ಬೆಂಗಳೂರು:ಸುರಿಯುವ ಮಳೆಯನ್ನೂ ಲೆಕ್ಕಿಸದೆ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಆರ್​. ಸಪ್ತಗಿರಿಗೌಡ ಬಿರುಸಿನ ಮತಯಾಚನೆ ಮಾಡಿ ಮತದಾರರ ಮನಗೆದ್ದರು. ಕ್ಷೇತ್ರ ವ್ಯಾಪ್ತಿಯ ಓಕಳಿಪುರ ವಾರ್ಡ್​ನ ರಾಮಚಂದ್ರಪುರ ಸೇರಿ ಹಲವೆಡೆ ಪಕ್ಷದ ಸಾವಿರಾರು ಕಾರ್ಯಕರ್ತರೊಂದಿಗೆ ಮತಯಾಚಿಸಿದರು.
ಬಿಬಿಎಂಪಿ ಮಾಜಿ ಸದಸ್ಯ ಶಿವಪ್ರಕಾಶ್​, ಬಿಜೆಪಿ ಮುಖಂಡರಾದ ಕಲಮುರಗ, ಅನಂತ್​ ಶಿವ ಸೇರಿ ಅನೇಕರು ಸಪ್ತಗಿರಿಗೌಡ ಪರ ಮಳೆಯಲ್ಲೇ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ಈ ವೇಳೆ ಕ್ಷೇತ್ರದ ಮತದಾರರು ಕೆಲವು ಸಮಸ್ಯೆಗಳನ್ನು ಮುಂದಿಟ್ಟು, ಪರಿಹರಿಸುವಂತೆ ಕೋರಿಕೊಂಡರು. ಇದಕ್ಕೆ ಸ್ಥಳದಲ್ಲೆ ಸ್ಪಂದಿಸಿದ ಸಪ್ತಗಿರಿಗೌಡ, ಕ್ಷೇತ್ರದ ಶಾಸಕನಾಗಿ ಜನತೆಯ ಬೇಡಿಕೆಗಳನ್ನು ಅರಿತಿದ್ದೇನೆ. ಜನರ ಕಲ್ಯಾಣಕ್ಕೆ ಆನೇಕ ಉತ್ತಮ ಕಾರ್ಯಕ್ರಮ ಮಾಡಲಾಗಿದೆ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯೇ ನನ್ನ ಧ್ಯೇಯ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರವು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತ ಬಂದಿದ್ದು, ಮತದಾರರು ಬಿಜೆಪಿ ಬೆಂಬಲಿಸಬೇಕು. ಡಬಲ್​ ಇಂಜಿನ್​ ಸರ್ಕಾರದಿಂದ ಡಬಲ್​ ಲಾಭ ಸಿಗಲಿದೆ. ಇಂತಹ ಅವಕಾಶವನ್ನು ಕಳೆದುಕೊಳ್ಳಬೇಡಿ ಎಂದು ಮನವಿ ಮಾಡಿದರು.
ಇದಕ್ಕೂ ಮುನ್ನ ಭಾನುವಾರ ತಡರಾತ್ರಿ ಕ್ಷೇತ್ರದ ವಿವಿಧೆಡೆ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ, ಜನತೆಯ ಸಮಸ್ಯೆಗಳನ್ನು ಆಲಿಸಿದರು. ಚಿಕ್ಕಪೇಟೆಯ ಕಿಲ್ಲಾರಿ ರಸ್ತೆ, ಆರ್​.ಟಿ. ಸ್ಟ್ರೀಟ್​, ಹಾಸ್ಪೆಟಲ್​ ರಸ್ತೆ ಮತ್ತಿತರರ ಕಡೆ ಭೇಟಿ ನೀಡಿ ಸಾರ್ವಜನಿಕರು ಮುಂದಿಟ್ಟ ಸಮಸ್ಯೆಗಳಿಗೆ ಸ್ಪಂದಿಸಿದ ಸಪ್ತಗಿರಿ ಗೌಡ, ವೈಜ್ಞಾನಿಕವಾಗಿ ರಾಜಕಾಲುವೆ ವಿಸ್ತರಣೆ, ಚರಂಡಿ ನಿರ್ಮಾಣ, ಸಮರ್ಪಕವಾಗಿ ನೀರು ಹರಿದು ಹೋಗುವಂತೆ ಮಾಡಲಾಗುವುದು. ನಿಮ್ಮ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.
ಬಿಬಿಎಂಪಿ ಮಾಜಿ ಸದಸ್ಯ ಗೋಪಾಲಕೃಷ್ಣ, ಮುಖಂಡ ಚಂದ್ರಶೇಖರ್​ ಮತ್ತಿತರರ ಜತೆ ೇತ್ರದ ಹಲವಾರು ಕಡೆ ಬಿರುಸಿನ ಪ್ರಚಾರ ನಡೆಸಿದ ಬಿಜೆಪಿ ಅಭ್ಯರ್ಥಿ, ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ. ಸುಳ್ಳು ಭರವಸೆಗಳನ್ನು ನೀಡಬೇಕಾದ ಅಗತ್ಯವಿಲ್ಲ. ನಿಮ್ಮ ಮನೆ ಮಗನಾಗಿ ಕೆಲಸ ಮಾಡಿಕೊಡುವೆ. ಗಾಂಧಿನಗರದಲ್ಲಿ ಇದೊಂದು ಬಾರಿ ಜನತೆ ಬಿಜೆಪಿಗೆ ಆಶೀರ್ವದಿಸಿ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 1 =
Remember me
