ಮಹದೇವಪುರ:ಅಭಿವೃದ್ಧಿಯೇ ನನ್ನ ಮೂಲ ಮಂತ್ರವಾಗಿದ್ದು, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಬಿಜೆಪಿಗೆ ಮತ ನೀಡಿ, ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದು ಮಹದೇವಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಜುಳಾ ಅರವಿಂದ ಲಿಂಬಾವಳಿ ಹೇಳಿದರು.
ಕ್ಷೇತ್ರದ ದೊಡ್ಡನೆಕ್ಕುಂದಿ ಮತ್ತು ಎಇಸಿಎಸ್​ ವಾರ್ಡ್​ಗಳ ವ್ಯಾಪ್ತಿಯಲ್ಲಿ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಳೆದ 15 ವರ್ಷಗಳಿಂದ ನನ್ನ ಪತಿ ಅರವಿಂದ ಲಿಂಬಾವಳಿ ಕ್ಷೇತ್ರದಲ್ಲಿ ಕೆರೆ ಹಾಗೂ ರಾಜಕಾಲುವೆ, ರಸ್ತೆ, ಒಳ ಚರಂಡಿಗಳ ಅಭಿವೃದ್ಧಿ, ಆಟದ ಮೈದಾನ, ಸಮುದಾಯ ಭವನ ಮತ್ತು ಗ್ರಂಥಾಲಯಗಳು ನಿರ್ಮಾಣ ಸೇರಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವುದರಿಂದ ಕ್ಷೇತ್ರಾದ್ಯಂತ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಕ್ಷೇತ್ರದಲ್ಲಿ ನನ್ನ ಪತಿ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಕೆಲಸ ಮಾಡಲು ಈ ಬಾರಿ ಮಹಿಳಾ ಅಭ್ಯರ್ಥಿಯಾದ ನನಗೂ ಅವಕಾಶ ಕಲ್ಪಿಸಿಕೊಡಿ ಎಂದು ಮನವಿ ಮಾಡಿದರು.
ಇದನ್ನೂ ಓದಿ:ಮಳೆಯನ್ನೂ ಲೆಕ್ಕಿಸದೆ ಮತಯಾಚಿಸಿದ ಸಪ್ತಗಿರಿಗೌಡ
ಕ್ಷೇತ್ರದ ಅಶ್ವತ್ಥನಗರ, ಲಕ್ಷ್ಮೀ ನಾರಾಯಣಪುರ, ಎಇಸಿಎಸ್​ ಲೇಔಟ್​, ಕುಂದಲಹಳ್ಳಿ ಕಾಲನಿ, ಚಿನ್ನಪ್ಪನಹಳ್ಳಿ , ದೊಡ್ಡನೆಕ್ಕುಂದಿ ಎಕ್ಸ್​ಟೇನಷನ್​, ವಿನಾಯಕ ಲೇಔಟ್​, ದೊಡ್ಡನೆಕ್ಕುಂದಿ ಸರ್ಕಲ್​, ಕಾರ್ತಿಕ ನಗರ, ಗುರುರಾಜ ಲೇಔಟ್​, ಮಂಜುನಾಥ ನಗರ, ಸಂಜಯ ನಗರ, ರಾಮಾಂಜನೇಯ ಲೇಔಟ್​, ಆನಂದಪುರ ಸೇರಿ ವಿವಿಧ ಬಡಾವಣೆಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ಇದನ್ನೂ ಓದಿ:ಶಿವಮೊಗ್ಗ ಶಿಕಾರಿ, ಯಾರಿಗೆ ಜಯಭೇರಿ: ಯಡಿಯೂರಪ್ಪ ಸ್ಥಾನ ತುಂಬಲು ವಿಜಯೇಂದ್ರ ಸಜ್ಜು
ಕ್ಷೇತ್ರ ಬಿಜೆಪಿ ಅಧ್ಯ ಮನೋಹರ ರೆಡ್ಡಿ, ಮಾಜಿ ಪಾಲಿಕೆ ಸದಸ್ಯ ಎನ್​.ಆರ್​. ಶ್ರೀಧರ್​ ರೆಡ್ಡಿ, ಮುಖಂಡರಾದ ಮಿಥುನ್​ ರೆಡ್ಡಿ, ವೆಂಕಟಸ್ವಾಮಿರೆಡ್ಡಿ, ಜಿ. ಜಯದೇವರಾಜ್​, ಜಯರಾಮ್​ ರೆಡ್ಡಿ, ಶ್ರೀನಾಥ್​ ರೆಡ್ಡಿ, ಮುರಳಿರೆಡ್ಡಿ, ಸುನೀಲ್​ ಇತರರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
