಣೆ ಗೆದ್ದ ಯುಪಿಎ ಮೈತ್ರಿಕೂಟ ಎರಡನೇ ಅವಧಿಗೆ ಅಧಿಕಾರಕ್ಕೇರಿತ್ತು.
ಇದಂ ನ:  ಮಮ!: ಅತ್ಯಂತ ನಮ್ರತೆ ಮತ್ತು ಕೃತಜ್ಞತೆಯಿಂದ ನಾನು ಭಾರತ ರತ್ನವನ್ನು ಸ್ವೀಕರಿಸುತ್ತೇನೆ. ಇದು ಒಬ್ಬ ವ್ಯಕ್ತಿಯಾಗಿ ನನಗೆ ಮಾತ್ರವಲ್ಲ, ನನ್ನ ಆದರ್ಶ, ಪಾಲಿಸಿದ ತತ್ವ, ಸಾಮರ್ಥ್ಯಕ್ಕೆ ಅನುಗುಣವಾಗಿ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿದ್ದಕ್ಕೆ ಸಂದ ಗೌರವ ಎಂದು ಭಾವಿಸುತ್ತೇನೆ ಎಂದು ಎಲ್.ಕೆ. ಆಡ್ವಾಣಿ ಪ್ರತಿಕ್ರಿಯಿಸಿದ್ದಾರೆ. 14ನೇ ವಯಸ್ಸಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೇರಿದಾಗಿ ನಿಂದ ಕೊಟ್ಟ ಕೆಲಸದ ಮೂಲಕ ದೇಶಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಲು ಯತ್ನಿಸಿದ್ದೇನೆ. ಈ ವಿಷಯದಲ್ಲಿ ಮಾತ್ರ ಪ್ರತಿಫಲ ಕಾಣಲು ಬಯಸಿದ್ದೆ. ಈ ಜೀವನ ನನ್ನದಲ್ಲ. ನನ್ನ ಜೀವನ ನನ್ನ ರಾಷ್ಟ್ರಕ್ಕಾಗಿ ಎಂಬ ‘ಇದಂ ನ ಮಮ’ ಎಂಬ ಮಂತ್ರ ನನ್ನಲ್ಲಿ ಸದಾ ಸ್ಪೂರ್ತಿ ತುಂಬುತ್ತಿತ್ತು. ಈ ಸಂತಸದ ಗಳಿಗೆಯಲ್ಲಿ ನನ್ನೊಂದಿಗಿದ್ದ ಇಬ್ಬರು ವ್ಯಕ್ತಿಗಳನ್ನು ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತೇನೆ. ಒಬ್ಬರು ಪಂಡಿತ್ ದೀನದಯಾಳ್ ಉಪಾಧ್ಯಾಯ ಮತ್ತೊಬ್ಬರು ಭಾರತರತ್ನ, ಅಟಲ್ ಬಿಹಾರಿ ವಾಜಪೇಯಿ. ಪಕ್ಷದ ಲಕ್ಷಾಂತರ ಕಾರ್ಯಕರ್ತರು, ಸ್ವಯಂಸೇವಕರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ಕುಟುಂಬದ ಎಲ್ಲ ಸದಸ್ಯರಿಗೆ, ಮುಖ್ಯವಾಗಿ, ಕಾಲವಶವಾಗಿ ರುವ ಪತ್ನಿ ಕಮಲಾಳಿಗೆ ನಾನು ಕೃತಜ್ಞ. ಜೀವನಕ್ಕೆ ಶಕ್ತಿ ಮತ್ತು ಪೋಷಣೆಯ ದೊಡ್ಡ ಮೂಲ ಅವಳೇ ಆಗಿದ್ದಳು. ಈ ಗೌರವ ನೀಡಿದ ರಾಷ್ಟ್ರಪತಿ ದ್ರೌಪದಿ ಮುಮು ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೂ ಹೃತ್ಪೂ ರ್ವಕ ಧನ್ಯವಾದ. ನಮ್ಮ ಮಹಾನ್ ದೇಶ ಶ್ರೇಷ್ಠತೆಯ ಉತ್ತುಂಗಕ್ಕೇರಲಿ ಎಂದು ಆಡ್ವಾಣಿ ಆಶಿಸಿದ್ದಾರೆ.
ತ್ಯಾಗಮಯಿಗೆ ಸರ್ವಶ್ರೇಷ್ಠ ಗೌರವ:ನನ್ನ ರಾಜಕೀಯ ಜೀವನದಲ್ಲಿ ನಾನು ಕಂಡ ಅತ್ಯುತ್ತಮ ಸಂಘಟಕ, ಶ್ರೇಷ್ಠ ವ್ಯಕ್ತಿಗೆ ಭಾರತ ರತ್ನ ಪುರಸ್ಕಾರ ಸಿಕ್ಕಿದೆ ಎಂದು ಎಲ್​ಕೆ ಆಡ್ವಾಣಿಯವರನ್ನು ಉದ್ಯಮಿ ಡಾ. ವಿಜಯ ಸಂಕೇಶ್ವರ ಅಭಿನಂದಿಸಿದ್ದಾರೆ. ರಥಯಾತ್ರೆ ಮೂಲಕ ರಾಮಮಂದಿರ ಹೋರಾಟಕ್ಕೆ ಭದ್ರ ತಳಹದಿ ಹಾಕಿದ ಹೆಗ್ಗಳಿಕೆ ಆಡ್ವಾಣಿ ಅವರದ್ದು, ತಾವು ಸಂಸದರಾಗಿದ್ದ ವೇಳೆ ಅನೇಕ ಸಲ ಉಪಯುಕ್ತ ಮಾಹಿತಿ ಅವರಿಂದ ಸಿಕ್ಕಿತ್ತು. 1994ರ ಬಾಂಬೆ ಅಧಿವೇಶನದ ವೇಳೆ ಮುಂದಿನ ಪ್ರಧಾನಿ ಅಭ್ಯರ್ಥಿಯಾಗುವ ಅವಕಾಶವಿದ್ದರೂ ಯಾವುದೇ ಸ್ವಾರ್ಥವಿಲ್ಲದೆ ವಾಜಪೇಯಿ ಅವರ ಹೆಸರು ಸೂಚಿಸುವ ಮೂಲಕ ತ್ಯಾಗಮಯಿಯಾಗಿದ್ದರು. ಅಧಿಕಾರದ ಹಸಿವಿಲ್ಲದ, ಅಪ್ರತಿಮ ದೇಶಭಕ್ತನಿಗೆ ಅವರ ಜೀವಿತಾವಧಿಯಲ್ಲೇ ಶ್ರೇಷ್ಠ ಗೌರವ ಸಿಕ್ಕಿರುವುದು ಶ್ಲಾಘನೀಯ. ಪ್ರಧಾನಿ ಮೋದಿ ಅವರು ಅರ್ಹರನ್ನು ಆಯ್ಕೆ ಮಾಡುವ ಮೂಲಕ ಪ್ರಶಸ್ತಿಯ ಘನತೆಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ ಎಂದು ಡಾ. ಸಂಕೇಶ್ವರ ಸಂತಸ ವ್ಯಕ್ತಪಡಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಣಕ್ಕೆ ಎಲ್.ಕೆ. ಆಡ್ವಾಣಿ ಯವರ ಹೋರಾಟ ಕಾರಣ. ಆಡ್ವಾಣಿ ರಾಮ ರಥಯಾತ್ರೆ ನಡೆಸಿದರು. ಅದರಲ್ಲಿ ಭಾಗವಹಿಸುವ ಸೌಭಾಗ್ಯ ನನ್ನದಾಗಿತ್ತು. ಅವರಿಗೆ ಭಾರತರತ್ನ ಘೋಷಣೆಯಾಗಿರುವುದು ಸ್ವಾಗತಾರ್ಹ.
| ಬಿ.ಎಸ್. ಯಡಿಯೂರಪ್ಪ ಮಾಜಿ ಸಿಎಂ
ಬಿಗ್‌ಬಾಸ್‌ ಸ್ಕ್ರಿಪ್ಟೆಡ್ ಶೋ; ವಿನ್ನರ್​ ಕಾರ್ತಿಕ್ ಮಹೇಶ್​​ ಬೆಂಕಿ ರಿಯಾಕ್ಷನ್ ಕೇಳಿ​​?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + one =
Remember me
