ಬೆಂಗಳೂರು:ಸರ್ಕಾರ ಹಾಗೂ ಪಕ್ಷದ ನಡೆ ಹಾದಿಬೀದಿಯಲ್ಲಿ ಚರ್ಚಿಸುವ ವಿಷಯವಲ್ಲ; ನಾಯಕತ್ವ ಬದಲಾವಣೆಯಿಲ್ಲ; ಪಕ್ಷವಿರೋಧಿ ಚಟುವಟಿಕೆ ಸಹಿಸುವುದಿಲ್ಲ ಎಂಬ ಸ್ಪಷ್ಟ ಹಾಗೂ ಖಡಕ್​ ಸೂಚನೆಯನ್ನು ಶಾಸಕರಿಗೆ ನೀಡುವ ಮೂಲಕ ಬಿಜೆಪಿ ವರಿಷ್ಠರು ರಾಜ್ಯದಲ್ಲಿ ಹೊಗೆಯಾಡುತ್ತಿದ್ದ ಭಿನ್ನಮತದ ಧ್ವನಿ ಹಾಗೂ ಚಟುವಟಿಕೆಗಳಿಗೆ ಸ್ಪೀಡ್​ ಬ್ರೇಕ್​ ಹಾಕಿದ್ದಾರೆ. ಸರ್ಕಾರ ಮತ್ತು ಪಕ್ಷದಲ್ಲಿನ ಗೊಂದಲ ನಿವಾರಿಸುವುದಕ್ಕಾಗಿ ಬಂದಿರುವ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್​, ರಾಜ್ಯ ಪ್ರವಾಸದ ಎರಡನೇ ದಿನವಾದ ಗುರುವಾರ ಸ್ವಯಂ ಬಯಸಿ ಬಂದ ಶಾಸಕರ ಅಭಿಪ್ರಾಯ ಸಂಗ್ರಹಿಸುವ ಜತೆಗೆ ಮನವಿ ಆಲಿಸಿದರು.
ಒಗ್ಗಟ್ಟಿನ ಮಂತ್ರ ಹಾಗೂ ಸರ್ಕಾರ&ಪಕ್ಷದ ವರ್ಚಸ್ಸು ವೃದ್ಧಿ ತಂತ್ರ ಬೋಧಿಸಿದ ಅವರು, ಸಮಸ್ಯೆ ಏನೇ ಇದ್ದರೂ ಪಕ್ಷದ ವೇದಿಕೆಯೊಳಗೇ ಚರ್ಚಿಸಿ ಬಗೆಹರಿಸಿಕೊಳ್ಳಬೇಕೆಂಬ ವರಿಷ್ಠರ ಸಂದೇಶವನ್ನು ರವಾನಿಸಿದರು. ಸಚಿವ ಸಿ.ಪಿ.ಯೋಗೇಶ್ವರ್​ ಭೇಟಿ ಹಾಗೂ ಅಭಿಪ್ರಾಯ ಸಲ್ಲಿಸುವುದಕ್ಕೆ ಮುಕ್ತ ಅವಕಾಶ ನೀಡಿದ ಅರುಣ್​ ಸಿಂಗ್​, ಎಲ್ಲವನ್ನೂ ಕೇಳಿದ ನಂತರ “ನಿಮ್ಮ ಅಭಿಪ್ರಾಯವನ್ನು ವರಿಷ್ಠರಿಗೆ ತಲುಪಿಸುವೆ. ಆದರೆ ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರ ಉಂಟುಮಾಡುವಂತಹ ಬಹಿರಂಗ ಹೇಳಿಕೆ ಸಲ್ಲದು’ ಎಂದು ತಾಕೀತು ಮಾಡಿದ್ದಾರೆ.
ಯತ್ನಾಳ್​, ಬೆಲ್ಲದ್​ಗೆ ಇಲ್ಲ ಭೇಟಿ ಅವಕಾಶಸರ್ಕಾರ, ನಾಯಕತ್ವದ ವಿರುದ್ಧ ಪದೇ ಪದೆ ಹೇಳಿಕೆ ನೀಡಿದ್ದಕ್ಕಾಗಿ ಯತ್ನಾಳ್​ಗೆ ಸಮಜಾಯಿಷಿ ಕೇಳಿ ನೋಟಿಸ್​ ನೀಡಲಾಗಿತ್ತು. ಜತೆಗೆ ವರಿಷ್ಠರ ಸೂಚನೆ ಉಲ್ಲಂಘಿಸಿದ ಕಾರಣಕ್ಕಾಗಿ ಅವರಿಗೆ ಭೇಟಿಯಾಗಲು ಅರುಣ್​ ಸಿಂಗ್​ ಅವಕಾಶ ನೀಡಲಿಲ್ಲ. ಅದೇ ರೀತಿ ದೆಹಲಿಯಲ್ಲೇ ಭೇಟಿ ಮಾಡಿದ್ದರೆಂಬ ಕಾರಣಕ್ಕೆ ಬೆಲ್ಲದ್​ ಅವರನ್ನೂ ಭೇಟಿ ಮಾಡಲು ಬಯಸಲಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ. ಆದರೆ ಯತ್ನಾಳ್​ ತಾವು ಅರುಣ್​ ಸಿಂಗ್​ ಭೇಟಿಗೆ ಅವಕಾಶ ಕೋರಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆಗೆ ಪ್ರಧಾನ ಕಾರ್ಯದರ್ಶಿ ರವಿಕುಮಾರ್​ ನಿರಾಕರಿಸಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
