ಬೆಂಗಳೂರು:ವಿಧಾನಸಭೆ ಕಲಾಪದಲ್ಲಿ ಹಿರಿಯ ಶಾಸಕ ರಮೇಶ್​ಕುಮಾರ್ ಮತ್ತು ಸಚಿವ ಡಾ.ಕೆ.ಸುಧಾಕರ್ ನಡುವಿನ ಬೈಗುಳದ ವಿಷಯ ಬುಧವಾರವೂ ಪ್ರತಿಧ್ವನಿಸಿ, ಆಡಳಿತ ಹಾಗೂ ಪ್ರತಿಪಕ್ಷಗಳು ಪ್ರತಿಷ್ಠೆಗೆ ಅಂಟಿಕೊಂಡಿದ್ದರಿಂದ ಇಡೀ ದಿನದ ಕಲಾಪ ಬಲಿಯಾಯಿತು.
ಮೈತ್ರಿ ಸರ್ಕಾರದ ಅವಧಿಯಲ್ಲಿ 17 ಶಾಸಕರನ್ನು ಅನರ್ಹಗೊಳಿಸದ ಪ್ರಕರಣ ವಿಧಾನಸಭೆಯಲ್ಲಿ ಮಂಗಳವಾರ ಕೋಲಾಹಲ ಸೃಷ್ಟಿಸಿತ್ತು. ಬುಧವಾರ ಕಲಾಪ ಆರಂಭಗೊಳ್ಳುತ್ತಿದ್ದಂತೆಯೇ ಬಿಜೆಪಿ ಸದಸ್ಯರು ರಮೇಶ್​ಕುಮಾರ್ ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆ. ಅವರನ್ನು ಸಸ್ಪೆಂಡ್ ಮಾಡಬೇಕೆಂದು ಪಟ್ಟು ಹಿಡಿದ ಹಿನ್ನೆಲೆ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ವಾಗ್ವಾದ ತಾರಕಕ್ಕೇರಿ ಕೋಲಾಹಲದ ವಾತಾವರಣ ನಿರ್ವಿುಸಿತ್ತು. ಆಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ನಿಮ್ಮನ್ನು ನನ್ನ ಕೈಯಲಿ ಸಮಾಧಾನ ಪಡಿಸಲು ಸಾಧ್ಯವಾಗುವುದಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿ ಸದನವನ್ನು ಮುಂದೂಡಿದರು.
ಮಧ್ಯಾಹ್ನ ಕಲಾಪ ಶುರುವಾಗುತ್ತಿದ್ದಂತೆಯೇ ಸ್ಪೀಕರ್ ಕಾಗೇರಿ, ಎರಡು ಹಕ್ಕುಚ್ಯುತಿ ಸೂಚನೆ ಬಂದಿವೆ. ಸಿದ್ದರಾಮಯ್ಯ ಮಾತನಾಡಲಿ ಎಂದರು. ಅದಕ್ಕೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈ ನಡುವೆ ಸಚಿವ ಸುಧಾಕರ್, ಸಂವಿಧಾನದ ಮೇಲಿನ ನನ್ನ ಚರ್ಚೆ ಕೊನೆಯಾಗಿಲ್ಲ. ನನ್ನ ಮಾತು ಮುಗಿದ ಮೇಲೆ ತೆಗೆದುಕೊಳ್ಳಲಿ. ನನ್ನ ಅಭಿಪ್ರಾಯ ಕೇಳದೆ ಹಕ್ಕುಚ್ಯುತಿ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಅಕ್ಷೇಪ ಎತ್ತಿದರು. ಆಗ ಸಿದ್ದರಾಮಯ್ಯ, ಇವರೇನು ಮಂತ್ರಿಗಳಾ? ಇದು ಸರ್ಕಾರದ ನಡವಳಿಕೆಯಾ? ಎಂದು ಕೆರಳಿದರು.
ಮಧ್ಯ ಪ್ರವೇಶಿಸಿದ ಬಿಜೆಪಿಯ ಸುನಿಲ್​ಕುಮಾರ್, ರಮೇಶ್​ಕುಮಾರ್ ಹಿಟ್ ಆಂಡ್ ರನ್ ಕೇಸ್ ಎಂದು ಟೀಕಿಸಿದರು. ಆಗ ಎರಡೂ ಪಕ್ಷಗಳ ಸದಸ್ಯರು ಗದ್ದಲ ಆರಂಭಿಸಿದಾಗ ಸಭೆಯನ್ನು ಎರಡನೇ ಬಾರಿಯೂ ಮುಂದೂಡಲಾಯಿತು.
ಬಿಜೆಪಿ ಪಟ್ಟು, ಸ್ಪೀಕರ್​ಗೆ ಇಕ್ಕಟ್ಟು
ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿಯ ಕೆ.ಎಸ್.ಈಶ್ವರಪ್ಪ, ರಮೇಶ್​ಕುಮಾರ್ ಆಡಿದ ಮಾತಿನಿಂದ ಸದಸ್ಯರಿಗೆ ಅವಮಾನವಾಗಿದೆ. ಅವರನ್ನು ಮೊದಲು ಸಸ್ಪಂಡ್ ಮಾಡಿ ಎಂದು ಆಗ್ರಹಿಸಿದರು. ಇದಕ್ಕೆ ದನಿಗೂಡಿಸಿದ ಸಚಿವ ಸುಧಾಕರ್, ನನ್ನನ್ನು ಕುರಿತು ಆಡಿರುವ ಮಾತು ಕೇಳಿಸಿಕೊಂಡವರು ಹೇಳಿ. ಅವರು ಬಳಸಿದ ಪದ ಸರಿ ಇದೆಯಾ ಎಂದು ಪ್ರಶ್ನಿಸಿದರು. ಆಗ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸುಧಾಕರ್ ಮಾತುಗಳಿಂದ ಹಕ್ಕುಚ್ಯುತಿಯಾಗಿದೆ. ನನಗೆ ಮೊದಲು ಮಾತನಾಡಲು ಅವಕಾಶ ಕೊಡಿ. ತರುವಾಯ ಅವರೂ ಮಾತನಾಡಲಿ ಎಂದರು. ಈ ಸಂದರ್ಭ ಆಡಳಿತ ಮತ್ತು ಪ್ರತಿಪಕ್ಷಗಳ ಶಾಸಕರು ಕೂಗಾಡಿದ್ದರಿಂದ ಯಾರು ಏನು ಹೇಳುತ್ತಿದ್ದಾರೆ ಎಂಬುದು ಅರ್ಥವಾಗಲಿಲ್ಲ.
ತೀವ್ರ ಶಿಕ್ಷೆಗೆ ಸೂಚನೆ
ಎಲ್ಲ ಬೆಳವಣಿಗೆಗಳ ಮಧ್ಯೆ ಕೆಲ ಸಚಿವರು ನಿಯಮ 363ರ ಅಡಿ ರಮೇಶ್​ಕುಮಾರ್​ಗೆ ತೀವ್ರ ಶಿಕ್ಷೆ ವಿಧಿಸಬೇಕು. ಅಧಿವೇಶನ ಮುಗಿಯುವವರೆಗೆ ಅಮಾನತುಗೊಳಿಸು ವಂತೆ ಸೂಚನಾ ಪತ್ರ ನೀಡಿದ್ದಾರೆ.
ಫಲಪ್ರದವಾಗದ ಸಂಧಾನ
ಸಭೆ ಮುಂದೂಡಿದ ವೇಳೆ ಸ್ಪೀಕರ್ ಅವರು ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕರ ಜತೆ ಪ್ರತ್ಯೇಕ ಸಭೆ ನಡೆಸಿದರು. ಮತ್ತೆ ಸಭೆ ಆರಂಭಗೊಂಡಾಗಲೂ ಅದೇ ಗದ್ದಲ ಮುಂದುವರಿಯಿತು. ಸಚಿವರಾದ ಮಾಧುಸ್ವಾಮಿ, ಜಗದೀಶ ಶೆಟ್ಟರ್ ಅವರು ಸುಧಾಕರ್ ಪರ ನಿಂತರು. ಆಡಳಿತ ಪಕ್ಷದ ಸದಸ್ಯರು ಸಿದ್ದರಾಮಯ್ಯ ಮಾತಿಗೆ ಅಡ್ಡಿಪಡಿಸಿದರು. ಇದರಿಂದ ಸದನವನ್ನು ಗುರುವಾರಕ್ಕೆ ಮುಂದೂಡಲಾಯಿತು.
ಸರ್ಕಾರದ ಆದೇಶ ಪಾಲಿಸದೆ ಮೊಂಡಾಟ ಮಾಡುವ ಶಾಲೆಗಳ ವಿರುದ್ಧ ಕ್ರಮದ ಎಚ್ಚರಿಕೆ: ಮಕ್ಕಳ ಹಿತಕ್ಕಿಂತ ಶಾಲೆಯ ಪ್ರತಿಷ್ಠೆ ಮುಖ್ಯವೇ?- ಶಿಕ್ಷಣ ಸಚಿವರ ಪ್ರಶ್ನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + twenty =
Remember me
