ಬೆಂಗಳೂರು:ಬಿಜೆಪಿ 23 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕಾಂಗ್ರೆಸ್​ನಿಂದ ವಲಸೆ ಬಂದಿದ್ದ ನಾಗರಾಜ ಛಬ್ಬಿ ಅವರಿಗೆ ಕಲಟಗಿಯಲ್ಲಿ ಮಣೆ ಹಾಕಿದೆ. ಆರೋಪಗಳ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ಶಿಕ್ಷಗೆ ಗುರಿಯಾಗಿದ್ದ ಹಾವೇರಿಯ ನೆಹರೂ ಓಲೇಕಾರ್​ ಹಾಗೂ ಮೂಡಿಗೆರೆಯ ಎಂ.ಪಿ. ಕುಮಾರಸ್ವಾಮಿ ಅವರಿಗೆ ಟಿಕೆಟ್​ ನಿರಾಕರಿಸಿದೆ.
ಚನ್ನಗಿರಿಯಲ್ಲಿ ಕಳಂಕಿತ ಮಾಡಾಳ್​ ವಿರುಪಾಕ್ಷಪ್ಪ ಬದಲು ಶಿವಕುಮಾರ್​ಗೆ ಹಾಗೂ ಬೈಂದೂರಿನಲ್ಲಿ ಸುಕುಮಾರ್​ ಶೆಟ್ಟಿ ಬದಲು ಗುರುರಾಜ್​ ಗಂಟಿಹೊಳೆ ಟಿಕೆಟ್​ ನೀಡಲಾಗಿದೆ. ಕಲಟಗಿಯಲ್ಲೂ ಛಬ್ಬಿಗೆ ಟಿಕೆಟ್​ ನೀಡಿದ್ದರಿಂದ ಹಾಲಿ ಶಾಸಕ ನಿಂಬಣ್ಣವರ್​ಗೆ ಟಿಕೆಟ್​ ಕೈತಪ್ಪಿದೆ. ಮಾಯಕೊಂಡದಲ್ಲಿ ಶಾಸಕ ನಿಂಗಣ್ಣ ಬದಲು ಬಸವರಾಜ ನಾಯ್ಕ್​ ಅವಕಾಶ ಪಡೆದುಕೊಂಡಿದ್ದಾರೆ. ದಾವಣಗೆರೆ ಉತ್ತರದಲ್ಲಿ ರವೀಂದ್ರನಾಥ ರಾಜಕೀಯ ನಿವೃತ್ತಿ ಘೋಷಿಸಿದ್ದರಿಂದ ಲೋಕಿಕೆರೆ ನಾಗರಾಜ್​ ಅವಕಾಶ ಪಡೆದಿದ್ದಾರೆ.ಬಿಜೆಪಿ ಮಂಗಳವಾರ 189 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿತ್ತು. ಜಗದೀಶ್​ ಶೆಟ್ಟರ್​ ಪ್ರತಿನಿಧಿಸುವ ಹುಬ್ಬಳ್ಳಿ&ಧಾರವಾಡ, ಕೆ.ಎಸ್​. ಈಶ್ವರಪ್ಪ& ಶಿವಮೊಗ್ಗ, ಅರವಿಂದ ಲಿಂಬಾವಳಿ ಅವರ ಮಹಾದೇವಪುರ ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿಗಳನ್ನು ಪ್ರಕಟಿಸಿಲ್ಲ. ಇನ್ನೂ 13 ಕ್ಷೇತ್ರಗಳಿಗೆ ಪ್ರಕಟಿಸುವುದು ಬಾಕಿ ಇದೆ.
ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರ ಸಂಬಂಧಿ ಸಂತೋಷ್​ ಅರಸೀಕೆರೆಯಿಂದ ಆಕಾಂಯಾಗಿದ್ದರು. ಆದರೆ ಟಿಕೆಟ್​ ನಿರಾಕರಿಸುವ ಮೂಲಕ ಶಾಕ್​ ನೀಡಿದೆ. ಅರಸೀಕೆರೆಗೆ ಜಿವಿ ಬಸವರಾಜು ಅವರಿಗೆ ಟಿಕೆಟ್​ ನೀಡಲಾಗಿದೆ. ಮಾಜಿ ಸಚಿವ ಎಸ್​.ಕೆ. ಬೆಳ್ಳುಬ್ಬಿ ಅವರಿಗೆ ಬಸವನ ಬಾಗೇವಾಡಿಯಿಂದ ಟಿಕೆಟ್​ ನೀಡಲಾಗಿದೆ. ಹರಪ್ಪನಹಳ್ಳಿಯಿಂದ ಮಾಜಿ ಸಚಿವ ಕರುಣಾಕರ ರೆಡ್ಡಿ ಅವರಿಗೆ ಮತ್ತೊಂದು ಅವಕಾಶ ನೀಡಲಾಗಿದೆ. ಕೆಜಿಎ್​ನಲ್ಲಿ ಮಾಜಿ ಶಾಸಕ ಸಂಪಂಗಿ ಅವರ ಪತ್ನಿ ಅಶ್ವಿನಿಗೆ ಅವಕಾಶ ನೀಡಲಾಗಿದೆ.
ದೇವರ ಹಿಪ್ಪರಗಿ& ಸೋಮನಗೌಡ ಪಾಟೀಲ್​ಬಸವನಬಾಗೇವಾಡಿ& ಎಸ್​.ಕೆ.ಬೆಳ್ಳುಬ್ಬಿಇಂಡಿ& ಕೆ.ಬಿರಾದಾರ್​ಗುರುಮಿಟ್ಕಲ್​& ಲಲಿತಾ ಅನಾಪುರ್​ಬೀದರ್​& ಈಶ್ವರ್​ ಸಿಂಗ್​ ಠಾಕೂರ್​ಭಾಲ್ಕಿ& ಪ್ರಕಾಶ್​ ಖಂಡ್ರೆಗಂಗಾವತಿ& ಪರಣ್ಣ ಮುನವಳ್ಳಿಕಲಟಗಿ& ನಾಗರಾಜ ಛಬ್ಬಿಹಾನಗಲ್​& ಶಿವರಾಜ್​ ಸಜ್ಜನರ್​ಹಾವೇರಿ& ಗವಿಸಿದ್ದಪ್ಪ ದ್ಯಾಮಣ್ಣವರ್​ಹರಪನಹಳ್ಳಿ& ಕರುಣಾಕರ ರೆಡ್ಡಿದಾವಣಗೆರೆ ಉತ್ತರ& ಲೋಕೀಕೆರೆ ನಾಗರಾಜ್​ದಾವಣಗೆರೆ ದಣ& ಅಜಯ್​ ಕುಮಾರ್​ಮಾಯಕೊಂಡ& ಬಸವರಾಜ ನಾಯಕ್​ಚನ್ನಗಿರಿ& ಶಿವಕುಮಾರ್​ಬೈಂದೂರು& ಗುರುರಾಜ್​ ಗಂಟಿಹೊಳೆಮೂಡಿಗೆರೆ& ದೀಪಕ್​ ದೊಡ್ಡಯ್ಯಗುಬ್ಬಿ& ಎಸ್​.ಡಿ.ದಿಲೀಪ್​ ಕುಮಾರ್​ಶಿಡ್ಲಟ್ಟ& ರಾಮಚಂದ್ರ ಗೌಡಕೋಲಾರ ಗೋಲ್ಡ್​ ಫಿಲ್ಡ್ಡ್​& ಅಶ್ವಿನಿ ಸಂಪಂಗಿಶ್ರವಣಬೆಳಗೊಳ& ಚಿದಾನಂದಅರಸೀಕೆರೆ& ಜಿ.ವಿ.ಬಸವರಾಜುಹೆಗ್ಗಡದೇವನಕೋಟೆ& ಕೃಷ್ಣಾ ನಾಯ್ಕ್​
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 10 =
Remember me
