ಬೆಂಗಳೂರು ದಕ್ಷಿಣ:ವಿಧಾನಸಭಾ ಕ್ಷೇತ್ರದ ದೊಡ್ಡತೋಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಎಂ. ಕೃಷ್ಣಪ್ಪ ಪರ ಮತಯಾಚನೆ ಮಾಡಲಾಯಿತು.
ಬಿಜೆಪಿ ಯುವ ಮುಖಂಡ ಸುಪ್ರೀತ್​ ಮಾತನಾಡಿ, ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದ್ದು ಪ್ರಾಬಲ್ಯ ಹೊಂದಿದೆ. ಎಲ್ಲ ಬೂತ್​ಗಳಲ್ಲಿ ಬಿಜೆಪಿ ಅಭ್ಯರ್ಥಿ ಕೃಷ್ಣಪ್ಪ ಪರ ಮತಯಾಚಿಸಲಾಗುತ್ತಿದ್ದು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಮನೆ ಮನೆಗೂ ತಲುಪಿಸುವ ಕಾಯಕದಲ್ಲಿ ನಿರತರಾಗಿದ್ದೇವೆ ಎಂದರು.
ಇದನ್ನೂ ಓದಿ:ಮಳೆಯನ್ನೂ ಲೆಕ್ಕಿಸದೆ ಮತಯಾಚಿಸಿದ ಸಪ್ತಗಿರಿಗೌಡ
ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ನವೀನ್​ ರೆಡ್ಡಿ ಮಾತನಾಡಿ, ಕ್ಷೇತ್ರದ ಮತದಾರರು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಮತಯಾಚನೆ ವೇಳೆಯಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ಮತ್ತೊಮ್ಮೆ ಕೃಷ್ಣಪ್ಪ ಅವರು ಜಯದ ನಗೆ ಬೀರಿ ಮಂತ್ರಿ ಸ್ಥಾನ ಅಲಂಕರಿಸಲಿದ್ದಾರೆ ಎಂದು ಭವಿಷ್ಯ ನುಡಿದರು.
ಇದನ್ನೂ ಓದಿ:ಅಭಿವೃದ್ಧಿಗಾಗಿ ಮತ ನೀಡಿ: ಮಂಜುಳಾ ಲಿಂಬಾವಳಿ ಮನವಿ
ಸ್ಥಳಿಯ ಮುಖಂಡರಾದ ರವಿ ರೆಡ್ಡಿ, ಅಂಬರೀಶ್​ ರೆಡ್ಡಿ, ಅರ್ಜುನ್​, ಅಪ್ಪಯ್ಯ, ಮಹೇಶ್​, ರವಿ, ಗುರುಮೂರ್ತಿ ರೆಡ್ಡಿ, ಶ್ರೀನಿವಾಸ್​ ಸ್ಥಳಿಯ ಮುಖಂಡರು ಹಾಗೂ ಕಾರ್ಯಕರ್ತರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × two =
Remember me
